"ಕಲಿವೀರ" ಕಥೆ ರವಿಶಂಕರ್ ಜೊತೆ.....
ಇತ್ತೀಚಿಗೆ ಬಿಡುಗಡೆಗೆ ಸಿದ್ಧವಾಗಿರುವ ಹೊಸಬ್ಬರ ಸಿನಿಮಾಗಳಲ್ಲಿ ಕಲಿವೀರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸುತ್ತಿದೆ. ವಿಭಿನ್ನ ಪೋಸ್ಟರ್ ಗಳು ಕಲಿವೀರ ಚಿತ್ರದ ಮೇಲೆ ಭರವಸೆ ಹೆಚ್ಚಿಸಿದೆ.
ಕಲಿವೀರ ಚಿತ್ರದ ಮುಖ್ಯ ಖಳನಟನ ಪಾತ್ರವನ್ನು ಖಡಕ್ ಧ್ವನಿ "ರವಿಶಂಕರ್" ರವರು ನಿರ್ವಹಿಸುವ ಸಾದ್ಯತೆಗಳಿದ್ದವು. ಕಲಿವೀರ ಕಥೆ ಕೇಳಿದ ರವಿಶಂಕರ್ ಮೊದಲಿಗೆ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದರು.
ರಾಣೆಬೆನ್ನೂರಿನ "ಜ್ಯೋತಿ ಆರ್ಟ್ಸ್" ಮೊದಲ ಬಾರಿಗೆ ಅದ್ದೂರಿಯಾಗಿ ನಿರ್ಮಿಸುತ್ತಿರುವ ಕಲಿವೀರ ಚಿತ್ರಕ್ಕೆ ಉತ್ತರ ಕರ್ನಾಟಕದ ಬಹುಮುಖ ಪ್ರತಿಭೆ ಏಕಲವ್ಯ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಕರ್ನಾಟಕದಾದ್ಯಂತ "ಕನ್ನಡ ದೇಶದೊಳ್" ಎಂಬ ಭಾರಿ ಸದ್ದು ಸೃಷ್ಟಿಸಿದ ಸೃಜನಶೀಲ.
          ಚಿತ್ರ ನಿರ್ದೇಶಕ : ಅವಿ 

ನಿರ್ದೇಶಕ "ಅವಿ" ಹೇಳಿದ ಕಲಿವೀರ ಕಥೆಯನ್ನು ಕೇಳಿದ ರವಿಶಂಕರ್ ರವರು ಕಥೆಯನ್ನು ಮೆಚ್ಚಿಕೊಂಡು. ತಮ್ಮ ಪಾತ್ರವನ್ನು ನಿರ್ವಹಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದರಿಂದ ಕಲಿವೀರ ಚಿತ್ರ ತಂಡದಲ್ಲಿ ಭಾರಿ ಉಮ್ಮಸ್ಸು ಮೂಡಿತು. ಇನ್ನೇನು ರವಿಶಂಕರ್ ರವರ ಚಿತ್ರೀಕರಣಕ್ಕೆ  ಭರ್ಜರಿ ಸೆಟ್ ಗಳನ್ನು ನಿರ್ಮಾಣ ಮಾಡಲು ಕಲಿವೀರ ಚಿತ್ರತಂಡ ತಯಾರಿ ಮಾಡಿಕೊಳ್ಳುವಾಗ, ನಿರ್ದೇಶಕ ಅವಿ ಯವರಿಗೆ ರವಿಶಂಕರ್ ರವರು ಕರೆಮಾಡಿ ಆ ಪಾತ್ರವನ್ನು ತಾವು ಮಾಡಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿದರು. ಆ ಪಾತ್ರದಲ್ಲಿ ಖಳನಟನಿಗೆ ಡೈಲಾಗ್ ಗಳು ಕಡಿಮೆ ಇರುವುದರಿಂದ ಚಿತ್ರರಸಿಕರು ಆ ಪಾತ್ರಕ್ಕೆ ಬೇಸರ ವ್ಯಕ್ತ ಪಡಿಸಬಹುದು ಎಂದು ರವಿಶಂಕರ್ ರವರು ಕಲಿವೀರ ಚಿತ್ರದಲ್ಲಿ ಅಭಿನಯಿಸಲು ನಿರಾಕರಿಸಿದರು.
 ಈ ಸುದ್ದಿ ಕಲಿವೀರ ಚಿತ್ರ ತಂಡಕ್ಕೆ ಭಾರಿ ಆಘಾತ ನೀಡಿತು. ಹಿಂದಿನ ಎಷ್ಟೊ ಸಿನಿಮಾಗಳಲ್ಲಿ ರವಿಶಂಕರ್ ರ ಖಡಕ್ ಧ್ವನಿಯಿಂದ ಉದ್ದುದ್ದ ಡೈಲಾಗ್ ಗಳು ಉದುರುತ್ತಿದ್ದರೆ, ಚಿತ್ರ ರಸಿಕರು ಹಾಗೂ ಅವರ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಕೇಕೆ ಹಾಕಿ ಸಿಳ್ಳೆ ಹೊಡೆದು ಚಿತ್ರವನ್ನು ಮೆಚ್ಚಿದ ಕಾಲದಲ್ಲಿ , ರವಿಶಂಕರ್ ರವರನ್ನು ಹೆಚ್ಚಾಗಿ ಮಾತಾಡಿಸದೆ ಬೇರೆಯ ರೀತಿಯಲ್ಲಿ ಅವರನ್ನು ಕನ್ನಡ ಜನತೆಗೆ ತೋರಿಸಲು ಮಾಡಿದ ಪ್ರಯೋಗ ಪಲಿಸಲ್ಲಿಲ್ಲ ಎಂಬ ಬೇಸರವನ್ನು ನಿರ್ದೇಶಕ ಅವಿ ವ್ಯಕ್ತಪಡಿಸಿದರು.


  - FOR ADVERTISEMENT CONTACT -
 WWW.SWARUPASANDARSHAN.COM
                      9902523698