ಕ್ವಾರಂಟೈನ್‍ನಲ್ಲಿದ್ದವನಿಗೆ ಪಾಜಿಟಿವ್
ರಬಕವಿ-ಬನಹಟ್ಟಿ,ಜೂ14: ಮುಂಬಯಿಯಿಂದ ದಿ.6 ರಂದು ಆಗಮಿಸಿದ್ದ ವ್ಯಕ್ತಿಗೆ ಕೊರೊನಾ ಪಾಜಿಟಿವ್ ಸೊಂಕು ತಗುಲಿದೆ.
ರಬಕವಿಯ ಬಿಸಿಎಂ ಹಾಸ್ಟೇಲ್‍ನಲ್ಲಿರಿಸಲಾಗಿದ್ದ ಈ ವ್ಯಕ್ತಿಯ ಗಂಟಲು ದ್ರವ ಹಾಗು ರಕ್ತದ ಮಾದರಿಯ ಸ್ವ್ಯಾಬ್ ಪರೀಕ್ಷೆಯನ್ನು ದಿ. 10 ರಂದು ಕಳಿಸಲಾಗಿತ್ತು.
ರವಿವಾರ ಈ ವ್ಯಕ್ತಿಗೆ ಕೊರೊನಾ ಪಾಜಿಟಿವ್ ಖಚಿತವಾಗಿ ದೃಢಪಟ್ಟ ಹಿನ್ನಲೆ ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ಈ ವ್ಯಕ್ತಿಯನ್ನು ರವಾನಿಸಲಾಗಿದೆ.

Social Plugin