ರಬಕವಿ-ಬನಹಟ್ಟಿಯಲ್ಲಿ ಕುಡಚಿ-ಬಾಗಲಕೋಟೆ ರೈಲ್ವೆ ಹೆಚ್ಚುವರಿ ಭೂಸ್ವಾಧೀನಕ್ಕೆ ಸಂಬಂಧ ಕೊನೆಯ ಅಹವಾಲು ಸ್ವೀಕಾರ ಸಭೆಯಲ್ಲಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಮಾತನಾಡಿದರು.
ಕುಡಚಿ-ಬಾಗಲಕೋಟೆ ರೈಲ್ವೆ ಹೆಚ್ಚುವರಿ ಭೂ ಸ್ವಾಧೀನ:
ಕೊನೆಯ ಅಹವಾಲು ಸ್ವೀಕಾರ 
ರಬಕವಿ-ಬನಹಟ್ಟಿ,ಜೂ20: ಕುಡಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಸಂಬಂಧ ರಬಕವಿ-ಬನಹಟ್ಟಿ ತಾಲೂಕಿನ ಹೊಸೂರ ಹಾಗು ನಾವಲಗಿ ಗ್ರಾಮಗಳ ಹೆಚ್ಚುವರಿ ರೈತರ ಭೂಸ್ವಾಧೀನತೆ ಬಗ್ಗೆ ನೂತನ ಭೂಸ್ವಾಧೀನ ಕಾಯ್ದೆ ಕಲಂ 16(2) ಪುನರ್ವಸತಿ ಪುನರವ್ಯವಸ್ಥೆಯ ಕುಟುಂಬ ಸಮೀಕ್ಷೆ ವರದಿ ಕುರಿತು ಸಾರ್ವಜನಿಕ ಅಹವಾಲಿನ ಕೊನೆಯ ಸ್ವೀಕಾರ ಸಭೆ ಜರುಗಿತು.
ರಬಕವಿ-ಬನಹಟ್ಟಿ ನಗರಸಭೆ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎ. ಮುರಗಿ ಮಾತನಾಡಿ, ನಾವಲಗಿ ಗ್ರಾಮದ ನೂರಾರು ರೈತರ 87 ಎಕರೆ ಪ್ರದೇಶ ಹಾಗು ಹೊಸೂರಿನ 53 ರೈತರ 43.14 ಎಕರೆಯಷ್ಟು ಹೆಚ್ಚುವರಿ ಭೂಸ್ವಾಧೀನತೆಯ ಅಹವಾಲು ಸ್ವೀಕರಿಸಲಾಗಿದ್ದು, ಕುಡಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಸಂಬಂಧ ಭೂಸ್ವಾಧೀನ ಅಹವಾಲಿನ ಕೊನೆಯ ಸಭೆ ಇದಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆಲ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಮಾತನಾಡಿ, ಮಾನದಂಡಗಳ ಪ್ರಕಾರ ಎಲ್ಲ ರೈತರಿಗೂ ಸಹಾಯ ಮಾಡುವದಾಗಿ ವಿಶ್ವಾಸ ನೀಡಿದಲ್ಲದೆ, ಸೂಕ್ತ ದಾಖಲಾತಿಗಳೊಂದಿಗೆ ಜಮೀನು ಇದ್ದಲ್ಲಿ ಅಂಥವರಿಗೆ ನ್ಯಾಯಯುತ ಬೆಲೆ ನೇರವಾಗಿ ದೊರಕುವಲ್ಲಿ ಯಾವದೇ ಸಂಶಯಬೇಡವೆಂದರು. ಹೊಸೂರಿಗೆ ಸಂಬಂಧಿಸಿದ ಎಲ್ಲ 43 ಎಕರೆ ಭೂಮಿಯು ನಗರಸಭೆ ಅಧೀನದಲ್ಲಿಯೇ ಇವೆ. ಯಾರೂ ಸಂಶಯಪಡುವಂತಿಲ್ಲವೆಂದು ಸ್ಪಷ್ಟನೆ ನೀಡಿದರು.
ವೇದಿಕೆ ಮೇಲೆ ತಹಶೀಲ್ದಾರ ಪ್ರಶಾಂತ ಚನಗೊಂಡ, ಹುಬ್ಬಳ್ಳಿಯ ನೈರುತ್ಯ ರೈಲ್ವೆ ಸಹಾಯಕ ಇಂಜಿನಿಯರ್ ನಾರಾಯಣ, ಮಾರ್ಕೆಂಡಯ್ಯ ಹೂಲಿಪಾಟೀಲ, ಗ್ರೇಡ್-2 ತಹಶೀಲ್ದಾರ ಎಸ್.ಬಿ. ಕಾಂಬಳೆ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಸೇರಿದಂತೆ ಅನೇಕರಿದ್ದರು.


        - FOR ADVERTISEMENT CONTACT -