ರಬಕವಿಯಲ್ಲಿ ಡಾ. ಪದ್ಮಜೀತ ನಾಡಗೌಡಾ ಪಾಟೀಲರಿಂದ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿದರು.
ಕೊರೊನಾ ವಾರಿಯರ್ ಆದ ನೂರಾರು ಆಶಾ ಕಾರ್ಯಕರ್ತರಿಗೆ ಸನ್ಮಾನ
ರಬಕವಿ-ಬನಹಟ್ಟಿ,ಜೂ14: ದೇಶದ ಗಡಿ ಕಾಯುವ ಸೈನಿಕರಂತೆ ಮತ್ತು ತಮ್ಮ ಪ್ರಾಣ ಬದಿಗಿಟ್ಟು ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟಲು ಕಾರ್ಯನಿರ್ವಹಿಸುತ್ತರುವ ರಬಕವಿ-ಬನಹಟ್ಟಿ ತಾಲೂಕಿನ ನೂರಾರು ಆಶಾ ಕಾರ್ಯಕರ್ತೆಯರ ಕಾರ್ಯ ಸಮಾಜವೇ ಮೆಚ್ಚುವಂತದ್ದಾಗಿದೆ ಎಂದು ಡಾ. ಪದ್ಮಜೀತ ನಾಡಗೌಡ ಪಾಟೀಲ ಹೇಳಿದರು.
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಡಾ. ಪದ್ಮಜೀತ ನಾಡಗೌಡ ಪಾಟೀಲ ಫೌಂಡೇಶನ್‍ನಿಂದ ಆಯೋಜಿಸಲಾದ ಆಶಾ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಆಶಾ ಕಾರ್ಯಕರ್ತೆಯರು ಕೊರೊನಾ ಮಹಾಮಾರಿ ಸೋಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವದರಿಂದ ನಿಜವಾದ ಯೋಧರಾಗಿ ದೇಶದ ಆಂತರಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆಂದರು.
ಶಂಕರ ಸೊರಗಾಂವಿ ಮಾತನಾಡಿ, ಜೀವಮಾನದ ಮಾರಕ ರೋಗವೆಂದೇ ಗುರ್ತಿಸಿಕೊಂಡ ಕೊರೊನಾ ವೈರಸ್ ವಿರುದ್ಧ ಸವಾಲೊಡ್ಡಿದ ಆಶಾ ಕಾರ್ಯಕರ್ತರು ತಮ್ಮ ಕುಟುಂಬವನ್ನೇ ತೊರೆದು ಹೋರಾಟಕ್ಕಿಳಿದಿರುವದು ನಿಜಕ್ಕೂ ಮಾನವೀಯ ಮೌಲ್ಯಗಳನ್ನು ತೋರಿಸುತ್ತದೆ. ಇವರ ಸೇವೆ ಮತ್ತಷ್ಟು ಅವಶ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪ್ಪಾಸಾಹೇಬ ನಾಡಗೌಡ ಪಾಟೀಲ ವಹಿಸಿದ್ದರು. ಅತಿಥಿಗಳಾಗಿ ಯಲ್ಲನಗೌಡ ಪಾಟೀಲ, ನೀಲಕಂಠ ಮುತ್ತೂರ, ದುಂಡಪ್ಪ ಕರಿಗಾರ, ರವಿ ಬಾಡಗಿ, ಶಾಂತಾ ಮಂಡಿ, ದಾನಮ್ಮ ಬಾಗಿಲಮನಿ, ಸವಿತಾ ಕುಂಬಾರ, ಚಿದಾನಂದ ಗಾಳಿ, ಗುರುನಾಥ ಬಕರೆ ಆಗಮಿಸಿದ್ದರು.
ಇದೇ ಸಂದರ್ಭ ಕುಮಾರ ಬಿಳ್ಳೂರ, ಸಂಜಯ ಜೋತಾವರ, ಗಂಗಪ್ಪ ಮಂಟೂರ, ರಾಚು ಕಲಾದಗಿ, ಮಾಳು ಹಿಪ್ಪರಗಿ, ಸಾರವಾಡ, ಸಂಜು ಅಮ್ಮಣಗಿ, ಜಿನ್ನಪ್ಪ ಪಡ್ನಾಡ ಸೇರಿದಂತೆ ಅನೇಕರಿದ್ದರು.

- FOR ADVERTISEMENT CONTACT -
                   - 9902523698 -