ತಪ್ಪದೇ ಈ ಮೇಲಿನ ವಿಡಿಯೋ ನೋಡಿ....
ತೇರದಾಳ ಪಟ್ಟಣದ ಪುರಸಭೆ ಉದ್ಯಾನವನದಲ್ಲಿ ಸರಾಯಿ ಡಬ್ಬಿಗಳು ಎಲ್ಲೆಂದರಲ್ಲಿ ಇದ್ದಿವೆ.

ದುಶ್ಚಟಗಳ ತಾಣವಾದ ಉದ್ಯಾನವನ
ತೇರದಾಳ : ಪಟ್ಟಣದ ಐತಿಹಾಸಿಕ ಕೆರೆಯ ಪಕ್ಕದಲ್ಲಿರುವ ಉದ್ಯಾನವನ ದುಶ್ಚಟಗಳ ತಾನವಾಗಿ ಪರಿಣಮಿಸಿದೆ. ಉದ್ಯಾನವನದಲ್ಲಿ ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳು ಹಾಗೂ ಸರಾಯಿ ಡಬ್ಬಿಗಳು ಬಿದ್ದಿವೆ ಇದರಿಂದ ಮಲೀನವಾದ ಉದ್ಯಾನವನ ಅವಸಾನದ ಅಂಚಿನಲ್ಲಿದೆ.
  ತೇರದಾಳ ಪಟ್ಟಣವನ್ನು ಸುಂದರಗೊಳಿಸುವ ಉದ್ದೇಶದಿಂದ ಮಾಜಿ ಸಚಿವೆ ಉಮಾಶ್ರೀಯವರು ಸಾರ್ವಜನಿಕರ ಆರೋಗ್ಯ ಹಾಗೂ ಪಟ್ಟಣದ ಸೌಂದರ್ಯದ ಹಿತದೃಷ್ಟಿಯಿಂದ ಪಟ್ಟಣದ ಐತಿಹಾಸಿಕ ಕೆರೆಯ ದಂಡೆಯ ಮೇಲೆ ಉದ್ಯಾನವನ ನಿರ್ಮಿಸಿದ್ದರು. ಸಾಕಷ್ಟು ಖರ್ಚು ಮಾಡಿ ಯಾವ ಉದ್ದೇಶಕ್ಕಾಗಿ ಅದನ್ನು ನಿರ್ಮಿಸಲಾಗಿತ್ತೋ ಅದು ಈಗ ಆ ಉದ್ದೇಶಕ್ಕಾಗಿ ಉಪಯೋಗವಾಗುತ್ತಿಲ್ಲ. ಉದ್ಯಾನವನ ಈಗ ದುಶ್ಚಟಗಳ ತಾಣವಾಗಿದೆ ಎಂದು ಹೇಳಬಹುದು.
   ಉದ್ಯಾನ ವನ ಸುಂದರ ಹೂ,ಗಿಡ,ಮರ ಬಳ್ಳಿಗಳಿಂದ ಕಂಗೊಳಿಸಬೇಕಾದ ಉದ್ಯಾನವನವು ಈಗ ಸರಾಯಿ ಬಾಟಲಿ, ಸರಾಯಿ ಡಬ್ಬಿ ಹಾಗೂ ಬೀಡಿ, ಸಿಗರೇಟುಗಳಿಂದ ಮಲೀನವಾಗಿ ಅವಸಾನದ ಅಂಚಿನಲ್ಲದೆ. ಕಾರಣ ಸಂಬಂಧ ಪಟ್ಟವರು ಕೂಡಲೆ ಈ ಉದ್ಯಾನವನಗಳಿಗೆ ಮರು ಜೀವ ನೀಡಿ ಸದುದ್ದೇಶಕ್ಕೆ ಬಳಕೆಯಾಗುವಂತೆ ನೋಡಿ ಕೊಳ್ಳಬೇಕೆಂದು ಸಾರ್ವಜನಿಕರು ಈ ಮೂಲಕ ಆಗ್ರಹಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ : ಕೊರೊನಾ -19 ಇರುವುದರಿಂದ ನಾವು ಅದರ ಕಡೆ ಲಕ್ಷವಹಿಸುವದನ್ನು ಬಿಟ್ಟಿದ್ದೇವೆ. ಅದನ್ನು ನಾನು ಈಗಲೇ ಸ್ವಚ್ಚ ಮಾಡುವಂತೆ ಕ್ರಮವಹಿಸಿ  ಅಲ್ಲಿಗೆ ಬರುವ ವೆಸನಿಕರ ಮೆಲೆ ಕ್ರಮ ಕೈಗೊಳ್ಳುವಂತೆ ಪೋಲಿಸ್ ಇಲಾಖೆಗೆ ತಿಳಿಸಿಲಾಗುದು. ಹಾಗೂ ಇನ್ನುಮುಂದೆ ಇಲ್ಲಿ ಇಂತಹ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

- FOR ADVERTISEMENT CONTACT -
                     9902523698
ತೇರದಾಳ ಪಟ್ಟಣದ ಗುರುಕುಲ ಆವರಣದಲ್ಲಿರುವ ಗುರುಕುಲ ಕಲ್ಯಾಣ ಮಂಟಪದಲ್ಲಿ ಕ್ವಾರಂಟೈನ್ ಮಾಡಲಾದ 70ಜನರಲ್ಲಿ 40ಜನರನ್ನು ಬಿಡುಗಡೆ ಮಾಡಿದರು.

ತೇರದಾಳ : ಪಟ್ಟಣದ ಗುರುಕುಲ ಆವರಣದಲ್ಲಿರುವ ಗುರುಕುಲ ಕಲ್ಯಾಣ ಮಂಟಪದಲ್ಲಿ ಬೇರೆಬೇರೆ ರಾಜ್ಯಗಳಿಂದ ಬಂದಿರುವ 70ಜನರನ್ನು ಮೇ12 ರಂದು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಜೂನ 1ರಂದು ಅವರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನು ತಾಲೂಕಾ ಆಡಳಿತದ ಸಹಕಾರದೊಂದಿಗೆ ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು. ಅವರ ತಪಾಸಣೆ ವರದಿ ಬಂದಿದ್ದು 70 ಜನರಲ್ಲಿ 40 ಜನರ ವರದಿಯು ನೆಗಟೀವ್ ಬಂದಿದ್ದರಿಂದ ಅವರನ್ನು ಸಾಂಸ್ಥಿಕ ಕ್ವಾರಂಟೈನ್‍ದಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಿ ಕೊಡಲಾಯಿತು.
   ಮೇಲಾಧಿಕಾರಿಗಳ ನಿರ್ದೇಶನದಂತೆ ಮತ್ತೋಮ್ಮೆ 40 ಜನರ ಆರೋಗ್ಯ ತಪಾಸಣೆ ಮಾಡಿ 7 ದಿನಗಳವರೆಗೆ ಹೋಮ್ ಕ್ವಾರಾಂಟೈನ್ ಮಾಡುವಂತೆ ಹೇಳಿ ಅವರ ಮನೆಗಳಿಗೆ ಕಳುಹಿಸಲಾಯಿತು. ಮುರಾರ್ಜಿದೇಸಾಯಿ ವಸತಿ ಶಾಲೆಯಲ್ಲಿರುವ ಇಬ್ಬರನ್ನು ಸಹ ಮಂಗಳವಾರ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಯಿತು. ಇನ್ನೂ 30ಜನರ ವರದಿಗಾಗಿ ಕಾಯುತ್ತಿರುವುದಾಗಿ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ತಿಳಿಸಿದರು.
  ಗೊಂದಲದ ಸಂಗತಿ : ಕೋವಿಡ್-19ದಿಂದಾಗಿ ಕ್ವಾರಂಟೈನ್ ಮಾಡಲಾಗಿದ್ದ 70 ಜನರಲ್ಲಿ ತಂದೆ-ತಾಯಿ, ಚಿಕ್ಕ ಚಿಕ್ಕ ಮಕ್ಕಳು ಸಹ ಇದ್ದಾರೆ. ಆದರೆ  ಅಲ್ಲಿರುವ ಎಲ್ಲರದೂ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು. ವರದಿ ಬರುವಾಗ ಮಾತ್ರ ತಂದೆ –ತಾಯಿ ಇಬ್ಬರ ವರದಿ ಬಂದು 3ವರ್ಷದ ಮಗುವಿನ ವರದಿ ಮಾತ್ರ ಬಂದಿಲ್ಲ ಇದರಿಂದಾಗಿ ತಂದೆ-ತಾಯಿಗಳು ಮಗುವಿನ ಸಲುವಾಗಿ ಅಲ್ಲಿಯೇ ಉಳಿಯಬೇಕೋ ಬೇಡವೋ ಎಂಬ ಗೊಂದಲ ಸೃಷ್ಟಿಯಾದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟೆ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪಿಎಸ್‍ಐ ವಿಜಯ ಕಾಂಬಳೆ, ಪುರಸಭೆ ಸದಸ್ಯ ಕಾಶೀನಾಥ ರಾಠೋಡ, ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ, ಮಹಾದೇ ಯಲ್ಲಟ್ಟಿ ಸೇರಿದಂತೆ ಆರೋಗ್ಯ ಅಧಿಕಾರಿಗಳು ಇದ್ದರು.

- FOR ADVERTISEMENT CONTACT -
                     9902523698