ತೇರದಾಳ : ಪಟ್ಟಣದ ಟೀಚರ್ಸ್ ಕಾಲನಿಯಲ್ಲಿ ಸಚೀನ ಶಿವಾನಂದ ಮುರಗೋಡ(21) ಎಂಬ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಪ್ರಕರಣ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

   ಸಚೀನ ಶಿವಾನಂದ ಮುರಗೋಡ (21) ಎಂಬ ಯುವಕ ಬಿಬಿಎ ಮೊದಲ ಸೆಮಿಸ್ಟರ್‍ದಲ್ಲಿ ಎರಡು ವಿಷಯ ಫೇಲ್ ಆಗಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವಾಗಲೂ ಅದನ್ನೇ ವಿಚಾರ ಮಾಡುತ್ತಿದ್ದ ಎಂದು ವರದಿದಾರ ಯುವಕನ ತಾಯಿ ಜ್ಯೋತಿ. ಶಿವಾನಂದ. ಮುರಗೋಡ ಇವರು ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ. ದಿ.22-6-2020 ರಂದು 9ಗಂಟೆಯಿಂದ 23-6-2020 ರಂದು ಬೆಳಿಗ್ಗೆ 9ಗಂಟೆಯ ನಡುವಿನ ಅವಧಿಯಲ್ಲಿ ಪಟ್ಟಣದ ಟೀಚರ್ಸ್ ಕಾಲನಿಯಲ್ಲಿರುವ ತಾವು ವಾಸವಾಗಿರುವ ಮನೆಯ ಮೇಲ್ಗಡೆ ಇರುವ ಕೋಣೆಯ ಪತ್ರಾಸದ ಕಬ್ಬಿಣದ ಎಂಗಲಕ್ಕೆ ಯಾರೂ ಇಲ್ಲದ ಸಮಯದಲ್ಲಿ ತನ್ನಿಂದ ತಾನೇ ಸೀರೆಯಿಂದ ನೇಣು ಹಾಕಿಕೊಂಡು ಮರಣ ಹೊಂದಿದ್ದಾನೆ.  ಇವನ ಮರಣದಲ್ಲಿ ಯಾವುದೇ ರೀತಿಯ ಸಂಶಯವಿಲ್ಲವೆಂದು ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳೀಯ ಪೋಲಿಸ್ ಠಾಣೆಯ ಠಾಣಾಧಿಕಾರಿ ವಿಜಯ ಕಾಂಬಳೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.