ಸಂತೆ ಮಾಡುವವರಿಗಿಲ್ಲ ಕೊರೋನಾ ಚಿಂತೆ......!
ವರದಿ : ಕೆ. ಎಸ್. ರಂಗಸ್ವಾಮಿ 

ತೇರದಾಳ: ದೇಶದಲ್ಲಿ ಕೊರೋನಾ ಧಾಳಿಯಿಂದ ತತ್ತರಿಸಿ ಹೋದ ಜನತೆ ಈಗ ಸ್ವಲ್ಪ ಲಾಕಡೌನ ಸಡಿಲಿಕೆಯಿಂದ ಸಾರ್ವಜನಿಕರು ನಿರಮ್ಮಳಾಗಿ ಬದುಕಿನ ಸಂತೆ ಮಾಡುತ್ತಿದ್ದಾರೆ. ಆದರೆ ಬದುಕಿನ ಸಂತೆ ಮಾಡುವ ಭರಾಟೆಯಲ್ಲಿ ಬಹಳಷ್ಟು ಜನರು ತಮ್ಮ ಬೆನ್ನುಹಿಂದೆಯೆ ಅವಿತು ಕುಳಿತ ಹೆಮ್ಮಾರಿ ಕೊರೋನಾ ವೈರಸನ್ನು ಮರೆತಂತೆ ಕಾಣುತ್ತದೆ .ಏಕೆಂದರೆ ಹಲವಾರು ಸಾರ್ವಜನಿಕರು ಸರ್ಕಾರವು ತಿಳಿಸಿದ ಯಾವೊಂದು ಕ್ರಮವನ್ನು ಸರಿಯಾಗಿ ಪಾಲಿಸದೆ ಅನಾಹುತಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ      ಎನ್ನಬಹುದು. ಸರ್ಕಾರವು ನಮ್ಮ ಪ್ರಾಣ ರಕ್ಷಣೆಗಾಗಿಯೇ ಮಾಸ್ಕ ಧಾರಣೆ ಹಾಗೂ ಸಾಮಾಜಿಕ ಅಂತರ ಹೀಗೆ ಕೆಲವು ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳುವುದರ ಜೋತೆಗೆ ದೇಶವನ್ನು ಕೊರೋನಾ ಮುಕ್ತದೇಶವನ್ನಾಗಿ ಮಾಡಿ ಎನ್ನುವ ಮಹತ್ವದ ಜವಾಬ್ದಾರಿಯನ್ನು ನಮ್ಮ ಮೇಲೆ ಹಾಕಿದ್ದಾರೆ. ಆದರೆ ಸಾರ್ವಜನಿಕರು ಮಾತ್ರ ಇದನ್ಯಾವುದನ್ನು ಲೆಕ್ಕಿಸದೆ ತಮ್ಮ ಬದುಕಿನ ಬಂಡಿ ಸಾಗಿಸಲು ಅತೀ ಭರಾಟೆಯಿಂದ ಸಂತೆ ಮಾಡುತ್ತಿರವುದು ಆತಂಕದ ಸಂಗತಿ ಎಂದು ಹೇಳಬಹುದು. ಮಹಾಮಾರಿ ಕೊರೋನಾ ಬಗ್ಗೆ ಒಂದಿಷ್ಟು ಚಿಂತೆ ಇಲ್ಲದೆ ಸಂತೆ ಮಾಡತ್ತಿರುವುದು ಸರಿಯೇ ಎಂಬುದನ್ನು ನಮ್ಮಷ್ಟಕ್ಕೆ ನಾವು ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಕಾರಣ ನಿಮ್ಮದೆಂತಹ ಸಂತೆ ಇದ್ದರೂ ಸರಿ ಮಾಡಿಕೊಳ್ಳಿ, ಆದರೆ ಆ ಭರಾಟೆಯಲ್ಲಿ ನಿಮ್ಮ ಪ್ರಾಣಕ್ಕೆ ಆಪತ್ತನ್ನು ತಂದೊಡ್ಡಿಕೊಳ್ಳಬೇಡಿ. ನಿಮ್ಮ ಪ್ರಾಣ  ರಕ್ಷಣೆಯು ಎಲ್ಲಕ್ಕಿಂತಲೂ ಮಿಗಿಲಾದುದು, ಆದ್ದರಿಂದ ಮೊದಲು ಅದರ ಬಗ್ಗೆ ಹೆಚ್ಚಿನ ಗಮನ ಕೊಡಬೆಕಾದುದು ನಿಮ್ಮ ಆದ್ಯ ಕರ್ತವ್ಯವಾಗಿರಲಿ ಎಂಬುದು ಪತ್ರಿಕೆಯ ಉದ್ದೇಶವಾಗಿದೆ.    

- FOR ADVERTISEMENT CONTACT-
                  9902523698