ಬನಹಟ್ಟಿ ಎಸ್‍ಆರ್‍ಎ ಕಾಲೇಜ್ ಎದುರಿನ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ರಸ್ತೆ ಡಾಂಬರೀಕರಣ ಮಾಡಿದ್ದರೂ ಅಲ್ಲಿ ಆಳೆತ್ತರದ ಗುಂಡಿ ಬಿದ್ದ ಚಿತ್ರ.


ರಸ್ತೆ ಕಾಮಗಾರಿ ನಡೆದು ತಿಂಗಳಾಗಿಲ್ಲ ರಸ್ತೆ ಸಂಪೂರ್ಣ ಹಾಳು

ರಬಕವಿ-ಬನಹಟ್ಟಿ,ಜೂ17: ಇಲ್ಲಿನ ಎಸ್‍ಆರ್‍ಎ ಕಾಲೇಜು ರಸ್ತೆ ಡಾಂಬರೀಕರಣ ಮಾಡಿ ಒಂದು ತಿಂಗಳಾಗಿಲ್ಲ ಈಗಲೇ ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿದೆ. ಇದರಿಂದ ನಿತ್ಯ ಅನೇಕ ಅಪಘಾತಗಳಾಗುತ್ತಿವೆ.

ಕಳೆದ ಮೂರು ದಿನದ ಹಿಂದೆ ಈ ರಸ್ತೆಯ ಮಧ್ಯಭಾಗದಲ್ಲಿ ಆಳೆತ್ತರದ ಗುಂಡಿಬಿದ್ದಿದೆ. ರಾತ್ರಿ ಬರುವ ವಾಹನ ಸವಾರರು ಈ ಗುಂಡಿಗೆ ಸಿಲುಕಿ ಅಪಘಾತಕ್ಕೀಡಾಗುತ್ತಿದ್ದಾರೆ. ಕಳೆದ ರಾತ್ರಿ ರಾಹುಲ ಅಮ್ಮವ್ವಗೋಳ ಎಂಬ ಯುವಕ ದ್ಚಿಚಕ್ರವಾಹನ ಓಡಿಸುವಾಗ ಅಪಘಾತಕ್ಕೀಡಾಗಿ ಕಾಲಿಗೆ ಪೆಟ್ಟಾಗಿದೆ ಎಂದು ಇಲ್ಲಿನ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಪ್ರಮುಕ ರಸ್ತೆ ಇದಾಗಿದ್ದರಿಂದ ನಿತ್ಯ ಅನೇಕ ವಾಹನ ಸವಾರರು, ಬಸ್ ಹಾಗೂ ಟಂಟಂ ವಾಹನಸವಾರರು ಈ ಗುಂಡಿಗಳಿಂದ ಬೆಸತ್ತು ಹೋಗಿದ್ದಾರೆ. ಅಲ್ಲದೆ ಈ ರಸ್ತೆ ಡಾಂಬರೀಕರಣವಾದ ಒಂದೇ ವಾರದಲ್ಲಿ ಅಲ್ಲಲ್ಲಿ ತಗ್ಗು ದಿನ್ನಿಗಳು ಬಿದ್ದರೂ ಯಾರೋಬ್ಬ ಅಧಿಕಾರಿಯೂ ಕ್ಯಾರೆ ಎನ್ನುತ್ತಿಲ್ಲ. ನಗರಸಭೆ ಅಧಿಕಾರಿಗಳಿಗೆ ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಜಾರಿಕೊಳ್ಳುತ್ತಿದ್ದಾರೆ.

ನಿತ್ಯ ಶಾಸಕ ಸವದಿಯವರು ಕೂಡಾ ಇದೇ ರಸ್ತೆಯಲ್ಲಿ ತಿರುಗಾಡುತ್ತಾರೆ, ಅವರಾದರೂ ಸಂಬಂದಿಸಿದ ಅಧಿಕಾರಿಗಳಿಗೆ ಹೇಳಿ ದುರಸ್ತಿ ಮಾಡಿಸಬಹುದಿತ್ತು ಎಂದು ಇಲ್ಲಿನ ಸ್ಥಳಿಯರು ಅಭಿಪ್ರಾಯ ಪಡುತ್ತಿದ್ದಾರೆ.

ನಾನು ಈಗತಾನೇ ಇಲಾಖೆಗೆ ವರ್ಗವಾಗಿ ಬಂದಿದ್ದೇನೆ. ಕೂಡಲೇ ರಸ್ತೆ ಕಾಮಗಾರಿಯ ಬಗ್ಗೆ ಪರಿಶೀಲಿಸಿ ಹಾಳಾದ ರಸ್ತೆಯನ್ನು ದುರಸ್ತಿ ಮಾಡಿಸುತ್ತೇನೆ. ಈ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ ಆದರು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೇವಲ ಎರಡು ದಿನಗಳಲ್ಲಿ ಸರಿಪಡಿಸುತ್ತೇನೆ... ಪಾಂಡುರಂಗ ಗಾಯಕವಾಡ. ಎಇಇ. ಲೋಕೋಪಯೋಗಿ ಇಲಾಖೆ ಜಮಖಂಡಿ.


- FOR ADVERTISEMENTS CONTACT -
                    - 9902523698 -