ರಬಕವಿಯ ಶ್ರೀನಿಧಿ ಬ್ಯಾಂಕಿನಲ್ಲಿ ಕೊರೊನಾ ವಿರುದ್ಧ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಗೌರವಧನ ವಿತರಣೆ ಮಾಡಲಾಯಿತು.
ಕೊರೊನಾ ಹೋರಾಟದಲ್ಲಿ ಆಶಾ ಕಾರ್ಯಕರ್ತರ ಪಾತ್ರ ಪ್ರಮುಖ
ರಬಕವಿ-ಬನಹಟ್ಟಿ,ಜೂ4: ಕೊರೊನಾದಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಇಂತಹ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದು ರಬಕವಿ ಶ್ರೀನಿಧಿ ಬ್ಯಾಂಕಿನ ಚೇರಮನ್ ಮಲ್ಲಿಕಾರ್ಜುನ ನಾಶಿ ಹೇಳಿದರು.
ಅವರು ರಬಕವಿಯ ಶ್ರೀನಿಧಿ ಬ್ಯಾಂಕಿನಲ್ಲಿ ಕೊರೊನಾ ವಿರುದ್ಧ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಗೌರವಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರ ರಕ್ಷಣೆಗಾಗಿ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಸಂಕಷ್ಟದ ಸಮಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವೆಂದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾಬೋಜಿ, ನೀಲಕಂಠ ಮುತ್ತೂರ, ಅಂದಾನಿ ಮುತ್ತೂರ, ರವಿ ಮುತ್ತೂರ, ವಜ್ರಕಾಂತ ಕಮತಗಿ, ವ್ಯವಸ್ಥಾಪಕ ಬಸವರಾಜ ಬೆನ್ನಿ, ಪದ್ಮಾವತಿ ನಂದಗಾಂವ, ರಾಜಶ್ರೀ ದೇಸಾಯಿ ಸೇರದಿಂತೆ ಅನೇಕರು ಇದ್ದರು.
- FOR ADVERTISEMENT CONTACT -
9902523698

Social Plugin