ಪರೀಕ್ಷಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ.....

ತೇರದಾಳ :ಪಟ್ಟಣದ ಎಸ್ ಎಂ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಶ್ರೀ ಸಿಮೆಂಟ್ ಶ್ರೀ ಮಹಾಲಕ್ಷ್ಮಿ ಟ್ರೇಡರ್ಸ್ ತೇರದಾಳ ಮಾಲೀಕರಾದ ಎಸ್.ಡಿ. ಮುತ್ತೂರ ಅವರು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಸುಮಾರು 350 ಮಾಸ್ಕ್ ಗಳನ್ನು ಉಚಿತವಾಗಿ ನೀಡಿದರು. ಕೋವಿಡ್ ಕಾರಣದಿಂದ ಈ ಬಾರಿ ಸರಕಾರವು ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸುವ ದಿಟ್ಟಹೆಜ್ಜೆ ಇಟ್ಟಿರುತ್ತದೆ. ಯಾವುದೇ ಕಾರಣಕ್ಕೂ ಯಾರಿಗೂ ತೊಂದರೆಯಾಗದಂತೆ ಮುಂಚಿತವಾಗಿಯೇ ಎಲ್ಲಾ ವಿದ್ಯಾರ್ಥಿಗಳಿಗೆ ಮುಂಜಾಗ್ರತೆ ಕುರಿತು ಸಾಕಷ್ಟು ಸಲಹೆಗಳನ್ನು ಪಾಲಿಸಲು ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಗಳನ್ನು ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹೀಗೆ ನಾನಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸ್ಪಷ್ಟ ಆದೇಶ ನೀಡಿದೆ. ಈ ಬಗ್ಗೆ ಈ ವಿಷಯ ತಿಳಿದುಕೊಂಡ ಸ್ಥಳೀಯ ವ್ಯಾಪಾರಸ್ಥರಾದ ಮುತ್ತೂರ ಅವರು ಈ ವಿದ್ಯಾರ್ಥಿಗಳಿಗೆ ನನ್ನದೊಂದಿಷ್ಟು ಸೇವೆಯಾಗಲಿ ಎಂಬ ಸದುದ್ದೇಶದಿಂದ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ ಇವರ ಸಹಾಯಕ್ಕೆ ಗುರುಕುಲ ಸಂಸ್ಥೆಯವರು ಅಭಿನಂದನೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಡಿ ಬಿ ಪಾಟೀಲ, ಶಾಲೆಯ ಶಿಕ್ಷಕರಾದ ಎಸ್. ಬಿ. ಸಾವಂತನವರ, ಸಿ. ಎಚ್. ಮಾಳಿ, ಹಾಗೂ ಜೇ.ವ್ಹಿ. ಮಂಡಳದ ಕರಣಿಕರಾದ ಭರತೇಶ.ಗೌರಾಯಿ ಉಪಸ್ಥಿತರಿದ್ದ ರು
- FOR ADVERTISEMENT ಕಾಂಟಾಕ್ಟ್ +91 9902523698 -
Social Plugin