ಬಾಗಲಕೋಟೆ ಜಿಲ್ಲೆ ಬನಹಟ್ಟಿ ನಗರದಲ್ಲಿ ಕಳೆದ 20 ವರ್ಷಗಳಿಂದ ಮಹಿಳೆಯರಿಗೆ ಉಚಿತವಾಗಿ ಯೋಗಾಭ್ಯಾಸ ನಡೆಸುತ್ತಿರುವದು.
ದಿ. 21 ರಂದು ವಿಶ್ವ ಯೋಗ ದಿನ ನಿಮಿತ್ತ ಕಿರು ಲೇಖನ
ಯೋಗದಿಂದ ಬದುಕು ಸುಂದರಗೊಳಿಸಿಕೊಳ್ಳುತ್ತಿರುವ ವನಿತೆಯರು
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಜೂ20: ಶರೀರ ಯಾರು ತಾನೆ ಆರೋಗ್ಯವಾಗಿರಿಸಿಕೊಳ್ಳಬೇಕಿನಿಸುವದಿಲ್ಲ. ಆರೋಗ್ಯವಂತ ಶರೀರಕ್ಕೆ `ಯೋಗ’ವೆಂಬ ಮಂತ್ರ ಅತ್ಯಮೂಲ್ಯವಾಗಿದೆ. ಯೋಗದಿಂದ ಶರೀರದ ಎಲ್ಲ ಅಂಗಗಳನ್ನೂ ಪರಿಶುದ್ಧ ಹಾಗು ಕಲ್ಮಶರಹಿತವಾಗಿ ಚೈತನ್ಯದ ಬದುಕು ಸಾಗಿಸುವಲ್ಲಿ ಕಾರಣವಾಗಿದೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲೊಂದು `ಯೋಗಾಯೋಗ’ವೆಂಬ ಶಾಲೆಯಲ್ಲಿ ಹಲವಾರು ವನಿತೆಯರು ಪ್ರತಿ ದಿನ ಸಂಜೆ ಒಂದು ಗಂಟೆ ಯೋಗಾಭ್ಯಾಸದಲ್ಲಿ ತೊಡಗಿ ದೈನಂದಿನ ಚಟುವಟಿಕೆಗಳಲ್ಲಿ ಅತ್ಯಂತ ಹುಮ್ಮಸ್ಸಿನಿಂದ ಸಾಗಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಇಲ್ಲಿನ ಮಂಗಳವಾರ ಪೇಟೆಯ ಸಮುದಾಯ ಭವನವೊಂದರಲ್ಲಿ ನಿವೃತ್ತ ದೈಹಿಕ ಶಿಕ್ಷಕ ಎ.ಆರ್. ವಿಭೂತಿಯವರ ಮಾರ್ಗದರ್ಶನದಲ್ಲಿ ನಗರದ ನೂರಾರು ಮಹಿಳೆಯರು ಯೋಗದಲ್ಲಿ ಪಾಲ್ಗೊಂಡು ಇಂದಿಗೂ ತಮ್ಮ ದೈನಂದಿನ ಕೆಲಸದಲ್ಲಿ ಆಲಸ್ಯತನವೆಂಬುದನ್ನು ಮರೆತು ಸದಾ ಹಸನ್ಮುಖಿಯೊಂದಿಗೆ ಅಲ್ಲದೆ ಆರೋಗ್ಯವಂತ ಬದುಕಿನೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
ಕಳೆದ 24 ವರ್ಷಗಳಿಂದ `ಯೋಗಾಯೋಗ’ವೆಂಬ ನಾಮದಡಿ ಉಚಿತವಾಗಿ ಪ್ರತಿ ದಿನ ಬೆಳಿಗ್ಗೆ ಹಾಗು ಸಂಜೆ ಒಂದು ಗಂಟೆ ಪುರುಷರಿಗೆ ಹಾಗು ಮಹಿಳೆಯರಿಗೆ ಪ್ರತ್ಯೇಕ ಸಮಯದಲ್ಲಿ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವದು ವಿಶೇಷವಾಗಿದೆ.
ಕೆಲ ಮಹಿಳೆಯರಿಗೆ ಹಾಗು ವಯೋವೃದ್ಧರಿಗೆ ತಲೆ ನೋವು, ಮೊನಕಾಲು ನೋವು, ಪಿತ್ತ, ಅಲರ್ಜಿ ಸೇರಿದಂತೆ ಹಲವಾರು ರೋಗಗಳು ಮನೆ ಮಾಡಿದ್ದವು. ಯೋಗದಿಂದ ಎಲ್ಲ ರೋಗಗಳನ್ನೂ ಮುಕ್ತಿಗೊಳಿಸುವಲ್ಲಿ ಕಾರಣವಾಗಿದೆ ಎಂದು ಯೋಗಾಭ್ಯಾಸದಲ್ಲಿ ತೊಡಗಿರುವ ವನಿತೆಯರು ತಿಳಿಸುತ್ತಾರೆ.
ಮಹಾದೇವಿ ಕೊಳಕಿ, ಸಾವಿತ್ರಿ ಹುಕ್ಕೇರಿ, ರಜನಿ ಶೇಠೆ,ಲಕ್ಷ್ಮೀ ಕೊಳಕಿ, ಭಾರತಿ ಕಂಕಣವಾಡಿ, ಮಂಗಲಾ ಬಾಣಕಾರ, ದೇವಕಿ ಭದ್ರನ್ನವರ, ಮಹಾದೇವಿ ಫಕೀರಪುರ, ಲಕ್ಷ್ಮೀ ಕಾಡದೇವರ ಸೇರಿದಂತೆ ಇತರೆ ಮಹಿಳೆಯರು ನಿರಂತರ ಕಳೆದ ಏಳೆಂಟು ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ರೋಗ ಮುಕ್ತ ಜೀವನ ನಡೆಸುವಲ್ಲಿ ನಾವು ಯಶಸ್ವಿ ಕಂಡಿದ್ದು, ಪ್ರತಿಯೊಬ್ಬರೂ ಯೋಗಾಭ್ಯಾಸದಲ್ಲಿ ತೊಡಗಬೇಕೆಂದರು.
ರಬಕವಿ-ಬನಹಟ್ಟಿ ಅವಳಿ ನಗರಾದ್ಯಂತ ಉಚಿತವಾಗಿ ಯೋಗ ತರಬೇತಿ ನೀಡುತ್ತಿರುವ ನಿವೃತ್ತ ದೈಹಿಕ ಶಿಕ್ಷಕ ಎ.ಆರ್. ವಿಭೂತಿಯವರ ಸಮಾಜ ಸೇವೆಗೆ ಒಂದು ಧನ್ಯತೆ ಹೇಳಲೇಬೇಕು. ಯೋಗಾಭ್ಯಾಸದಲ್ಲಿ ಉಚಿತವಾಗಿ ಪಾಲ್ಗೊಳ್ಳುವವರು 9663226158 ನಂಬರ್‍ಗೆ ಅಥವಾ ಮಾಳಿಂಗರಾಯ ದೇವಸ್ಥಾನ, ಮಂಗಳವಾರ ಪೇಟೆ, ಬನಹಟ್ಟಿ ಇಲ್ಲಿ ಸಂಪರ್ಕಿಸಬಹುದು.
`ಮೊನಕಾಲು ನೋವು, ಪಿತ್ತವೆಂಬುದು ಶರೀರದಲ್ಲಿ ಮನೆ ಮಾಡಿತ್ತು. ಸಾಕಷ್ಟು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಪ್ರತಿ ದಿನ ಯೋಗದಲ್ಲಿ ತೊಡಗಿದ ನಂತರ ಅವೆಲ್ಲವುಗಳಿಂದ ಮುಕ್ತಿ ಹೊಂದಿ, ಆರೋಗ್ಯವಂತ ಬದುಕಿನೊಂದಿಗೆ ಸದಾ ಚೈತನ್ಯ ಕಾಣುವಲ್ಲಿ ಕಾರಣವಾಗಿದೆ’---------ಮಹಾದೇವಿ ಕೊಳಕಿ.
`ಪ್ರತಿ ದಿನ ಕುಟುಂಬ ನಿರ್ವಹಣೆಯಿಂದ ಬೇಸರ ಹಾಗು ಸುಸ್ತು ಇವೆಡನ್ನೂ ನಿರ್ಮೂಲನೆ ಮಾಡುವಲ್ಲಿ `ಯೋಗ’ ಎಂಬುದು ದಿವ್ಯ ಔಷಧಿಯಾಗಿದೆ. ಯೋಗ ಮಾಡುವದರಿಂದ ಮನೋವಿಕಾಸ ಬದಲಾವಣೆಯೊಂದಿಗೆ ಶಾರೀರಿಕವಾಗಿ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ’----------ರಜನಿ ಶೇಠೆ, ಯೋಗ ವಿದ್ಯಾರ್ಥಿ.
- FOR ADVERTISEMENT CONTACT -
- 9902523698 -

Social Plugin