ಶಾಸಕರು ಮಾತನಾಡುವ ಸಂಸ್ಕಾರ ಕಲಿಯಬೇಕು....
ವರದಿ : ಕೆ. ಎಸ್. ರಂಗಸ್ವಾಮಿ
ತೇರದಾಳ: ನಮ್ಮ ದೇಶದಲ್ಲಿ ಸ್ತ್ರೀಗೆ ದೊಡ್ಡ ಸ್ಥಾನಮಾನವಿದೆ,ಗೌರವವಿದೆ.ಈಡಿ ವಿಶ್ವದಲ್ಲಿಯೇ ನಮ್ಮ ಭಾರತ ದೇಶವು ಒಳ್ಳೆಯ ಸಂಸ್ಕಾರ ಸಂಸ್ಕøತಿ ಹೊಂದಿದ ದೇಶವೆಂದು ಗುರುತಿಸಲ್ಪಟ್ಟಿದೆ.ನಮ್ಮಲ್ಲಿ ಮಹಿಳೆಯರಿಗೆ ಇರುವಷ್ಟು ಗೌರವ,ಆದರ ಮತ್ತೆಲ್ಲಿ ಕಾಣುವದಿಲ್ಲ.ಇಂತಹ ಸಂಸ್ಕಾರವಿರುವ ಈ
ನಾಡಿನಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿರುವ ಶಾಸಕರು ಏಕವಚನದಲ್ಲಿ ಮಾತನಾಡಿ ಸ್ತ್ರೀ ಕುಲಕ್ಕೆ ಅಪಮಾನ ಮಾಡಿದ್ದಾರೆಎಂದು ತೇರದಾಳ ಬ್ಲಾಕ ಕಾಂಗ್ರೇಸ್ ಅಧ್ಯಕ್ಷರಾದ ಲಕ್ಷ್ಮಣ ದೆಸಾರಟ್ಟಿ ಹೇಳಿದರು.
ಈ ಕೆಲವು ದಿನಗಳ ಹಿಂದೆ ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ ಹಾಗೂ ಮಾಜಿ ಸಚಿವೆ ಉಮಾಶ್ರೀಯವರು ರಬಕವಿ-ಬನಹಟ್ಟಿ ನಗರಸಭೆಗೆ ನೇಕಾರರಿಗೆ ನೀಡಿದ ಹಣವನ್ನು ಇಲ್ಲಿನ ಅಧಿಕಾರಿಗಳು ಸರಕಾರದ ಆದೇಶದ ಪ್ರಕಾರ ನಡೆದುಕೊಳ್ಳದೆ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡು ನೇಕಾರರಿಗೆ ಅನ್ಯಾಯಮಾಡುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದರು. ಸರಕಾರವು ದೇಶದಲ್ಲಿ ಕೊವಿಡ್19 ಕಾರಣದಿಂದ ಇಡಿ ದೇಶವನ್ನೇ ಲಾಕಡೌನ ಮಾಡಿದ ಕಾರಣದಿಂದ ವಿವಿದ ರಂಗಗಳಲ್ಲಿ ಕೆಲಸ ಮಾಡುತ್ತಿರುವ ಲೆಕ್ಕವಿಲ್ಲದಷ್ಟು ಬಡ ಕೂಲಿಕಾರ್ಮಿಕರು ಕೆಲಸವಿಲ್ಲದೆ,ಕೈಯಲ್ಲಿ ಕಾಸಿಲ್ಲದೆ ಸಂಕಷ್ಟಕ್ಕೊಳಗಾದರು.ಇದನ್ನರಿತ ಸರಕಾರವು ಈಗಾಗಲೇ ಇಲಾಖೆಯಲ್ಲಿ ಬಳಸದೆ ಉಳಿದಿರುವ ಹಣವನ್ನು ನಿಗದಿಪಡಿಸಿದ ಉದ್ದೇಶಕ್ಕಾಗಿ ಮಾತ್ರ ನಿಯಮಾನುಸಾರ ಟೆಂಡರ ಕರೆದು ಬಳಸಿಕೊಳ್ಳಬೇಕು ಅಂತಾ ರಾಜ್ಯದ ಎಲ್ಲ ಜಿಲ್ಲೆಯ ಅಧಿಕಾರಿಗಳಿಗೆ ಲಿಖಿತವಾಗಿ ಸ್ಪಷ್ಟ ನಿರ್ದೇಶನ ನೀಡಿತ್ತು. ಇದರ ಅನುಸಾರವಾಗಿ ರಾಜ್ಯಸರ್ಕಾರವು ಸನ್ 2013 ರಲ್ಲಿರಬಕವಿ-ಬನಹಟ್ಟಿ ಕೆ.ಎಚ್.ಡಿ.ಸಿ ನೇಕಾರರಿಗೆ ಸಂಭಂದಿಸಿದಂತೆ ಸುಮಾರು 47 ಲಕ್ಷ ಬಿಡುಗಡೆ ಮಾಡಲಾಗಿತ್ತು. ಈ ºಣಕ್ಕೆ ಸಂಬಂದಿಸಿದಂತೆ ಅಧಿಕಾರಿಗಳು ಸರಕಾರದ ನಿಯಮವನ್ನು ಗಾಳಿಗೆ ತೂರಿ ಟೆಂಡರ ಮಾಡಿದ್ದನ್ನು ಪ್ರಶ್ನಿಸಿ ಅದನ್ನು ಪುನಃ ಮರು ಟೆಂಡರ ಕರೆದು ಸರಕಾರದ ನಿರ್ದೇಶನ ಪಾಲಿಸಿ ಅರ್ಹರಿಗೆ ಆಹಾರದ ಕಿಟ್‍ಗಳನ್ನು ಕೊಡಬೇಕೆಂದು ಒತ್ತಾಯ ಮಾಡಿದರು. ಇದರಿಂದ ಸಂಭಂದಿಸಿದ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಪುನಃ ಟೆಂಡರ ಪ್ರಕ್ರಿಯೆಯನ್ನು ಮಾಡಿದರು. ಈ ಘಟನೆಯಿಂದ ಸಿಡಿಮಿಡಿಗೊಂಡ ಹಾಲಿ ಶಾಸಕರಾದ ಸಿದ್ದು ಸವದಿಯವರು ಇದನ್ನು ಪ್ರಶ್ನಿಸಿದ ನಮ್ಮ ನಾಯಕಿ ಮಾಜಿ ಸಚಿವೆ ಉಮಾಶ್ರೀಯವರಿಗೆ ಬಹಿರಂಗವಾಗಿ ಏಕವಚನದಲ್ಲಿ ಮಾತನಾಡಿ ಅವರ ಘನತೆ ಗೌರವಕ್ಕೆ ಧಕ್ಕೆ ತಂದಿದ್ದಾರೆ.ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮನಸ್ಸಿಗೆ ಬಂದಂತೆ ಮಾತನಾಡುವುದು ಶಾಸಕರಿಗೆ ಶೋಭೆ ತರುವಂತಹ ವಿಷಯವಲ್ಲ. ಈ ಕ್ಷೇತ್ರದ ಪ್ರತಿನಿಧಿಯಾದ ಶಾಸಕರು ಈ ರೀತಿ ಮಾತನಾಡಿ ಸ್ತ್ರೀ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.ನಂತರ ಪುರಸಭೆಯ ಮಾಜಿ ಅಧ್ಯಕ್ಷ ಹಣಮಂತ ರೊಡನ್ನವರ ಮಾತನಾಡಿ,ಶಾಸಕ ಸಿದ್ದು ಸವದಿಯವರೇ ಇದೇನಾ ನಿಮ್ಮ ಬಿಜೆಪಿ ಪಕ್ಷವು ನಿಮಗೆ ಕಲಿಸಿಕೊಟ್ಟ ಸಂಸ್ಕಾರ, ಮಾತೆದ್ದರೆ ಗೋಮಾತೆ, ಭಾರತಮಾತೆ ಎಂದು ಹೇಳುವ ನೀವುಗಳು ಮಾತೆಗೆ ಕೊಡುವ ಗೌರವ ಇದೆನಾ. ಮಾತನಾಡುವಾಗ ಬಾಯಿ ತೊಳೆದುಕೊಂಡು ಮಾತನಾಡಿ.ಮಹಿಳೆಯರಿಗೆ ಗೌರವಕೊಡುವುದನ್ನು ಕಲಿರಿ.ಇದು ನಿಮಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.ನಂತರ ಮಾತನಾಡಿದ ಪಟ್ಟಣದ ನಾಡಗೌಡರು,ಯುವಧುರಿಣರಾದ ಪ್ರವೀಣ ನಾಡಗೌಡರು ಮಾತನಾಡಿ ಗೌರವಾನ್ವಿತ ಸ್ಥಾನದಲ್ಲಿರುವವರು ಈ ರೀತಿ ಅಗೌರವರೀತಿಯಲ್ಲಿ ಮಾತನಾಡುವುದು ಅವರ ವ್ಯಕ್ತಿತ್ವವನ್ನು ತಿಳಿಸುತ್ತದೆ.ಶಾಸಕರಾದ ತಾವುಗಳು ಇಂತಹ ಪದಗಳನ್ನು ಬಳಸುವುದು ಸರಿಯಲ್ಲ.ಅಲ್ಲದೆ ಕೊವಿಡ್19 ಕಾರಣದಿಂದ ಈಡಿ ದೇಶವೆ ಲಾಕಡೌನ ಆದ ಸಂದರ್ಭದಲ್ಲಿ ಇಡಿ ಮತಕ್ಷೇತ್ರದ ಬಡಜನತೆ ತತ್ತರಿಸಿ ಹೋಯಿತು.ತುತ್ತು ಅನ್ನಕ್ಕಾಗಿ ಪರಿತಪಿಸುವಂತಹ ಸಂದರ್ಭದಲ್ಲಿ ಸೌಜನ್ಯಕ್ಕಾಗಿಯಾದರು ಜನರ ಕಷ್ಟಗಳನ್ನು ವಿಚಾರಸದೆ ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮನೆಯಲ್ಲಿರಿ ಎಂದು ಹೇಳಿದಿರಿ ಹೊರತು ಯಾರಿಗೂ ಸಹಾಯ ಮಾಡಲಿಲ್ಲ.ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸಲು ಸ್ವಯಂಪ್ರೇರಿತರಾಗಿ ಬಂದ ರಬಕವಿಯ ವೈದ್ಯರಾದ ಪದ್ಮಜಿತ ನಾಡಗೌಡರು ಮತಕ್ಷೇತ್ರದಾದ್ಯಂತ ಸುಮಾರು ಅರವತ್ತು ಸಾವಿರ ತರಕಾರಿ ಕಿಟ್‍ಗಳನ್ನು ನೀಡಿದ್ದನ್ನು ಸಹ ನೀವು ವ್ಯಂಗ್ಯವಾಗಿ ಹೇಳುತ್ತಿದ್ದಿರಲ್ಲ ಇದು ಸರಿಯೇ? ಈ ಪ್ರವೃತ್ತಿ ಸರಿಯಲ್ಲ,ಕಾರಣ ಉಮಾಶ್ರೀಯವರಿಗೆ ಮಾತನಾಡಿದ ಮಾತನ್ನು ಹಿಂಪಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಅಶೋಕ ಅಳಗೊಂಡ,ಪರಸಪ್ಪ ಮಾಸ್ತಿ,ಮಾಶುಮ ಇನಾಮದಾರ,ನೆಮಣ್ಣ ಸಾವಂತನವರ,ರಾಜಾಸಾಬ ನಗಾರ್ಜಿ,ಗುರುರಾಜ ಕುಲಕರ್ಣಿ,ಅಶೋಕ ಉಳ್ಳಾಗಡ್ಡಿ,ಸುರೇಶ ಕಬಾಡಗಿ,ಆದಿನಾಥ ಸಪ್ತಸಾಗರ,ಮಲ್ಲಿನಾಥ ಬೊಳಗೊಂಡ,ರಾಜು ಹೊಸಮನಿ,ಗೌತಮ ರೊಡಕರ,ದಯಾನಂದ ಕಾಳೆ ಸೇರಿದಂತೆ ಇನ್ನಿತರರೂ ಇದ್ದರು.
- FOR ADVERTISEMENT CONTACT -
-9902523698-

Social Plugin