"ಕಲಿವೀರ"ನಿಗೆ ಶಿವಣ್ಣ ಸ್ಪೂರ್ತಿ.....
ವಯಸ್ಸಾದರು ತಮ್ಮ ಎನರ್ಜಿ, ಲುಕ್ ಗಳಿಂದ ಹದಿಹರೆಯದವರಿಗು ಸಡ್ಡು ಹೊಡೆಯುವ ಶಿವಣ್ಣನವರು ಕೈಯಲ್ಲಿ ಲಾಂಗ್ ಹಿಡಿದರೆ, ಅದಕ್ಕೆ ಮನ ಸೋಲದವರಿಲ್ಲ. ಓಂ, ಜೋಗಿ, ಟಗರು ಹೀಗೆ ಇನ್ನು ಅನೇಕ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲುಗಳಾಗಿವೆ.
ಶಿವಣ್ಣ ಲಾಂಗ್ ಹಿಡಿದ ಶೈಲಿಗೆ ಎಷ್ಟೊ ಪಡ್ಡೆ ಹೈಕ್ಳುಗಳು ಮನ ಸೋತಿವೆ. ಭೂಗತ ಜಗತ್ತಿನ ದೊರೆಗಳು ಕೂಡ ಶಿವಣ್ಣ ಕೈಯಲ್ಲಿ ಹಿಡಿದ ಲಾಂಗಿನ ಭಂಗಿಯನ್ನು ನೋಡಿ ಫ಼ಿದಾ ಆಗಿದ್ದಾರೆ. ಅಂದಿನಿಂದ ಇಂದಿನವರೆಗೂ ಲಾಂಗ್ ಎಂದರೆ ಶಿವಣ್ಣ, ಶಿವಣ್ಣ ಎಂದರೆ ಲಾಂಗ್ ಎಂಬ ಮಾತು ಕನ್ನಡ ಸಿನಿ ರಸಿಕರು ಹೇಳುವ ವೇದವಾಕ್ಯವಾಗಿದೆ. ಶಿವಣ್ಣ ಕೈಯಲ್ಲಿಡಿದ ಲಾಂಗ್ ಶೈಲಿಯನ್ನು ನೋಡಿ, ಎಷ್ಟೊ ಹೊಸ ಚಿತ್ರ ತಂಡದವರು ತಮ್ಮ ಸಿನಿಮಾದ ನಾಯಕನಿಗೆ ಲಾಂಗ್ ಕೊಟ್ಟು ವಿಶೇಷ ರೀತಿಯ ಪೋಸ್ಗಳನ್ನು ಕೊಟ್ಟು ಪ್ರಚಾರ ಮಾಡಿರುವುದು ಎಲ್ಲರ ಗಮನಕ್ಕೆ ಬಂದಿದೆ.
ಇದೆ ರೀತಿಯಲ್ಲಿ ಅವಿ ನಿರ್ದೇಶನದ ಕಲಿವೀರ ಚಿತ್ರದಲ್ಲಿ ನಾಯಕ ಏಕಲವ್ಯ ಲಾಂಗ್ ಹಿಡಿದು ಪೋಸ್ ಕೊಟ್ಟಿರುವ ಪೋಸ್ಟರ್ ಒಂದು ಏಕಲವ್ಯರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡ ಬಿಡುಗಡೆ ಮಾಡಿತ್ತು. ಉತ್ತರ ಕರ್ನಾಟಕದ ಪ್ರತಿಭೆ ಏಕಲವ್ಯರ ಕೈಯಲ್ಲಿ ಹಿಡಿದಿರುವ ಲಾಂಗ್ ನ ಶೈಲಿಗೆ ಅನೇಕ ಚಿತ್ರರಸಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶಿವಣ್ಣ ನವರ ಅನೇಕ ಅಭಿಮಾನಿಗಳು ಕೂಡ ಈ ಉತ್ತರ ಕರ್ನಾಟಕದ ಹುಡುಗನು ಲಾಂಗ್ ಹಿಡಿದ ಪೋಸನ್ನು ಮೆಚ್ಚಿಕೊಂಡು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿ ಮೆಚ್ಚುಗೆ ಸೂಚಿಸಿರುವುದು ಕಲಿವೀರನಿಗೆ ಸಿಕ್ಕ ಪ್ರೀತಿ ಇದಾಗಿದೆ.
ಈ ವಿಶೇಷ ವಿಭಿನ್ನ ಮನಸೆಳೆಯುವ ಪೋಸ್ ಬಗ್ಗೆ ಕೇಳಿದಾಗ , ಶಿವಣ್ಣ ನವರೆ ನನಗೆ ಸ್ಪೂರ್ತಿ ಅವರಿಂದ ಪ್ರೇರಣೆ ಪಡೆದು ಕೊಟ್ಟ ಪೋಸ್ ಇದು ಎಂದು ಶಿವಣ್ಣ ನವರ ಮೇಲಿನ ಅಭಿಮಾನವನ್ನು ವ್ಯಕ್ತ ಪಡಿಸಿದರು ನಾಯಕಏಕಲವ್ಯ. ರಾಣೆಬೆನ್ನೂರಿನ ಜ್ಯೋತಿ ಆರ್ಟ್ಸ್ ಎಂಬ ಸಂಸ್ಥೆ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಕಲಿವೀರ ಸಿನಿಮಾದ ಕೆಲಸಗಳು ಕೊನೆಯ ಹಂತದಲ್ಲಿದ್ದು. ಇನ್ನು ಕೆಲವೇ ದಿನಗಳಲ್ಲಿ ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರ ಪಡೆದು, ಕಲಿವೀರ ಬಿಡುಗಡೆ ಆಗುವ ಎಲ್ಲ ಸಾದ್ಯತೆಗಳಿವೆ ಎಂದು ನಿರ್ದೇಶಕ 'ಅವಿ' ತಿಳಿಸಿದರು.
- FOR ADVERTISEMENT CONTACT -
- 9902523698-

Social Plugin