ತಪ್ಪದೇ ಈ ವಿಡಿಯೋ ನೋಡಿ......

ತೇರದಾಳ ಪಟ್ಟಣದ ನಾಡಗೌಡ ವಾಡೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು.
 
ತೇರದಾಳ : ರೈತರಿಗೆ ಕಳಪೆ ಬೀಜಗಳನ್ನು ವಿತರಿಸುವ ಮೂಲಕ ರೈತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವ ಹಾಗೂ ಕಳಪೆ ಬೀಜಗಳು ಹೇಗೆ ಬಂದವು ಎಂಬುವುದನ್ನು ತನಿಖೆ ಮಾಡಬೇಕು. ರೈತನಿಗೆ ಶೋಷಣೆ ಮಾಡುವುದನ್ನು ನಿಲ್ಲಿಸಬೇಕು. ಇದು ರಾಜ್ಯ ಮಟ್ಟದ ಗೋಲಮಾಲ ಆಗಿರುವುದನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯ ಮಾಡುವ ಮೂಲಕ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಹರಿಹಾಯ್ದರು.
 
 ಪಟ್ಟಣದ ನಾಡಗೌಡರ ವಾಡೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದವರು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದವರು ನಾವು ಇಲ್ಲಿಯವರೆಗೆ ಎರಡು ತಿಂಗಳು ಸಹಕಾರ ಕೊಟ್ಟಿದ್ದರು ಜನಪರ ಕೆಲಸಗಳನ್ನು ಮಾಡಿರುವುದಿಲ್ಲ. ರೈತರ ಕಷ್ಟಗಳಿಗೆ ಸ್ಪಂಧಿಸುತ್ತಿಲ್ಲವೆಂದು ಅವರು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ರೈತರಿಗೆ ಕಳಪೆ ಬೀಜಗಳನ್ನು ಕೊಡುವುದರಿಂದ ಅವರು ಹೇಗೆ ಅದರ ಪ್ರತಿಫಲ ಪಡೆಯಬೇಕು. ಸಕ್ಕೆರೆ ಪ್ಯಾಕ್ಟರಿಗಳು ಇದುವರೆಗೆ ಕಬ್ಬಿನ ಬಾಕಿ ಬಿಲ್ಲುಗಳನ್ನು ಕೊಟ್ಟಿರುವುದಿಲ್ಲ. ಇದನ್ನು ಜಿಲ್ಲಾಧಿಕಾರಿಗಳು ಮಾತನಾಡಿ ಕೊಡಿಸುವಂತ ಕೆಲಸವಾಗಬೇಕು. 

  ಕೈಮಗ್ಗ ನೇಕಾರರಿಗೆ 2000ರೂಗಳನ್ನು ನೇಕಾರರ ಸಮ್ಮಾನ ಯೋಜನೆಯಲ್ಲಿ ಕೊಟ್ಟಿರುತ್ತಾರೆ. ಇದನ್ನು ಪ್ರತಿ ವರ್ಷ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಪವರ್‍ಲೂಮ್ಸ್ ನೆಕಾರರಿಗೆ ಕೊರೊನಾ ಸಂಬಂಧ ಪಟ್ಟಂತೆ ಮಾತ್ರ ಎರಡು ಸಾವಿರ ರೂ.ಗಳೆಂದು ಹೇಳತ್ತಾರೆ. ಅದನ್ನು ಬಿಟ್ಟು ಎಲ್ಲ ನೇಕಾರರಿಗೆ ಪ್ರತಿ ವರ್ಷ ಎರಡು ಸಾವಿರ ರೂ.ಗಳನ್ನು ಕೊಡಬೇಕು. ಒಂದು ಸಮುದಾಯಕ್ಕೆ 2ಸಾವಿರ ಇನ್ನೊಂದು ಸಮುದಾಯಕ್ಕೆ 5ಸಾವಿರವೆಂದು ಹೇಳುವುದು ತಪ್ಪಾಗುತ್ತದೆ. ಈ ರೀತಿಯಾಗಿ ಸಮುದಾಯ ಸಮುದಾಯಗಳಲ್ಲಿ ತಾರತಮ್ಯ ಮಾಡುವುದನ್ನು ನಿಲ್ಲಿಸಬೇಕು. ಎಲ್ಲರನ್ನು ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂದರು. ಬೀದಿ ಬದಿ ವ್ಯಾಪಾರಿಗಳು, ಬಡಿಗ, ಕಮ್ಮಾರ, ಕುಂಬಾರ ಇಂತಹ ಕಾಯಕ ಜೀವಿಗಳು ಸೇರಿದಂತೆ ಹಲವಾರು ಸಮುದಾಯಗಳು ಸಂಕಟದಲ್ಲಿದ್ದಾರೆ. ಮಹಿಳೆಯರು ಸಾಲ ಸೌಲಭ್ಯಗಳನ್ನು ಪಡೆದು ಬಡ್ಡಿಗಳನ್ನು ಕಟ್ಟಲಾರದೆ ಅವರುಗಳು ಸಂಕಟದಲ್ಲಿದ್ದಾರೆ. ಪ್ಯಾಕೇಜಗಳನ್ನು ಘೋಷಣೆ ಮಾಡುವಲ್ಲಿಯೂ ಸಹ ತಾರತಮ್ಯ ಮಾಡುತ್ತಿರುವುದು ಖಂಡನೀಯ. ಅದನ್ನು ಎಲ್ಲರಿಗೂ ಸಮನಾಗಿ ಘೋಷಣೆ ಮಾಡಬೇಕು. ಕನಿಷ್ಠ 10ಸಾವಿರ ರೂಗಳನ್ನು ಕೊಡಬೇಕು. ವಲಸೆಗಾರರು ಜೀವನ ಮೂರಾಬಟ್ಟೆಯಾಗಿದೆ. ಅವರು ತಮ್ಮ ಊರಿಗೆ ಹೋಗಲು ಬಸ್‍ನ ವ್ಯವಸ್ಥೆ ಮಾಡಲಾಗಲಿಲ್ಲ. ಇದೆಲದರ ಬಗ್ಗೆ ಸರಕಾರ ಲಕ್ಷ ಕೊಟ್ಟಲ್ಲ. ಸರಿಯಾಗಿ ಯಾರಿಗೆ ದುಡ್ಡು ಮುಟ್ಟಬೇಕೋ ಅವರಿಗೆ ಮುಟ್ಟಿಲ್ಲ ಬರುವ ದಿನಮಾನಗಳಲ್ಲಿ ಬೀದಿಗಿಳಿದು ಹೋರಾಟ ನಮ್ಮ ಸಂಘಟನೆಗಳ ಮೂಲಕ ಹೋರಾಟ ಮಾಡುತ್ತೇವೆ. ಕೇಂದ್ರ ಸರಕಾರ ಒಂದಲ್ಲ ಒಂದು ರೀತಿಯಲ್ಲಿ ಬರೀ ಘೋಷಣೆಗಳನ್ನು ಮಾಡುತ್ತಿದೆ. 
ಯಾವುದೇ ರೀತಿಯಲ್ಲಿ ಸಮಸ್ಯೆಗಳ ಬಗೆ ಹರಿದಿಲ್ಲ. ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ. ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರಗಳ ಮೇಲೆ ಹಾಕಿ ಕೈಚೆಲ್ಲಿ ಕುಳಿತಿದೆ. ಮುಂಚಿತವಾಗಿ ಕೊರೊನಾ ನಿಯಂತ್ರಣ ಮಾಡಬೇಕಾಗಿರುವುದು ಸರಕಾರದ ವೈಫಲ್ಯವಿದು. ಒಂದೇ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮಾಧ್ಯಮಗಳ ಮೂಲಕ ಬಿಂಬಿಸುವಂತ ಕೆಲಸವನ್ನು ಮಾಡಿದೆ ಎಂದು ಹರಿಹಾಯ್ದರು. 

- FOR ADVERTISEMENT CONTACT -
                     9902523698
  ಈ ಸಂದರ್ಭದಲ್ಲಿ ತೇರದಾಳ ವಿಭಾಗದ ವೀಕ್ಷಕರಾದ ಡಾ.ಸಂಗಮೇಶ ಕೊಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ನಗರಘಟಕ ಅಧ್ಯಕ್ಷ ಅಶೋಕ ಅಳಗೊಂಡ, ಯುವ ದುರೀಣ ಪ್ರವೀಣ ನಾಡಗೌಡ, ಸುರೇಶ ಕಬಾಡಗಿ, ಗುರುರಾಜ ಕುಲಕರ್ಣಿ, ಪುರಸಭೆ ಮಾಜಿ ಅಧ್ಯಕ್ಷ ಹಣಮಂತ ರೋಡನ್ನವರ, ಪುರಸಭೆ ಮಾಜಿ ಸದಸ್ಯ ಪ್ರಭು ಗಸ್ತಿ, ರಾಜೇಸಾಬ ನಗಾರ್ಜಿ, ಪಿ.ಎಸ್.ಮಾಸ್ತಿ, ಶಿವಾನಂದ ನಡುವಿನಕೇರಿ, ನೇಮಣ್ಣ ಸಾವಂತನವರ, ಚಂದು ಬಾಳಿಕಾಯಿ, ಭೀಮಗೊಂಡ ಸದಲಗಿ, ಗೌತಮ ರೋಡಕರ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.


- FOR ADVERTISEMENT CONTACT -
  9902523698