ವರದಿ : ಕೆ. ಎಸ್.ರಂಗಸ್ವಾಮಿ 

ಪ್ರಕೃತಿ ನಮ್ಮ ಉಸಿರು -ಪಿಎಸೈ, ಕೆ.ವಿಜಯ್.

ತೇರದಾಳ:ಈ ಪ್ರಕೃತಿ ಇಡಿ ಜೀವಸಂಕುಲಕ್ಕೆ ನೀಡಿದ ಕೊಡುಗೆ ಅಪಾರ.ಆದರೆ ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ಮನಬಂದಂತೆ ಮರಗಿಡಗಳನ್ನು ನಾಶಮಾಡಿ ಇಡಿ ಜೀವಸಂಕುಲಕ್ಕೆ ಗಂಡಾಂತರ ತಂದೊಡ್ಡುತ್ತಿದ್ದಾನೆ ಎಂದು ಹೇಳಬಹುದು. ನಮ್ಮ ಐಷಾರಾಮಿ ಜೀವನಶೈಲಿಗಾಗಿ ಪ್ರಕೃತಿಯನ್ನು ವಿಕೃತಿ ಮಾಡುತ್ತಿದ್ದೇವೆ. ಇಂದು ನಾವೆಲ್ಲ ಬದುಕಿದ್ದೇವೆ ಎಂದರೆ ಈ ಪ್ರಕೃತಿಯೇ ಕಾರಣ ಆದರೆ   ನಾವಿಂದು ಮಾಡುತ್ತಿರುವುದೇನು? ನಮ್ಮ ಸ್ವಾರ್ಥಕ್ಕಾಗಿ ಗಿಡಮರಗಳನ್ನು ಕಡಿದು ನಾಡನ್ನು ಬೆಳೆಸುವ ಹುಮ್ಮಸ್ಸಿನಲ್ಲಿ ಕಾಡನ್ನು ನಾಶಮಾಡಿ ಇಡಿ ಜೀವಸಂಕುಲಕ್ಕೆ ಸಂಚಕಾರ ತರುತ್ತಿದ್ದೇವೆ. ಕಾರಣ ಪ್ರಜ್ಞಾವಂತರೆನಿಸಿಕೊಂಡ ನಾವುಗಳು ಇಡುತ್ತಿರುವ ಹೆಜ್ಜೆಯನ್ನು ಸರಿದಾರಿಗೆ ತರಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಪರಿಸರವನ್ನು ಕಾಪಾಡಬೇಕಾಗಿದೆ.ಕೇವಲ ಪರಿಸರ ದಿನಾಚರಣೆಯಂದು ಎಚ್ಚರಾಗುವ ನಾವುಗಳು ಪುನಃ ಆ ಕಡೆಗೆ ತಿರುಗಿ ನೋಡುವುದಿಲ್ಲ. ಈ ನಮ್ಮ ಸ್ಥಿತಿ ಬದಲಾಗಬೇಕಾಗಿದೆ.   ಇಲ್ಲದಿದ್ದಲ್ಲಿ ಪರಿಸರ ವಿಕೋಪಗಳಂತಹ ಘಟನೆಗಳನ್ನು ನಾವು ಎದುರಿಸಬೇಕಾದ ಪರಿಸ್ಥಿತಿ        ಅನಿವಾರ್ಯವಾಗುತ್ತದೆ ಎಂದರು. ಪರಿಸರವೇ ನಮ್ಮ ಉಸಿರಾಗಿದೆ ಎಂಬ ಅರಿವನ್ನು ನಾವೆಲ್ಲ ಮರೆತಿದ್ದೇವೆ.ಆದರೆ ಪರಿಸರವಿಲ್ಲದೆ ನಾವಿಲ್ಲ ಎಂಬ ಸತ್ಯವನ್ನು ತಿಳಿದು ಅದರ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಈ ಉದ್ದೇಶದಿಂದಲೇ ಇಂದು ಠಾಣೆಯ ಮೈದಾನವನ್ನು ಜೆಸಿಬಿ ಮುಖಾಂತರ ಸ್ವಚ್ಛಗೊಳಿಸಿ ಸುಮಾರು ಐವತ್ತು ಸಸಿಗಳನ್ನು ಉಪತಹಶೀಲದಾರ ಎಸ್.ಬಿ.ಮಾಯನ್ನವರ,ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಸೇರಿದಂತೆ ಮಾಧ್ಯಮಮಿತ್ರರು ಹಾಗೂ ಪಟ್ಟಣದ ಯುವಮಿತ್ರರನ್ನು ಕರೆಯಿಸಿ ಎಲ್ಲರಿಂದಲೂ ಒಂದೊಂದು ಸಸಿಗಳನ್ನು ನಡೆಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಠಾಣೆಯ ಎ.ಎಸ್.ಐ ಗಳಾದ ಎಲ್.ಬಿ.ಮಾಳಿ,ಎಸ್.ಕೆ.ಸೂರ್ಯವಂಶಿ,ಐ.ಬಿ.ಕಮತರ,ಹೆಚ್.ಎಸ್.ಮೆಂಡೇಗಾರ,ಹೆಚ್.ಸಿ.ಗಳಾದ ಎಸ್.ಎಚ್.ಸನ್ನಟ್ಟಿ,ಬಿ.ಎಸ್.ಚೌಲಗಿ,ಹಾಗೂ ಪಿ.ಸಿ ಗಳಾದ ರಾಜು ಪೂಜಾರಿ,ಆನಂದ ಕೋಲೂರ,ಅನೀಲ ಮದಲಮಟ್ಟಿ,ಮಹೇಶ ಸವದಿ,ಎಮ್.ಎಲ್.ಬುಗಟಿ,ಎಮ್.ಎಮ್.ಎತ್ತಿನಮನಿ,ಎಸ್.ಬಿ.ಬೇವನೂರ ಮತ್ತು ಮೀನಾಕ್ಷಿ ಚವ್ಹಾಣ ಇದ್ದರು.

  - FOR ADVERTISEMENT CONTACT -
                     9902523698