ಮಹಾಲಿಂಗಪುರ ನಗರದಲ್ಲಿ ಭಾರಿ ಮಳೆ ಗಾಳಿಗೆ ಮನೆಗಳು ಬಿದ್ದು ಹೋಗಿದ್ದ ವಿಷಯವನ್ನು ಕೇಳಿದ ರಬಕವಿಯ ಖ್ಯಾತ ವೈದ್ಯರು ಡಾ.ಪದ್ಮಜಿತ್ ನಾಡಗೌಡಪಾಟೀಲ್ ರವರು ತಕ್ಷಣವೇ ನಗರಕ್ಕೆ ಧಾವಿಸಿ ಬಿದ್ದು ಹೋಗಿರುವ ಮನೆಗಳನ್ನು ವೀಕ್ಷಿಸಿ ಬರೀ ಮಾತಿನ ಸಾಂತ್ವನ ಹಾಗೂ ಆಶ್ವಾಸನೆ ಕೊಡದೆ ತಕ್ಷಣವೇ ಸುಮಾರು 26 ಕುಟುಂಬಕ್ಕೆ ಸ್ಥಳದಲ್ಲಿಯೇ ತಲಾ 5000/ರೂಪಾಯಿ ಹಣವನ್ನು ಬಡ ಕುಟುಂಬಗಳ ಮನೆಗೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಸದಾ ಬಡವರ ಹಾಗೂ ಜನಪರ ಕಾಳಜಿಯಲ್ಲಿ ಇವರ ಈ ಸೇವೆಗೆ ಜನ ಅವರಿಗೆ ಸನ್ಮಾನಿಸಿ ಕೃಜ್ಞತೆ ಸಲ್ಲಿಸಿದರು.
- ಜಾಹೀರಾತುಗಳಿಗೆ ಸಂಪರ್ಕಿಸಿ : +91 9902523698

Social Plugin