ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು.
ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
ಕೊರೊನಾ, ನೆರೆ ಹಾವಳಿ, ಬೆಳೆ ಹಾನಿ ಬಗ್ಗೆ ಮಹತ್ವ ಪಡೆದ ಕೆಡಿಪಿ ಸಭೆ
ರಬಕವಿ-ಬನಹಟ್ಟಿ,ಜೂ22: ತೇರದಾಳ ವಿಧಾನಸಭೆಯಾದ್ಯಂತ ಕೊರೊನಾ ಜಾಗೃತಿ, ಅತಿವೃಷ್ಠಿ ಸಂಭವ ಹಾಗು ಕೆಲ ಬೆಳೆ ಹಾನಿಗೊಳಗಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಮಹತ್ವ ಪಡೆದಿದ್ದಲ್ಲದೆ ಯಾವದೇ ಕೊರತೆಗಳಾಗದಂತೆ ಪರಿಹಾರಗಳ ಬಗ್ಗೆ ಚರ್ಚೆಗೆ ವೇದಿಕೆಯಾಗುವಲ್ಲಿ ಕೆಡಿಪಿ ಸಭೆ ಮಹತ್ವದ್ದಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ-ಬನಹಟ್ಟಿ ನಗರಸಭೆ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲ ಪ್ರಾರಂಭವಾಗಿದ್ದು, ಕೃಷಿಗೆ ಪ್ರಾಧಾನ್ಯತೆ ಜೊತೆ ಕೆಲ ಬೆಳೆಗಳ ನಾಟಿ ಬಗ್ಗೆ ರೈತರಿಗೆ ಮನವರಿಕೆ ಅವಶ್ಯವಾಗಿದೆ. ಕ್ಷೇತ್ರಾದ್ಯಂತ ವಿವಿಧ ಇಲಾಖೆಗಳಿಂದ ಜರುಗುತ್ತಿರುವ ಕಾಮಗಾರಿಗಳಲ್ಲಿ ವಿಳಂಬವಾಗುತ್ತಿದ್ದು, ಅವುಗಳ ಪರಿಶೀಲನೆ ನಡೆಸುವದಾಗಿ ಶಾಸಕರು ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ರಸ್ತೆಗಳಿಗೆ ಸಂಬಂಧ ತೀವ್ರ ಕುಂಠಿತವಾಗಿದ್ದು, ಕೆಲವೆಡೆ ಗುತ್ತಿಗೆದಾರರ ವಿಳಂಬದಿಂದಾಗಿ ಪ್ರಗತಿಯಾಗುತ್ತಿಲ್ಲ. ರಸ್ತೆ ಕಾಮಗಾರಿಗೆ ಸಂಬಂಧ ಸ್ವತಃ ಪರಿಶೀಲನೆ ನಡೆಸುವೆ ನಂತರವೇ ಚೆಕ್ ಪಾವತಿಸುವಂತೆ ಸವದಿ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರು ಗರಂ: ಬೆಳಿಗ್ಗೆ 10 ಗಂಟೆಗೆ ಕರೆದಿದ್ದ ಸಭೆಗೆ ತಡವಾಗಿ ಆಗಮಿಸಿದ ಹಲವಾರು ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕ ಸಿದ್ದು ಸವದಿ ಗರಂ ಆಗಿ, ಕ್ಷೇತ್ರದ ಪ್ರಗತಿ ಸಭೆಗೆ ಇಷ್ಟೊಂದು ವಿಳಂಬವಾದರೆ ಎಲ್ಲ ಕೆಲಸ ಕಾರ್ಯಗಳನ್ನು ಹೇಗೆ ಸಮಯಾನುಸಾರ ನಿಭಾಯಿಸುತ್ತೀರಿ? ಮುಂದೆ ಹೀಗಾದಲ್ಲಿ ಯೋಗ್ಯ ಕ್ರಮ ಜರುಗಿಸಲಾಗುವದೆಂದು ಖಡಕ್ ಸಂದೇಶ ನೀಡಿದ್ದಲ್ಲದೆ, ಕೃಷಿ ಇಲಾಖೆ ಸೇರಿದಂತೆ ಕೆಲ ಪ್ರಮುಖ ಅಧಿಕಾರಿಗಳು ಯಾವದೇ ಸೂಚನೆಯಿಲ್ಲದೆ ಗೈರ ಹಾಜರಿ ಕಂಡ ಕಾರಣ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳ ಮೂಲಕ ನೋಟೀಸ್‍ಗೆ ತಿಳಿಸಲಾಗುವದೆಂದು ತಿಳಿಸಿದರು.
ಗ್ರಾಪಂ ಪ್ರತ್ಯೇಕ ಸಭೆ: ಗ್ರಾಮ ಪಂಚಾಯ್ತಿಗಳ ಅಧಿಕಾರವಧಿ ಬರುವ 30ಕ್ಕೆ ಅವಧಿ ಮುಕ್ತಾಯಗೊಳ್ಳಲಿದ್ದು, ಎಲ್ಲ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಾಗುವದು. ಮಹತ್ವದ್ದಾಗಿ ಎನ್‍ಆರ್‍ಜಿ ಸೇರಿದಂತೆ ಇತರೆ ಕಾಮಗಾರಿ ಯೋಜನೆಗಳ ಸದ್ಬಳಕೆ ಬಗ್ಗೆ ಸಭೆ ನಡೆಸಲಾಗುವದೆಂದರು.
- FOR ADVERTISEMENT CONTACT -
- 9902523698 -

Social Plugin