ಬನಹಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗು ಸ್ಯಾನಿಟೈಜರ್‍ಗಳನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್ ಹಾಗು ಸತೀಶ ಹಜಾರೆ ಕೊಡಮಾಡಿದರು.
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗು ಸ್ಯಾನಿಟೈಜರ್ ವಿತರಣೆ
ರಬಕವಿ-ಬನಹಟ್ಟಿ,ಜೂ24: ಇಂದಿನಿಂದ ಜುಲೈ 3 ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಾವಿರಕ್ಕೂ ಅಧಿಕ ಮಾಸ್ಕ್ ಹಾಗು ಸ್ಯಾನಿಟೈಜರ್‍ನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್ ನೀಡಿದರು.
ಯಾವುದೇ ರೀತಿಯ ಭಯ ಇಲ್ಲದೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಪಾಲಕರು ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು. ಇದೇ ಸಂದರ್ಭ ಉಪಪ್ರಾಚಾರ್ಯ ರವೀಂದ್ರ ಬಸಗೊಂಡನವರ ಸೇರಿದಂತೆ ಅನೇಕ ಶಿಕ್ಷಕರಿದ್ದರು.
ಹಜಾರೆ ಫೌಂಡೇಶನ್‍ನಿಂದ: ರಬಕವಿ-ಹೊಸೂರನ ಹಜಾರೆ ಫೌಂಡೇಶನ್‍ನ ಸತೀಶ ಹಜಾರೆ ನಾಲ್ಕು ಸಾವಿರ ಮಾಸ್ಕ್‍ಗಳನ್ನು ನೀಡಿದ್ದಾರೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನೇಮಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಆರ್‍ಟಿಇ ನೋಡಲ ಅಧಿಕಾರಿ ರವೀಂದ್ರ ಸಂಪಗಾವಿ, ಬಿ. ಡಿ. ನೇಮಗೌಡ ಸೇರಿದಂತೆ ಅನೇಕರು ಇದ್ದರು.
ದೀನ್‍ದಯಾಳ್ ಯೋಜನೆ: ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿ ನಗರಸಭೆಯು ಪ್ರಸಕ್ತ ಸಾಲಿನಲ್ಲಿ ದೀನ್‍ದಯಾಳ್ ಅಂತ್ಯೋದಯ ಯೋಜನೆ ಅಭಿಯಾನದಡಿ ನಗರ ಪ್ರದೇಶದ ಆಯ್ದ ಬಡ ಫಲಾನುಭವಿಗಳಿಂದ ಸ್ವಯಂ ಉದ್ಯೋಗ, ಗುಂಪು ಉದ್ಯೋಗಕ್ಕೆ ಬ್ಯಾಂಕ ಸಾಲ ಪಡೆಯಲು ಹಾಗೂ ಕೌಶಲ್ಯ ಆಧಾರಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜೂ.26 ರೊಳಗೆ ಪೌರಾಯುಕ್ತರು, ನಗರಸಭೆ, ರಬಕವಿ-ಬನಹಟ್ಟಿ ಇವರಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ 08353-230236 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


        - FOR ADVERTISEMENT CONTACT -
                    - 9902523698 -