ಅಪ್ರಾಪ್ತೆ ಮೋಹಿಸಿ ಅತ್ಯಾಚಾರ: ಯುವಕನ ಸೆರೆ
ರಬಕವಿ-ಬನಹಟ್ಟಿ,ಜೂ25:ಅಪ್ರಾಪ್ತೆಯನ್ನು ಮೋಹಿಸಿ ಮದುವೆಯಾಗುವದಾಗಿ ನಂಬಿಸಿ ಅತ್ಯಾಚಾರವೆಸಗಿದ ರಬಕವಿ-ಬನಹಟ್ಟಿ ತಾಲೂಕಿನ ರಾಂಪೂರದ ವ್ಯಕ್ತಿಯನ್ನು ಬನಹಟ್ಟಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ರಾಂಪೂರ ಮೂಲಕ ವಸೀವುಲ್ಲ ನಜೀರಹ್ಮದ್ ಫಣಿಬಂದ(25) ಎಂಬಾತ ಇಲ್ಲಿನ ಕೊರಮ ಸಮುದಾಯದ 15 ವರ್ಷದ ಬಾಲಕಿಯನ್ನು ಮೋಹಿಸಿ ಮದುವೆಯಾಗುವದಾಗಿ ನಂಬಿಸಿ ಆಕೆಯನ್ನು ಅಪಹರಿಸಿದ್ದಾನೆ. ಅಪ್ರಾಪ್ತೆಯನ್ನು ಬಲೆಗೆ ಬೀಳಿಸಿಕೊಂಡ ಈ ಯುವಕ  ಕೆಲಸ ಮಾಡುತ್ತಾನೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ತಾಲೂಕಿನ ರಾಂಪೂರದಲ್ಲಿಯೇ ಇರುವ ಆತ ಆಕೆಯನ್ನು ಪರಿಚಯ ಮಾಡಿಕೊಂಡು ಮಾತನಾಡಿಸುವದು, ಹುಡುಗಾಟಿಕೆ, ಸಲಿಗೆಯಿಂದ ಇರುವದು, ಪ್ರೀತಿಸಿ ಮದುವೆಯಾಗುತ್ತೇನೆಂದು ಮನವೊಲಿಸಿ ಪುಸಲಾಯಿಸಿ ಅಪ್ರಾಪ್ತ ವಯಸ್ಕಳು ಹಿಂದುಳಿದ ಕೊರಮ ಜಾತಿಗೆ ಸೇರಿದವಳೆಂದು ಗೊತ್ತಿದ್ದರೂ ಸಹ ತನ್ನ ಮೋಡಾರ್ ಸೈಕಲ್ ಸಂಖ್ಯೆ ಕೆಎ-48 ಕ್ಯು-1774 ಮೇಲೆ ಅವಳನ್ನು ಅಪಹರಣ ಮಾಡಿಕೊಂಡು ಬನಹಟ್ಟಿಯ ಕೆರೆಯ ಹತ್ತಿರ  ಅತ್ಯಾಚಾರ ದೌರ್ಜನ್ಯವೆಸಗಿದ್ದಾನೆಂದು ಅಪ್ರಾಪ್ತೆಯ ತಾಯಿ ಗಂಗವ್ವ ಶ್ರೀಮಂತ ಭಜಂತ್ರಿ ಫಿರ್ಯಾಧಿ ನೀಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬನಹಟ್ಟಿ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ವ್ಯಕ್ತಿಯನ್ನು ಸೆರೆ ಹಿಡಿದು ಕೊರೊನಾ ಪರೀಕ್ಷೆಗೆ ಕಳಿಸಿದ್ದಲ್ಲದೆ ತನಿಖೆ ಮುಂದುವರೆಸಿದ್ದಾರೆ.