ಬದುಕು ಇರೋದು ಸಾಯೋಕಲ್ಲ.. ಸಾಧಿಸೋಕೆ ಅನ್ನೋ ಸಂದೇಶ ಕೊಟ್ಟ 'ಚಿಚ್ಚೋರೆ' ಚಿತ್ರದ ನಾಯಕ ಸುಶಾಂತ್..
ಇಂದು ತಾವಾಗಿಯೇ ಸಾವಿಗೆ ಕೊರಳೊಡಿದ್ದಾರೆ.
ವಾಸ್ತವ ಅದೆಷ್ಟು ದುರಂತಮಯವಾಗಿದೆ...
ಕಳೆದ ವಾರ ಚಿರಂಜೀವಿ ಹೆಸರಿನ ನಟ ಅಕಾಲಿಕ ಮರಣಕ್ಕೆ ತುತ್ತಾದರೆ..
ಇಂದು ಭರವಸೆಯ ಪ್ರತಿಭೆ, ಅದ್ಭುತ ಕಲಾವಿದ ತಮ್ಮ ಬದುಕಿಗೆ ತಾವೇ ಅಂತ್ಯ ಬರೆದಿದ್ದಾರೆ.
ಧೋನಿ ಬಯೋಪಿಕ್ ನೋಡಿದಾಗ ಈತನ ಅಭಿನಯ ಕಂಡು ಪರವಶನಾಗಿದ್ದೆ.. ಅಭಿಮಾನಿಯಾದೆ.
ಬಹುಶಃ ಬೇರೆ ಯಾರಿಂದಲೂ ಅವರ ಪಾತ್ರವನ್ನು ಸುಶಾಂತ್ ಗಿಂತ ಚೆನ್ನಾಗಿ ನಿಭಾಯಿಸುವುದು ಸಾಧ್ಯವಿರಲಿಲ್ಲ ಅನ್ನಿಸುವಂತಹ ಅಭಿನಯ.
ಬದುಕು ಎಷ್ಟೇ ಕಷ್ಟವೊಡ್ಡಿದರು ಬದುಕಿಗೆ ಇತಿಶ್ರೀ ಬರೆವ ಸಂದರ್ಭ ಸಂಕಷ್ಟ ಯಾರಿಗೂ ಬರಬಾರದು.
ಅವನಿಲ್ಲವಾಗಿದ್ದಕ್ಕೆ ಬೇಸರವಿದೆ, ಹಾಗೆ ಆತನೇ ತನ್ನ ಬದುಕಿನ ಪಯಣ ನಿಲ್ಲಿಸಿದ್ದಕ್ಕೆ ವಿಪರೀತ ಕೋಪವಿದೆ, ಬೇಜಾರಿದೆ.
ಸುಶಾಂತ್... ತಪ್ಪು ಮಾಡಿದ್ರಿ....
- FOR ADVERTISEMENT CONTACT -
- 9902523698-

Social Plugin