ಬನಹಟ್ಟಿ ಕೆರೆ ಹತ್ತಿರದ ಚಿಮ್ಮಡ ಗ್ರಾಮದ ರೈತ ಕುಟುಂಬದವರು ಅರಿಷಿಣ ಬೀಜವನ್ನು ನಾಟಿ ಮಾಡುತ್ತಿರುವ ರೈತ ಅಶೋಕ ಪವಾಡಿ ಮತ್ತು ಅವರ ಕುಟುಂಬ.
ಮುಂಗಾರು ಆರಂಭ ರೈತರ ಮೊಗದಲ್ಲಿ ಮಂದಹಾಸ; ಅರಿಷಿಣ ನಾಟಿ ಮಾಡಲು ಮುಂದಾದ ರೈತರು
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಜು13: ಕಳೆದ ಒಂದು ವಾರದಿಂದ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಮುಂಗಾರ ಮಳೆ ಜೋರಾಗಿ ಬಾರದಿದ್ದರೂ ಜಿಟಿ ಜಿಟಿಯಾಗಿ ಸುರಿಯುತ್ತಿದೆ. ಭೂಮಿ ಅಷ್ಟೇನು ಹಸಿಯಾಗದಿದ್ದರೂ ಅಲ್ಪ ಪ್ರಮಾಣದಲ್ಲಿ ಎರಡಿಂಚಿನಷ್ಟು ಮಣ್ಣು ಹಸಿಯಾಗಿದೆ. ಮುಂಗಾರು ಮಳೆಕೂಡಾ ಅಲ್ಪ ಪ್ರಮಾಣದಲ್ಲಿ ನಿಧಾನವಾಗಿ ಬರುತ್ತಿದೆ ಎಂಬ ಭರವಸೆಯ ಮೇಲೆ ಈ ಭಾಗದ ರೈತರು ಮುಂಗಾರು ಬೆಳೆಗಳಲ್ಲಿಯೇ ವಾಣಿಜ್ಯ ಬೆಳೆಯಾದ ಅರಿಷಿಣವನ್ನು ಅತೀವ ಸಂತಸದಿಂದ ನಾಟಿ ಮಾಡುತ್ತಿದ್ದಾರೆ.
ಕಳೆದ ವರ್ಷ ಕೂಡಾ ಅರಿಷಿಣ ಬೆಳೆ ಚನ್ನಾಗಿ ಬೆಳೆದು ಲಾಭಕೂಡಾ ಚನ್ನಾಗಿ ಬಂದಿತ್ತು. ಮೃಘಶಿರ ಮಳೆ ಅಲ್ಪ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಜೂ.21 ಕ್ಕೆ ಆರಿದ್ರ ಮಳೆ ಆರಂಭವಾಗುಷ್ಟರಲ್ಲಿ ಅರಿಷಿಣವನ್ನು ನಾಟಿಮಾಡಿದರೆ ಉತ್ತಮ ಫಸಲು ಬರುತ್ತದೆ ಎಂಬುವುದು ರೈತರ ನಂಬಿಕೆಯಾಗಿದೆ.
ಇನ್ನು ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಸಜ್ಜಿ, ತೊಗರಿ, ಹೆಸರು ಸೇರಿದಂತೆ ಇನ್ನೀತರ ಬೆಳೆಗಳ ಬಿತ್ತನೆ ಕೂಡಾ ಈ ವಾರದಲ್ಲಿ ಆರಂಭವಾಗಲಿವೆ. ಅದಕ್ಕಾಗಿ ಈ ಭಾಗದ ರೈತರು ಭೂಮಿಯನ್ನು ಹದಮಾಡಿಕೊಂಡು ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. ಅಲ್ಲದೆ ನೀರಿನ ವ್ಯವಸ್ಥೆ ಇದ್ದ ರೈತರು ಈ ಗಾಗಲೆ ಎಲ್ಲ ಬೆಳೆಗಳ ಬೀಜಗಳನ್ನು ನಾಟಿ ಮಾಡಿದ್ದಾರೆ. ಒಣಬೇಸಾಯದ ರೈತರು ಸೇಂಗಾ, ಮಳೆಗಾಲದ ಹತ್ತಿ ಬಿತ್ತನೆಯನ್ನು ಕೂಡಾ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ.
ಒಂದು ಎಕರೆಗೆ 11 ರಿಂದ 12 ಕ್ವಿಂಟಲ್ ಅರಿಶಿಣ ಬೀಜವನ್ನು ಬಳಸುತ್ತೇವೆ. ಬೀಜದ ದರ ಪ್ರತಿ ಕ್ವಿಂಟಲ್‍ಗೆ ರೂ. 2500 ಇದ್ದು. ಈ ಭಾಗದಲ್ಲಿ ಸೆಲಂ ಜಾತಿಯ ಅರಿಷಿಣಬೀಜಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಅದೇ ಬೀಜವನ್ನೂ ನಾವು ಕೂಡಾ ನಾಟಿ ಮಾಡುತ್ತಿದ್ದೇವೆ. ಅದು ಉತ್ತಮ ಇಳುವರಿ ಕೂಡಾ ಕೊಡುವುದರಿಂದ ಅದನ್ನೆ ಹೆಚ್ಚಾಗಿ ನಾವು ಬಳಸುತ್ತೇವೆ. ಅಲ್ಲದೆ ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಸಹ ಹೆಚ್ಚಾಗಿ ಸಿಗುತ್ತಿಲ್ಲ. ಕರೊನಾದಿಂದ ಶಾಲೆ ಕಾಲೇಜುಗಳ ರಜೆ ಇರುವುದರಿಂದ ನಮ್ಮ ಮಕ್ಕಳು ಮತ್ತು ಕುಟುಂಬದವರೆಲ್ಲರೂ ಸೇರಿ ಈ ನಾಟಿ ಮಾಡುವ ಕಾಯಕದಲ್ಲಿ ನಿರತರಾಗಿದ್ದೇವೆ....ಅಶೋಕ ಪವಾಡಿ. ಪ್ರಗತಿಪರ ರೈತ ಚಿಮ್ಮಡ.
- FOR ADVERTISEMENT CONTACT -
-9902523698-

Social Plugin