ಬನಹಟ್ಟಿ ಕೆಎಚ್‍ಡಿಸಿ ಕಾಲನಿಯ ಜೇಡರದಾಸಿಮಯ್ಯ ಮಂದಿರದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀನಾಭಿವೃದ್ಧಿ ಸಂಸ್ಥೆ ವತಿಯಿಂದ ಶಾಸಕ ಸಿದ್ದು ಸವದಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ
* ಸಾರ್ವಜನಿಕರ ಸಹಕಾರ ಅವಶ್ಯ
ರಬಕವಿ-ಬನಹಟ್ಟಿ,ಜೂ21: ಸಮಾಜಕ್ಕೆ ಯಾವುದೇ ರೀತಿಯ ಒಳ್ಳೆಯ ಕೆಲಸ ಮಾಡುವುದು ನಮ್ಮಿಂದ ಆಗದೇ ಹೋದರೂ ಪರವಾಗಿಲ್ಲ, ಈ ನಾಡಿನ ತಾಯಿ ಋಣ ತೀರಿಸಲು ಒಂದು ಗಿಡವನ್ನಾದರೂ ನೆಟ್ಟು ಅದನ್ನು ಬೆಳಸಿದರೆ ಅದೇ ನೀವು ನಾಡಿಗೆ ಕೊಡುವ ಅತ್ಯುಮೂಲ್ಯ ಕೊಡುಗೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಅವರು ಕೆಎಚ್‍ಡಿಸಿ ಕಾಲನಿಯ ಜೇಡರದಾಸಿಮಯ್ಯ ಮಂದಿರದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀನಾಭಿವೃದ್ಧಿ ಸಂಸ್ಥೆ ವತಿಯಿಂದ 50ಕ್ಕೂ ಹೆಚ್ಚೂ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಿಡಗಳನ್ನು ಕಾಳಜಿಯಿಂದ ಬೆಳೆಸಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರು ಇದಕ್ಕೆ ಸಹಕರಿಸಿದರೆ ನಮ್ಮ ನಗರಗಳು ಹಸಿರು ನಗರಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಸೋಮನಾಥ ಗೊಂಬಿ, ಬಸಪ್ಪ ಕೊಣ್ನೂರ, ರಾಜಶೇಖರ ಮಾಲಾಪೂರ, ಶಿವಕುಮಾರ ಜುಂಜಪ್ಪನವರ, ದೇವೇಂದ್ರ ಶೀಲವಂತ, ಮಲ್ಲಿಕಾರ್ಜುನ ಸೋರಗಾಂವಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಾಳಕೃಷ್ಣ, ಶಿವಕಲಾ, ಒಕ್ಕೂಟದ ಅಧ್ಯಕ್ಷೆ ಸವಿತಾ ಭಗವತಿ, ಸೇವ ಪ್ರತಿನಿಧಿ ಗೀತಾ ಲಮಾಣಿ ಸೇರಿದಂತೆ ಅನೇಕರು ಇದ್ದರು.
- FOR ADVERTISEMENT CONTACT -
- 9902523698 -

Social Plugin