ಬನಹಟ್ಟಿಯಲ್ಲಿ ಶ್ರೀ ಹಿರೇಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡ ತಾಲ್ಲೂಕಿನ ವಿವಿಧ ದೇವಸ್ಥಾನಗಳಿಗೆ ಕಸದ ಬುಟ್ಟಿ ವಿತರಣೆ ಮಾಡಲಾಯಿತು. 
ಸ್ವಚ್ಛತೆ ಇರುವಲ್ಲಿ ದೇವರು ನೆಲೆಸುತ್ತಾನೆ
ರಬಕವಿ-ಬನಹಟ್ಟಿ,ಜೂ16: ಸ್ವಚ್ಛತೆ ಇದ್ದಲ್ಲಿ ದೇವರು ನೆಲೆಸುತ್ತಾನೆ. ನಿಮ್ಮ ಸುತ್ತಮುತ್ತಲೀನ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳಿ ಹಾಗೂ ದೇವಸ್ಥಾನಗಳನ್ನು ಸ್ವಚ್ಛವಾಗಿಡಿ ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 
ಅವರು ಶನಿವಾರ ನಗರದ ಶ್ರೀ ಹಿರೇಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡ ತಾಲ್ಲೂಕಿನ ವಿವಿಧ ದೇವಸ್ಥಾನಗಳಿಗೆ ಕಸದ ಬುಟ್ಟಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಸಮಾಜಕ್ಕೆ ಒಳಿತನ್ನು ಮಾಡುವ ಅನೇಕ ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಯಶಸ್ವಿಯಾಗಿ ಕಾರ್ಯಾಚರಣೆಗೆ ತರುತ್ತಿರುವುದು ನಿಜಕ್ಕೂ ಶ್ಲ್ಯಾಘನೀಯ. ಅಲ್ಲದೇ ಮಹಿಳೆಯರ ಆರ್ಥಿಕ ಬಲ ವರ್ಧನೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಜನರ ಮನದಾಳದಲ್ಲಿ ಬೇರುರಿದೆ ಎಂದು ಹಿರೇಮಠದ ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ನಗರದ ಹಿರಿಯ ವ್ಯಾಪಾರಸ್ಥರಾದ ಸುರೇಶ ಚಿಂಡಕ ಮತ್ತು ಮಂಗಳವಾರ ಪೇಟೆ ದೈವ ಮಂಡಳಿಯ ಚೇರಮನ್ನರಾದ ಶ್ರೀಶೈಲ ಧಬಾಡಿ ಮಾತನಾಡಿದರು. 
ಸಂಸ್ಥೆಯ ಜಮಖಂಡಿಯ ಆಂತರಿಕ ಲೆಕ್ಕ ಪರಿಶೋಧಕರಾದ  ಬಸವಣೆಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿವಕುಮಾರ ಜುಂಜಪ್ಪನವರ ನಿರೂಪಿಸಿದರು. ಕೊನೆಗೆ ಶಿವಕಲಾ ಎಚ್. ವಂದಿಸಿದರು. 
ಸಮಾರಂಭದಲ್ಲಿ ಈರಪ್ಪ ಹಿಪ್ಪರಗಿ, ಕಲ್ಲಪ್ಪ ಹೊರಟ್ಟಿ, ರಾಜಶೇಖರ ಮಾಲಾಪೂರ, ಕಿರಣ ಆಳಗಿ, ಶಶಿಕಾಂತ ಹುನ್ನೂರ, ಶಿವಶಂಕರ ಬಾಡಗಿ, ಸದಾಶಿವ ತಟಕೋಟಿ ಸೇರಿದಂತೆ ಅನೇಕರು ಇದ್ದರು. 


       - FOR ADVERTISEMENT CONTACT -
                         - 9902523698 -