ಬನಹಟ್ಟಿಯ ಎಸ್‍ಟಿಸಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಅಡಿಯಲ್ಲಿ ಎಸ್‍ಆರ್‍ಎ ವಿದ್ಯಾರ್ಥಿಗಳಿಗಾಗಿ ಮಾಸ್ಕ್ ಗಳನ್ನು ಬಾಗಲಕೋಟೆಯ ಸ್ಕೌಟ್ ಮತ್ತು ಗೈಡ್ ಸಂಘಕ್ಕೆ ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯ್ಕರ್ ವಿತರಣೆ ಮಾಡಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಗಾಗಿ ನೂರಾರು ಮಾಸ್ಕ್ ವಿತರಣೆ....
ರಬಕವಿ ಬನಹಟ್ಟಿ:ಜೂ16:  ಇದೇ ತಿಂಗಳು 25 ರಂದು ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ 31000 ವಿದ್ಯಾರ್ಥಿಗಳಿಗೆ ಮಾಸ್ಕ್ ಗಳನ್ನು ಈಗಾಗಲೇ ಆಯಾ ಶಾಲೆಗಳನ್ನು ಮುಟ್ಟಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲೆಯ ಸ್ಕೌಟ್ ಮತ್ತು ಗೈಡ್ನ ಜಿಲ್ಲಾ ಸಂಘಟಕ ಶರೀಪ್ ಹತ್ತಿಮುತ್ತೂರ ತಿಳಿಸಿದರು.
ಅವರು ಮಂಗಳವಾರ ಸ್ಥಳೀಯ ಎಸ್‍ಟಿಸಿ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ನಿರ್ಮಾಣ ಮಾಡಲಾದ ಮಾಸ್ಕ್ ಗಳನ್ನು ಪಡೆದುಕೊಂಡು ಮಾತನಾಡಿದರು.
ಬಾಗಲಕೋಟೆಯಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ ಆಶ್ರಯದಲ್ಲಿ ಮಾಸ್ಕ್ ಬ್ಯಾಂಕ್ನ್ನು ಸ್ಥಾಪಿಸಲಾಗಿದೆ. ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಿಂದ ಮಾಸ್ಕ್ ಪಡೆದುಕೊಂಡು ಅವುಗಳನ್ನು ಸಂಗ್ರಹಿಸಿ ವಿತರಣೆ ಮಾಡಲಾಗುತ್ತಿದೆ ಎಂದು ಪ್ರಮೋದ ಚೌಗಲೆ  ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್, ರೋವರ್ಸ್ ಮತ್ತು ರೇಂಜರ್ಸ್ ಘಟಕದ ಪೆÇ್ರ.ವಿ.ವೈ. ಪಾಟೀಲ ಇದ್ದರು. ವ್ಯಾಟ್ಸಾಪ್ ಮೂಲಕ ಗ್ಯಾಸ್ ಬುಕಿಂಗ್: ರಬಕವಿ-ಬನಹಟ್ಟಿ  ತಾಲೂಕಿನ ಭಾರತ ಗ್ಯಾಸ್ ಪಡೆಯಲು ಆನ್‍ಲೈನ್ ಜೊತೆಗೆ ವ್ಯಾಟ್ಸಪ್ ಮೂಲಕವೂ ಬುಕಿಂಗ್ ಮಾಡಲು ಅವಕಾಶ ಕಲ್ಪಿಸುವ ಮೂಲಕ ಸಾಮಾನ್ಯ ಜನರಿಗೂ ಅನುಕೂಲವಾಗುವಲ್ಲಿ ಕಾರಣವಾಗಿದೆ.
ಗ್ಯಾಸ್ ಸೇವೆ ಮಾಲಿಕ ಸೋಮಸೇಖರ ಕೊಟ್ರಶೆಟ್ಟಿ ಮಾತನಾಡಿ, ಆಧುನಿಕ ತಂತ್ರಜ್ಞಾನಕೆ ಹೊಂದಿ ಈಗಾಗಲೇ ದೇಶಾದ್ಯಂತ ಎಲ್ಲ ರೀತಿಯ ಆನ್‍ಲೈನ್, ಮಿಸ್ಡ್ ಕಾಲ್ ಬುಕಿಂಗ್ ಬಳಕೆಗೆ ಅವಕಾಶವಿತ್ತು. ಇದೀಗ ರಬಕವಿ-ಬನಹಟ್ಟಿ ತಾಲೂಕು ವ್ಯಾಪ್ತಿ 99453-64107 ಗೆ ವ್ಯಾಟ್ಸಾಪ್ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗದುರಹಿತ ಸೇವೆಯೊಂದಿಗೂ ಸಹಕಾರಿಯಾಗುತ್ತಿದೆ ಎಂದರು.


        - FOR ADVERTISEMENT CONTACT -
                       - 9902523698 -