ವರದಿ : ಕೆ. ಎಸ್. ರಂಗಸ್ವಾಮಿ.
ಸಾಮಾನ್ಯರನ್ನು ಗುರುತಿಸುವ ಪಕ್ಷವೆಂದರೆ ಅದು ಬಿಜೆಪಿ ಪಕ್ಷ. – ಈರಣ್ಣ ಕಡಾಡಿ
ತೇರದಾಳ: ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷ, ಇಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಇಲ್ಲಿ ಗೌರವವಿದೆ. ಹಿಂದಿನ ಇತಿಹಾಸವನ್ನು ಮೆಲುಕು ಹಾಕಿ ನೋಡಿದರೆ ರಾಜಕೀಯ ಪಕ್ಷದಲ್ಲಿ ಸ್ಥಾನಮಾನ ಪಡೆಯಬೇಕಾದರೆ ಅದರದೆ ಆದ ಕೆಲವೊಂದು ಮೇಲ್ದರ್ಜೆಯ ಅರ್ಹತೆಗಳು ಇರಬೇಕಾಗಿತ್ತು. ಆತನು ಪ್ರಭಾವಿ ವ್ಯಕ್ತಿಯಾಗಿರಬೇಕು ಅಥವಾ ಆರ್ಥಿಕತೆಯಿಂದ ಸದೃಡರಾಗಿರಬೇಕು ಹೀಗೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಪ್ರಭಾವ ಹೊಂದಿದವರಿಗೆ ಮಾತ್ರ ರಾಜಕೀಯದಲ್ಲಿ ಸ್ಥಾನಮಾನ ಸಿಗುತ್ತಿತ್ತು. ಇಂತಹ ವ್ಯವಸ್ಥೆಗೆ ಇತಿಶ್ರೀ ಹಾಡಿದ್ದು ನಮ್ಮ ಬಿಜೆಪಿ ಪಕ್ಷ. ಏಕೆಂದರೆ ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ನಾನು ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕತೆಯಿಂದ ಈ ಪಕ್ಷದ ಶ್ರೇಯಸ್ಸಿಗಾಗಿ ಹಗಲಿರುಳು ದುಡಿದ್ದಿದ್ದೇನೆ. ಜನರ ಸೇವೆಗಾಗಿ ಜನರ ಸೇವಕನಾಗಿ ಕೆಲಸಮಾಡಿದ್ದೇನೆ. ನನ್ನ ಈ ಸೇವೆಯನ್ನು ಗುರುತಿಸಿ ಬಿಜೆಪಿ ಪಕ್ಷವು ನನಗೆ ಇಂದು ರಾಜ್ಯಸಭೆಗೆ ಸದಸ್ಯನ ಸ್ಥಾನ ನೀಡಿ ನನ್ನ ಸೇವೆಗೆ ಗೌರವ ನೀಡಿದೆ ಎಂದು ಈರಣ್ಣ ಕಡಾಡಿ ಹೇಳಿದರು.
ಇತ್ತೀಚಿಗೆ ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಯಾಗಿ ತೇರದಾಳ ಪಟ್ಟಣಕ್ಕೆ ಆಗಮಿಸಿ ಶ್ರೀ ಅಲ್ಲಮಪ್ರಭು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾ ಶೀರ್ವಾದ ಪಡೆದು ಪ್ರಸಾದ ಸಮೀತಿ ಸಭಾಭವನದಲ್ಲಿ ಬಿಜೆಪಿ ಕಾರ್ಯಕರ್ತರು ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಾಗೂ ಪುರಸಭೆ ಸದಸ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನೇನು ಅಷ್ಟೊಂದು ಪ್ರಭಾವಿ ವ್ಯಕ್ತಿಯು ಅಲ್ಲ, ಆರ್ಥಿಕವಾಗಿ ಪ್ರಭಲ ಹೊಂದಿದವನೂ ಅಲ್ಲ ,ಆದರೂ ಸಹ ನನಗೆ ಈ ಪಕ್ಷವು ನನ್ನ ಸೇವೆಯನ್ನು ಗುರುತಿಸಿ ಇಂತಹ ದೊಡ್ಡ ಸ್ಥಾನವನ್ನು ನೀಡಿದೆ ಎಂದರೆ, ಸಾಮಾನ್ಯ ಕಾರ್ಯಕರ್ತನಿಗೂ ಈ ಪಕ್ಷದಲ್ಲಿ ಗೌರವ ಇದೆ ಎಂದು ಅರ್ಥ. ಸಾಮಾನ್ಯರನ್ನು ಗುರುತಿಸುವ ಪಕ್ಷವೆಂದರೆ ಅದು ಬಿಜೆಪಿ ಪಕ್ಷ. ಇಂತಹ ಪಕ್ಷದಲ್ಲಿ ಇರುವದಕ್ಕೆ ನನಗೆ ತುಂಬಾ ಹೆಮ್ಮೆಎನಿಸುತ್ತದೆ. ಸರಕಾರವು ನೀಡಿದ ಈ ಜವಾಬ್ದಾರಿಯುತ ಹುದ್ದೆಗೆ ಯಾವುದೇ ರೀತಿಯ ಚ್ಯುತಿ ಬರದ ಹಾಗೆ ನನಗೆ ನಿಗದಿಪಡಿಸಿದ ಕಾರ್ಯದ ಇತಿಮಿತಿಯಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸಿಕೊಂಡು ಹೋಗುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಕುಡಚಿ-ಬಾಗಲಕೋಟ ಹೋರಾಟ ಸಮೀತಿಯ ದಯಾನಂದ ಬಿಜ್ಜರಗಿಯವರು ಬಹುದಿನಗಳ ಬೇಡಿಕೆ ಕುಡಚಿ-ಬಾಗಲಕೋಟ ರೈಲುಹಳಿ ಜೋಡಣೆ ಕೆಲಸವನ್ನು ಹಾಗೂ ತೇರದಾಳ ಹೊಸ ತಾಲೂಕಿಗಾಗಿ ಹಳ್ಳಿಗಳ ವಿಂಗಡಣೆಯ ಕೆಲಸವನ್ನು ಪೂರ್ಣಗೊಳಿಸಲು ವಿನಂತಿಸಿಕೊಂಡರು. ಇದನ್ನು ಕೂಡಲೇ ಸಂಬಂಧಿಸಿದ ಶಾಸಕರ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಕೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಖ್ಯಾತ ಉದ್ದಿಮೇದಾರರಾದ ಜಗದೀಶ ಗುಡಗುಂಟಿ ಮಾತನಾಡಿದರು. ಮಗಯ್ಯ ತೆಳಗಿನಮನಿ, ರೇವಣೇಶ ಹೀರೇಮಠ, ಎ.ಪಿ.ಎಮ್.ಸಿ ಅದ್ಯಕ್ಷ ಸಂಜು ದೇಸಾಯಿ, ದೇವಲ ದೇಸಾಯಿ, ನಾಗಪ್ಪ ಸನದಿ, ಸುರೇಶ ಅಕ್ಕಿವಾಟ, ಸುರೇಶ ರೇಣಕೆ, ಅಪ್ಪು ಮಂಗಸೂಳಿ, ಶಂಕರ ಕುಂಬಾರ ಸೇರಿದಂತೆ ಮತ್ತಿತರು ಇದ್ದರು. ರಾಮಣ್ಣ ಹಿಡಕಲ್ ಸ್ವಾಗತಿಸಿ ವಂದಿಸಿದರು.
- FOR ADVERTISEMENT CONTACT -
-9902523698 -

Social Plugin