ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿರುವ ರಬಕವಿಯ ಬಿಸಿಎಂ ಹಾಸ್ಟೇಲ್‍ಗೆ ಭೆಟ್ಟಿ ನೀಡಿ ವೀಕ್ಷಣೆ ಮಾಡಿದ ಶಾಸಕ ಸಿದ್ದು ಸವದಿ.
ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ: ಸವದಿ
ರಬಕವಿ-ಬನಹಟ್ಟಿ,ಜೂ28: ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾಜಕ ಅಂತರ, ಸ್ಯಾನಿಟೈಜರ್ ಹಾಗೂ ಮಾಸ್ಕ್ ಬಳಕೆಯನ್ನು ತಪ್ಪದೇ ಮಾಡಬೇಕು. ಪ್ರತಿದಿನ ಎರಡು ಬಾರಿ ಸ್ಯಾನಿಟೈಜರ್ ಮಾಡಬೇಕು ಒಟ್ಟಾರೆ ಕ್ವಾರಂಟೈನ್ ಕೆಂದ್ರಗಳನ್ನು ಸ್ವಚ್ಛತೆಯಿಂದ ನೋಡಿಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಅವರು ರಬಕವಿಯ ಕ್ವಾರಂಟೈನ್ ಕೇಂದ್ರಕ್ಕೆ ತಾಲ್ಲೂಕು ಅಧಿಕಾರಿಗಳೊಂದಿಗೆ ಬೇಟ್ಟಿ ನೀಡಿ ವಿಕ್ಷಣೆ ನಡೆಸಿ ಮಾತನಾಡಿದರು. ಶೌಚಾಲಯಗಳ ಸ್ವಚ್ಛತೆ, ನೀರಿನ ವ್ಯವಸ್ಥೆ ಸೇರಿದಂತೆ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ನಗರಸಭೆ ಅಭಿಯಂತರರಾದ ಬಸವರಾಜ ಶರಣಪ್ಪನವರ ಸೇರಿದಂತೆ ಅನೇಕರು ಇದ್ದರು.

Social Plugin