ತೇರದಾಳ ಪಟ್ಟಣದ ದೇವಸ್ಥಾನಗಳಿಗೆ ಧರ್ಮಸ್ಥಳ ಯೋಜನೆ ವತಿಯಿಂದ ಕಸದ ಡಬ್ಬಿಗಳನ್ನು ವಿತರಿಸಿದರು.
ದೇವಸ್ಥಾನಗಳಿಗೆ ಕಸದ ಡಬ್ಬಿಗಳ ವಿತರಣೆ

ತೇರದಾಳ : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಟ್ಟಣದ ಪ್ರತಿ ದೇವಸ್ಥಾನಗಳಿಗೆ ಎರಡು ಕಸದ ಡಬ್ಬಿಗಳನ್ನು ವಿತರಿಸಿದರು. 
 ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಸಂತೋಷ ಜಮಖಂಡಿ ಮಾತನಾಡಿ ದೇವಸ್ಥಾನವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಹಾಗೂ ಭಕ್ತಾಧಿಗಳು ದೇವಸ್ಥಾನಕ್ಕೆ ಬಂದಾಗ ಅಲ್ಲಲ್ಲಿ ಕಸ ಕಡ್ಡಿಗಳನ್ನು ಚಲ್ಲದಂತೆ ಧರ್ಮಸ್ಥಳದ ಯೋಜನೆ ವತಿಯಿಂದ ಕಸದ ಡಬ್ಬಿಗಳನ್ನು ಕೊಟ್ಟಿದ್ದ ಶ್ಲಾಘನೀಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎಲ್ಲಾ ಕ್ಷೇತ್ರಗಳಲ್ಲಿ ಒಳ್ಳೊಳ್ಳೆಯ ಕಾರ್ಯಗಳನ್ನು ಮಾಡುವುದರ ಜೊತೆಗೆ ಸಾರ್ವಜನಿಕ ವಲಯದಲ್ಲಿ ಮಾದರಿಯಾಗಿದೆ. ಈ ಕಸದ ಡಬ್ಬಿಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವಂತೆ ಸಲಹೆ ಮಾಡಿದರು. ದೇವಸ್ಥಾನಗಳಿಗೆ ಭೇಧ-ಭಾವ ಮಾಡದೆ ಎಲ್ಲಾ ರಂಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಹಕಾರಿಯಾಗಿದೆ ಎಂದರು. 
    ಈ ಸಂದರ್ಭದಲ್ಲಿ  ಮೇಲ್ವಿಚಾರಕ ಸಂತೋಷ, ಶಿವಪ್ಪ ಖವಾಸಿ, ಸಿದ್ರಾಮ ಮನ್ಮಿ, ಮಹೇಶ ಕಿತ್ತೂರ, ದೇವಸ್ಥಾನ ಸಮೀತಿಯವರು, ಒಕ್ಕೂಟದ ಅಧ್ಯಕ್ಷ ಕಮಲವ್ವಾ ವಾಲಿ, ಕೃಷಿ ಯಂತ್ರಧಾರೆ ಪ್ರಭಂಧಕ ಹಾಗೂ ಸೇವಾ ಪ್ರತಿನಿಧಿಯಾದ ಶೋಭಾ ಕೇಮಲಾಪೂರ ಸೇರಿದಂತೆ ವಿವಿಧ ಸಂಘಗಳ ಪಧಾದಿಕಾರಿಗಳು ಇದ್ದರು.


- FOR ADVERTISEMENT CONTACT -
                  9902523698