👆ಈ ಮೇಲಿನ ವಿಡಿಯೋ ತಪ್ಪದೇ ವೀಕ್ಷಿಸಿ
ವರದಿ : ಕೆ.ಎಸ್.ರಂಗಸ್ವಾಮಿ
ತೇರದಾಳ : ಪಟ್ಟಣದ ಐತಿಹಾಸಿಕ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ಬಾಗಲಕೋಟೆಯವರಿಂದ ಸನ್ 2017 -18 ನೇ ಸಾಲಿನ ಬಂಡವಾಳ ವೆಚ್ಚಗಳ ಯೋಜನೆಯಲ್ಲಿ ಸುಮಾರು 50 ಲಕ್ಷ ಅಂದಾಜು ಮೊತ್ತದಲ್ಲಿ ಅನುಷ್ಥಾನ ಸಂಸ್ಥೆ ಕೆ.ಆರ್. ಐ.ಡಿ.ಎಲ್ ಜಮಖಂಡಿಯವರ ನೇತೃತ್ವದಲ್ಲಿ ಯಾತ್ರಿನಿವಾಸ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಮಾರಂಭವನ್ನು ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಹಾಗೂ ಶ್ರೀ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಖ್ಯಾತ ಉದ್ಯಮಿ ದಾರರಾದ ಜಗದೀಶ ಗುಡಗುಂಟಿ ಅವರು ಮಾತನಾಡಿ ಇದೊಂದು ಐತಿಹಾಸಿಕ ಕ್ಷೇತ್ರವಾಗಿದ್ದರಿಂದ ಈಗ ಇಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನವು ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಮಾಡಲಾಗುತ್ತಿದ. ಹೀಗಾಗಿ ಈ ಕಟ್ಟಡವು ಈ ದೇಶದಲ್ಲಿಯೇ ಐತಿಹಾಸಿಕ ಆಕರ್ಷಣೀಯ ಧಾರ್ಮಿಕ ಸ್ಥಳವಾಗುವುದರಲ್ಲಿ ಎರಡು ಮಾತಿಲ್ಲ ಎಂದರು. ಹೀಗಾಗಿ ಈ ದೇವಸ್ಥಾನದ ಆವರಣದಲ್ಲಿಯೇ ಭಕ್ತಸಮೂಹದವರಿಗೆ ನಿರ್ಮಾಣವಾಗುತ್ತಿರುವ ಈ ಯಾತ್ರಿನಿವಾಸದ ಕಟ್ಟಡವೂ ಸಹ ತುಂಬಾ ಗುಣಮಟ್ಟದ ಹಾಗೂ ಉತ್ಕೃಷ್ಟ ರೀತಿಯಲ್ಲಿ ನಿರ್ಮಾಣವಾಗಬೇಕು ಎಂದು ಸಮಾರಂಭದಲ್ಲಿ ಹಾಜರಿದ್ದ ಲ್ಯಾಂಡ್ ಆರ್ಮಿ ಇಲಾಖೆಯ ಅಧಿಕಾರಿಗಳಿಗೆ ವಿನಂತಿ ಮಾಡಿಕೊಂಡರು. ಅಲ್ಲದೆ ಧನಸಹಾಯ ಮಾಡಿದ ಸರಕಾರಕ್ಕೂ ಸಹ ಅಭಿನಂದನೆ ಸಲ್ಲಿಸಿದರು. ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಪ್ರಭುಲಿಂಗೇಶ್ವರರ ಈ ಐತಿಹಾಸಿಕ ದೇವಸ್ಥಾನವು ಸರಕಾರದ ಯಾವುದೇ ರೀತಿಯ ಅನುದಾನವನ್ನು ಪಡೆಯದೇ ಕೇವಲ ಭಕ್ತ ಸಮೂಹ ನೀಡಿದ ಕಾಣಿಕೆಯಿಂದ ನಿರ್ಮಾಣವಾಗುತ್ತಿರುವುದು ಸಹ ಇತಿಹಾಸವೇ ಎಂದು ಹೇಳಿದರು. ಈಗಾಗಲೇ ಈ ದೇವಸ್ಥಾನದ ನಿರ್ಮಾಣಕಾರ್ಯ ಕೊನೆಹಂತದಲ್ಲಿದ್ದು ಕಾರಣ ಅಳಿಲು ಸೇವೆ ನೀಡಬಯಸುವ ಭಕ್ತಾದಿಗಳು ಈ ಸಂದರ್ಭದಲ್ಲಿಯೇ ತಮ್ಮ ಕಾಣಿಕೆಯನ್ನು ಸಮರ್ಪಿಸಿ ಪ್ರಭು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರಲ್ಲದೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸಿದ್ದು ಸವದಿ ಅವರಿಗೂ ಸಹ ಭಕ್ತಿಯ ಕಾಣಿಕೆಯನ್ನು ಸಮರ್ಪಿಸಲು ವಿನಂತಿಸಿದರು.
ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರು ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಅವರು ಐತಿಹಾಸಿಕ ದೇವಸ್ಥಾನದ ನಿರ್ಮಾಣದ ಹೊಣೆಹೊತ್ತು ಅತಿ ಭಕ್ತಿಯಿಂದ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಉದ್ಯಮಿದಾರರಾದ ಜಗದೀಶ ಗುಡಗುಂಟಿ ಅವರ ಸೇವೆ ವರ್ಣನಾತೀತವಾಗಿದೆ. ಅವರ ಮುಂದಾಳತ್ವದಲ್ಲಿ ಹಾಗೂ ಭಕ್ತಸಮೂಹದ ಕೊಡುಗೆಯಿಂದ ಈ ಒಂದು ದೇವಸ್ಥಾನಕ್ಕೆ ಐತಿಹಾಸಿಕ ಹೊಸ ಕಳೆ ಮೂಡಿಬರುತ್ತಲಿದೆ ಎಂದರಲ್ಲದೆ ಅವರ ಈ ನಿಶ್ವಾರ್ಥ ಸೇವೆಯನ್ನು ತುಂಬು ಹೃದಯದಿಂದ ಕೊಂಡಾಡಿದರು. ಈ ದೇವಸ್ಥಾನ ಕಟ್ಟಡ ಕಾಮಗಾರಿಗೆ ತಮ್ಮ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿಗಳಷ್ಟು ದೇಣಿಗೆಯನ್ನು ನೀಡುವುದಾಗಿ ತಿಳಿಸಿದರು. ಅಲ್ಲದೆ ಯಾತ್ರೆ ನಿವಾಸಕ್ಕೆ ಸರಕಾರದಿಂದ ಇನ್ನೂ 50 ಲಕ್ಷದಿಂದ ಒಂದು ಕೋಟಿ ವರೆಗೆ ಸಹಾಯಧನವನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಮಾರಂಭದ ಕಾರ್ಯಕ್ರಮವು ದೇವಸ್ಥಾನದ ಹಿರಿಯ ಅರ್ಚಕರಾದ ಶ್ರೀ ಮಗಯ್ಯ ತೆಳಗಿನಮನಿ ಪೂಜೆ ಮಾಡಿ ನೆರವೇರಿಸಿಕೊಟ್ಟರು. ಪಟ್ಟಣದ ಹಿರಿಯರಾದ ದೇವಲ ದೇಸಾಯಿ, ನಾಗಪ್ಪ ಸನದಿ, ಅಲ್ಲಯ್ಯ ದೊಡ್ಡಮನಿ ಪರಯ್ಯ ಮೇಲಿನಮನಿ, ಶ್ರೀಶೈಲ ತೆಳಗಿನಮನಿ, ಸಿದ್ದು ಅಮ್ಮಣಗಿ, ಶ್ರೀಶೈಲ ಬಾವಿ, ಈಶ್ವರ ಬ್ರಂಗಿ, ಅಪ್ಪು ಮಂಗಸೂಳಿ, ರಾಮಣ್ಣ ಹಿಡಕಲ್, ಪ್ರಕಾಶ ಕಾಲತಿಪ್ಪಿ, ಪ್ರಕಾಶ ಚಿಂಚಕಂಡಿ, ಅಜೀತ್ ದೇಸಾಯಿ, ಸುರೇಶ್ ರೇಣಕೆ, ನಿಂಗಪ್ಪ ಮಾನಾಗಾವಿ,AEE ಬಿ. ಆರ್. ಗಾಣಿಗೇರ ಮುಂತಾದವರಿದ್ದರು.
- ಜಾಹೀರಾತುಗಳಿಗಾಗಿ ಸಂಪರ್ಕಿಸಿ -
+91 9902523698

Social Plugin