ರಬಕವಿಯಲ್ಲಿ ರಾಹುಲ್ ಗಾಂಧಿ ಜನ್ಮೋತ್ಸವ ನಿಮಿತ್ತ ಕಡುಬಡವರಿಗೆ ದಿನಸಿ ಕಿಟ್ ವಿತರಣೆ ಸಂದರ್ಭ ಕಾಂಗ್ರೆಸ್ ಮುಖಂಡ ಡಾ. ಪದ್ಮಜೀತ ನಾಡಗೌಡಾ ಪಾಟೀಲ ಮಾತನಾಡಿದರು.
ರಾಹುಲ್ ಗಾಂಧಿ ಜನ್ಮದಿನಾಚರಣೆ
ಸಂಕಷ್ಟ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ರಬಕವಿ-ಬನಹಟ್ಟಿ,ಜೂ19: ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಪಡಿತರ, ಆಧಾರ್ ಸೇರಿದಂತೆ ಇತರೆ ದಾಖಲೆಗಳಿಲ್ಲದೆ ಕೊರೊನಾ ಲಾಕ್‍ಡೌನ್ ಸಂದರ್ಭ ತೀವ್ರ ಸಮಸ್ಯೆ ಎದುರಿಸುತ್ತಿರುವ ನೂರಾರು ಕುಟುಂಬಗಳಿಗೆ ರಾಹುಲ್ ಗಾಂಧಿ ಜನ್ಮದಿನೋತ್ಸವ ನಿಮಿತ್ತ ದಿನಸಿ ಕಿಟ್ ವಿತರಣೆ ಮಾಡಲಾಯಿತೆಂದು ಕಾಂಗ್ರೆಸ್ ಮುಖಂಡ ಡಾ. ಪದ್ಮಜೀತ ನಾಡಗೌಡಾ ಪಾಟೀಲ ಹೇಳಿದರು.
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಸಾವಿರಾರು ಕುಟುಂಬಗಳಿಗೆ ತರಕಾರಿ ಹಾಗು ದಿನಸಿ ಕಿಟ್ ಸೇರಿದಂತೆ ಅನೇಕ ಸೇವೆಯನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಮಾಡಿದೆ. ಸದ್ಯ ರಾಹುಲ್ ಗಾಂಧಿಯವರ 50ನೇ ಜನ್ಮ ದಿನೋತ್ಸವವನ್ನು ಯಾವದೇ ಅದ್ದೂರಿ ರೀತಿಯಲ್ಲಿ ಆಚರಿಸುವ ಬದಲಾಗಿ ಕಟ್ಟಕಡೆಯ ಕುಟುಂಬಗಳಿಗೆ ಅಹಾರ ಕಿಟ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡುವಲ್ಲಿ ಕಾರ್ಯಕರ್ತರ ವಿಶ್ವಾಸದೊಂದಿಗೆ ನೆರವೇರಿಸಿದೆ ಎಂದರು.
ಶಂಕರ ಸೊರಗಾಂವಿ ಮಾತನಾಡಿ, ರೋಟಿ-ಕಪಡಾ-ಮಕಾನ್ ಕಾಂಗ್ರೆಸ್‍ನ ಧ್ಯೇಯೋದ್ದೇಶದೊಂದಿಗೆ 7 ದಶಕಗಳಿಂದ ದೇಶವನ್ನು ಕಟ್ಟಿದೆ. ಸದ್ಯ ಕೇವಲ 6 ವರ್ಷಗಳಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ದಯನೀಯ ಸ್ಥಿತಿ ತಲುಪಿದೆ. ಜನಹಿತ ಯೋಜನೆಗಳು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಬಿಜೆಪಿ ಕೇವಲ ಹೊಗಳು ಭಟ್ಟರೊಂದಿಗೆ ದೇಶ ಮುನ್ನಡೆಸುತ್ತಿದ್ದು, ಸಾಧನೆ ಶೂನ್ಯವೆಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ವೇದಿಕೆ ಮೇಲೆ ಪಕ್ಷದ ಹಿರಿಯರಾದ ನೀಲಕಂಠ ಮುತ್ತೂರ, ಚಿದಾನಂದ ಗಾಳಿ, ಪ್ರವೀಣ ನಾಡಗೌಡ, ಸಾಗರ ಚವಜ, ನೀಲೇಶ ದೇಸಾಯಿ, ಬರಮು ಉಳ್ಳಾಗಡ್ಡಿ, ಚೇತನ ಕಲಾಲ, ಬಕ್ಕರ ಬಂಡೆಬುರುಜ, ಚಿದಾನಂದ ಮಟ್ಟಿಕಲ್ಲಿ, ರವಿ ಬಾಡಗಿ, ಗುರುನಾಥ ಬಕರೆ, ಬಾಹುಬಲಿ ಪಾಟೀಲ, ಶೇಖರ ಹಳಿಂಗಳಿ, ಸಂಜು ಜೋತಾವರ, ಸೂರಜ ಅವಟಿ, ಸಂಜಯ ಅಮ್ಮಣಗಿ ಉಪಸ್ಥಿತರಿದ್ದರು.


     - FOR ADVERTISEMENT CONTACT -
                     - 9902523698 -