ಇದ್ದವರು ಬಿಡಿ, ಬಡವರಿಗೆ ಕೊಡಿ-ಸಿದ್ದು ಸವದಿ

ವರದಿ : ಕೆ.ಎಸ್.ರಂಗಸ್ವಾಮಿ 

ತೇರದಾಳ: ಮಾರಕ ಕೊರೋನಾ ವೈರಸ್ ಬಡಕುಟುಂಬಗಳನ್ನು ಬದುಕಲು ಬೀಡದೆ ಉಪವಾಸ ಬಿಳುವಂತೆ ಮಾಡಿದೆ.ಆದರೆ ಸರಕಾರವು ಸಹ ಬಡವರ ಹಸಿವನ್ನು ನೀಗಿಸಲು ನಾನಾ ರೀತಿಯಿಂದ
ಕಾರ್ಯಗಳನ್ನು ಮಾಡುತ್ತಲೇ ಇದೆ. ಅದುಅಲ್ಲದೆ ಇಂತಹ ಸಂದಿಗ್ದ ಪರಿಸ್ಥಿತಿಯನ್ನು ಗುರುತಿಸಿ ಸಾಕಷ್ಟು ದಾನಿಗಳು ಸಹ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ. 
  ಪಟ್ಟಣದಲ್ಲಿ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿಯವರು ಕಡು ಬಡವರನ್ನು ಗುರುತಿಸಿ ಸುಮಾರು 5ಸಾವಿರ ದಿನಸಿ ಕಿಟ್‍ಗಳ ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮಲ್ಲಿ ಎಷ್ಟೋ ಜನರು ಸ್ಥಿತಿವಂತರಿದ್ದು ಅಂತವರು ಬಡವರನ್ನು ಗುರುತಿಸಿ ಸಹಾಯ ಮಾಡಿದರೆ ಅವರಿಗೆ ಬದುಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಕಿಟ್ಟಗಳನ್ನು ಇದ್ದವರು ತಗೆದುಕೊಳ್ಳದೆ ಬಡವರಿಗೆ ಸಿಗುವಂತೆ ಸಹಾಯ ಮಾಡಬೇಕು. ಈಗ ಜೀವ ಉಳಿಯುವುದು ಮುಖ್ಯವಾಗಿದೆ. ಆದ್ದರಿಂದ ನಾವೆಲ್ಲರೂ ಬಡವರಿಗೆ ಸಹಾಯ ಮಾಡುವ ಅವಶ್ಯಕತೆ ಇದೆ. ಬಡವರಿಗಾಗಿಯೇ ಕೊಡಲು ತಯಾರು ಮಾಡಿದ ಈ ಕಿಟ್‍ಗಳನ್ನು ದಯವಿಟ್ಟು ಬೇರೆಯವರು ತಗೆದುಕೊಳ್ಳಬಾರದು. ಬಡವರ ಹಸಿವನ್ನು ಕಸಿದುಕೊಳ್ಳುವುದು ಸರಿಯಲ್ಲ. ಇದು ಸದುಪಯೋಗವಾಗಬೇಕು. ಪ್ರತಿ ಬಡ ಕುಟುಂಬಕ್ಕೆ ಈ ಕಿಟ್ ಸಿಗಬೇಕು. ಇದ್ದವರು ಬಿಟ್ಟರೆ ಇನ್ನು ಕಡು ಬಡವರನ್ನು ಗುರುತಿಸಿ ಅವರಿಗೆ ಕೊಡಬಹುದು. ಈಗಾಗಲೇ ಕಾರ್ಯಕರ್ತರು ಪಟ್ಟಣದಲ್ಲಿರುವ ಬಡವರನ್ನು ಗುರುತಿಸಿ ಕರಪತ್ರ ಹಂಚಿಕೆ ಮಾಡಿದ್ದು ಕಾರಣ ಕರ ಪತ್ರವಿದ್ದರು ಮಾತ್ರ ಈ ಕಿಟ್‍ನ್ನು ಪಡೆಯಬೇಕು ಎಂದರು.
  ಈಗಾಗಲೇ ಮತಕ್ಷೇತ್ರಾದ್ಯಂತ ಸುಮಾರು 20 ಸಾವಿರ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ. ತೇರದಾಳ ಪಟ್ಟಣದಲ್ಲಿ 5ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್‍ಗಳನ್ನು ಇಂದಿನಿಂದ ವಿತರಣೆ ಮಾಡಲು ಪ್ರಾರಂಭವಾಗಿದ್ದು ಇನ್ನುಳಿದ ಬಡ ಕುಟುಂಬಗಳಿಗೆ ಸ್ವತ ನಮ್ಮ ಕಾರ್ಯಕರ್ತರು ತಮ್ಮ ಮನೆಗೆ ಬಂದು ಕಿಟ್ ಹಂಚಿಕೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. 
  ಜನರ ವರ್ತನೆಗೆ ಶಾಸಕರ ಅಸಮಾಧಾನ : ಪಟ್ಟಣದಲ್ಲಿಂದು ಕಿಟ್ ವಿತರಣೆ ಸಂದರ್ಭದಲ್ಲಿ ಜನರು ಮುಗಿ ಬಿದ್ದಿದ್ದನ್ನು ಕಂಡು ಬೇಸರಗೊಂಡು ಮುಗಿ ಬಿದ್ದ ಜನರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪದೇ ಪದೇ ವಿನಂತಿಸಿಕೊಂಡರಲ್ಲದೆ ನಾವೆಲ್ಲ ಕೊರೊನಾ ಜೊತೆಗೆ ಜೀವನ ಮಾಡಬೇಕಾಗಿದೆ. ಆದ್ದರಿಂದ ತಾವೆಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ ಧರಿಸಲು ತಿಳಿಹೇಳಿದರು. 
  ಈ ಸಂದರ್ಭದಲ್ಲಿ ರಮೇಶ ಅವರಾದಿ, ಶಂಕರ ಹೊಸಮನಿ, ಸುರೇಶ ಅಕ್ಕಿವಾಟ, ಶಿವಾನಂದ ನಿವರಗಿ, ಮಹೇಶ ಯಾದವಾಡ, ಮಲ್ಲಪ್ಪ ಮುಕರಿ, ಮಗಯ್ಯ ತೆಳಗಿನಮನಿ, ಪ್ರಭು ಬಾಗಿ, ಮಹಾವೀರ ಕೊಕಟನೂರ, ಸುರೇಶ ರೇಣಕೆ, ಬಸಪ್ಪ ಮುಕರಿ, ಪಿಎಸ್‍ಐ ವಿಜಯ ಕಾಂಬಳೆ ಸೇರಿದಂತೆ ಭಾಜಪ ಕಾರ್ಯಕರ್ತರು ಇನ್ನಿತರರು ಇದ್ದರು.  

2. ತಾಲ್ಲೂಕಾ ಹೋರಾಟ ಸಮೀತಿಯಿಂದ ಶಾಸಕರ ಭೇಟಿ
ತೇರದಾಳ: ಪಟ್ಟಣದಲ್ಲಿಂದು ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿಯವರನ್ನು ತೇರದಾಳ ತಾಲ್ಲೂಕ ಹೋರಾಟ ಸಮೀತಿಯ ಅಧ್ಯಕ್ಷರಾದ ಭುಜಬಲಿ ಕೆಂಗಾಲಿಯವರು ತಮ್ಮ ಹೋರಾಟ ಸಮೀತಿಯ ಸದಸ್ಯರೊಂದಿಗೆ ಭೇಟಿ ಮಾಡಿ ತೇರದಾಳ ತಾಲ್ಲೂಕಿಗೆ ಸಂಬಂಧಿಸಿದಂತೆ ಹಳ್ಳಿಗಳ ವಿಂಗಡಣೆಯ  ವಿಳಂಬ ಕುರಿತು ಚರ್ಚೆಮಾಡಿದರು.ಈ ಕುರಿತು ಮಾತನಾಡಿದ ಶಾಸಕರು ಕೊರೋನಾ ವೈರಸ್ ಕಾರಣದಿಂದ ಈ ಕೆಲಸ ವಿಳಂಬವಾಗಿದೆ ಕಾರಣ ತಾವು ಯಾವುದೇ ಕಾರಣಕ್ಕೂ ಚಿಂತಿಸುವ ಕಾರಣವಿಲ್ಲ ಕೂಡಲೆ ಈ ಬಗ್ಗೆ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಹೋರಾಟ ಸಮೀತಿಯ ಅಧ್ಯಕ್ಷ ಭುಜಬಲಿ ಕೆಂಗಾಲಿ ತೇರದಾಳ ಪಟ್ಟಣದ ಬಹು ದಿನಗಳ ಕನಸು 
ನನಸಾಗಿದೆ. ಆದರೂ ಸಹಇನ್ನೂ ಕೆಲವು ಕಚೇರಿಕೆಲಸ ಕಾರ್ಯಗಳು ಪೂರ್ಣವಾಗುವ ಅವಶ್ಯಕತೆಇದ್ದು 
ಆದ್ದರಿಂದ ಇನ್ನೂ ನಮ್ಮ ಕೆಲಸ ಬಾಕಿ ಇದೆ. ಮಾನ್ಯ ಶಾಸಕರು ಸಹ ಈ ಬಗ್ಗೆ ವಿಶೇಷ ಆಸಕ್ತಿ ತೊರಿಸಿದ್ದು ಕಾರಣ ಇಷ್ಟರಲ್ಲಿಯೇ ತೇರದಾಳ ತಾಲೂಕಿಗೆ ಸಂಬಂಧಿಸಿದಂತೆ ಹಳ್ಳಿಗಳ ವಿಂಗಡಣೆಯಾಗುವ ಬರವಸೆ ನಮಗಿದೆ. ಕಾರಣ ಮಾನ್ಯ ಶಾಸಕರು ಈ ಬಗ್ಗೆ ಕೂಡಲೆ ಗಮನ ಹರಿಸಿ ನಮಗೆ ಸ್ಪಂದಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.   


- FOR ADVERTISEMENT CONTACT -
                  9902523698