ಶೈಕ್ಷಣಿಕವರ್ಷ ಆರಂಭ, ಪಾಲಕರ ಅಭಿಪ್ರಾಯ ಸಂಗ್ರಹ.
ತೇರದಾಳ:ಕೊವಿಡ್19 ಕಾರಣದಿಂದಾಗಿ ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಅನಿರ್ದಿಷ್ಟಾವಧಿವರೆಗೆ ರಜೆ ಘೋಷಿಸಿತ್ತು. ಆದರೆ ಈಗ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಕಾರಣ ಶಾಲೆಗಳನ್ನು ಪುನಃ ಪ್ರಾರಂಭಿಸಬೇಕಾಗಿದ್ದು ಇದೊಂದು ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು,ಈಗಾಗಲೇ ಶಾಲೆಗಳು ಮೇ 28 ರಂದೇ ಪ್ರಾರಂಭವಾಗಬೇಕಾಗಿತ್ತು. ಆದರೆ ಕೊರೋನಾ ಕಾರಣದಿಂದ ಇನ್ನೂವರೆಗೂ ಸರಕಾರ ಈ ಬಗ್ಗೆ ಏಕಮುಖವಾಗಿ ನಿರ್ಧಾರ ತಗೆದುಕೊಳ್ಳದೆ ಪಾಲಕರ ಅಭಿಪ್ರಾಯವನ್ನು ಸಂಗ್ರಹಿಸಿ ಮುಂದಿನ ತೀರ್ಮಾಣ ತೆಗೆದುಕೊಳ್ಳುವ ಮಾಡಿದ್ದು ಆ ಪ್ರಕಾರ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶ್ರೀ ಜಿನಸೇನಾಚಾರ್ಯ ವಿದ್ಯಾಮಂಡಳದ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕರು, ಶಿಕ್ಷಕರು ಸರಕಾರದ ಆದೇಶದ ಪ್ರಕಾರ, ಶಾಲೆಯನ್ನು ಪ್ರಾರಂಭ ಮಾಡುವ ಕುರಿತು ಹಂತ ಹಂತವಾಗಿ ಪಾಲಕರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಸಾಕಷ್ಟು ಪಾಲಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿದ್ದ ಅನೇಕ ಪಾಲಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಕೆಲವು ಪಾಲಕರು ಪ್ರಸ್ತುತ ಮಕ್ಕಳ ಸಂಖೈಗಳಿಗನುಗುನವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿಗಳನ್ನು ಪ್ರಾರಂಭಿಸುವುದು, ಅಥವಾ ಎರಡು ಹಂತದಲ್ಲಿ ಅಂದರೆ ಬೆಳಿಗ್ಗೆ 8 ರಿಂದ ಮದ್ಯಾಹ್ನ 12ರವರೆಗೆ ಮೊದಲನೇ ಅವಧಿ ಹಾಗೂ ಮದ್ಯಾಹ್ನ 1 ರಿಂದ 5ರವರೆಗೆ ಎರಡನೇ ಅವದೀ ಈ ರೀತಿಯಾಗಿ ಅಥವಾ ತರಗತಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಒಂದು ದಿವಸ ಬಿಟ್ಟು ಒಂದು ದಿವಸ ಹೀಗೆ ತರಗತಿಗಳನ್ನು ಪ್ರಾರಂಬಿಸುವ ತಮ್ಮ ಅಭಿಪ್ರಾಯ ತಿಳಿಸಿದರು. ಸಂಸ್ಥೆಯವರು ಪಾಲಕರ ಅಭಿಪ್ರಾಯಗಳನ್ನು ಕ್ರೂಡೀಕರಿಸಿ ಸರಕಾರಕ್ಕೆ ಕಳುಹಿಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಬಾಬು ಸಾವಂತನವರ, ಕಾಯಾಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ ಮತ್ತು ಕಾರ್ಯದರ್ಶಿಗಳಾದ ಶ್ರೀ ನಿಲೇಶ ದೇಸಾಯಿ ಹಾಗೂ ಸಂಸ್ಥೆಯ ಅಂಗಸಂಸ್ಥೆಗಳ ಮುಖ್ಯಾಧ್ಯಾಪಕರು ಮತ್ತು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯವರು ಮತ್ತು ಹಲವಾರು ಪಾಲಕರು ಉಪಸ್ಥಿತರಿದ್ದರು.
- FOR ADVERTISEMENT CONTACT -
9902523698



Social Plugin