ಪರೀಕ್ಷಾ ಕೇಂದ್ರಕ್ಕೆ ತಹಸೀಲ್ದಾರ ಚನಗೊಂಡ ಭೇಟಿ
ತೇರದಾಳ : ಗುರುವಾರದಿಂದ ಆರಂಭವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸೂಸುತ್ರವಾಗಿ ಹಾಗೂ ಯಾವುದೇ ಅಡತಡೆಗಳಿಲ್ಲದಂತೆ ನಡೆಯಲು ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ನಿರಂತರ ಶ್ರಮಿಸುತ್ತಿದ್ದಾರೆ. ಶನಿವಾರ ಗಣಿತ ವಿಷಯದ ಪರೀಕ್ಷೆಯು ಶಾಂತ ರೀತಿಯಿಂದÀ ನಡೆಯಿತು.
ಸ್ಥಳೀಯ ಶ್ರೀಸಿದ್ಧೇಶ್ವರ ಪ್ರೌಢಶಾಲೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ತಾಲೂಕಾ ತಹಸೀಲ್ದಾರ್ ಪ್ರಶಾಂತ ಚನಗೊಂಡ ಶನಿವಾರ ಭೇಟಿ ನೀಡಿ ಪರೀಕ್ಷಾ ಕಾರ್ಯ ವೀಕ್ಷಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವಿದ್ಯಾರ್ಥಿಗಳನ್ನು, ಪರೀಕ್ಷಾ ಸಿಬ್ಬಂದಿಯನ್ನು ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕುರಿತು ಪರೀಕ್ಷಾ ಮುಖ್ಯಅಧೀಕ್ಷಕರಿಂದ ಮಾಹಿತಿ ಪಡೆದರು.
ಪರೀಕ್ಷಾ ಮುಖ್ಯಅಧೀಕ್ಷಕ ಎಂ.ಬಿ.ಮಾಳೇದ, ಎನ್.ವಿ.ಅಸ್ಕಿ, ಶಾರದಾ ಮುಳ್ಳೂರ, ಯಶವಂತ ವಾಜಂತ್ರಿ, ಎಸ್.ಬಿ.ಮೋಮಿನ್, ಮ.ಕೃ.ಮೇಗಾಡಿ, ಅಲಾಸ, ಶೆಟ್ಟಿ, ನದಾಫ್, ಬಸವರಾಜ ಮುಕರಿ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಫೋಟೊ 1 ಮತ್ತು 2
ತೇರದಾಳದ ಶ್ರೀಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಕ್ಕೆ ತಾಲೂಕಾ ತಹಸೀಲ್ದಾರ ಪ್ರಶಾಂತ ಚನಗೊಂಡ ಭೇಟಿ ನೀಡಿದರು.
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ

Social Plugin