ರಬಕವಿ-ಬನಹಟ್ಟಿ ತಾಲೂಕಿಗೆ ತಾಲೂಕಾ ಪಂಚಾಯ್ತಿ ಕಚೇರಿಯನ್ನು ಶಾಸಕ ಸಿದ್ದು ಸವದಿ ಉದ್ಘಾಟಿಸಿದರು.
ಶಾಸಕರಿಂದ ತಾಪಂ ಕಚೇರಿ ಉದ್ಘಾಟನೆ
*14 ತಾಪಂ ರಬಕವಿ-ಬನಹಟ್ಟಿ ತಾಲೂಕಿಗೆ
ರಬಕವಿ-ಬನಹಟ್ಟಿ,ಜೂ30: ರಬಕವಿ-ಬನಹಟ್ಟಿ ತಾಲೂಕಿನ ತಾಲೂಕಾ ಪಂಚಾಯ್ತಿ ಕಚೇರಿಯನ್ನು ಮಂಗಳವಾರ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಉದ್ಘಾಟನೆಗೊಂಡಿತು.
ಶಾಸಕ ಸವದಿ ಮಾತನಾಡಿ, ಜಮಖಂಡಿ-ಮುಧೋಳ ತಾಲೂಕಿನ ಗ್ರಾಮಗಳಾದ ನಾವಲಗಿ, ಚಿಮ್ಮಡ, ಹನಗಂಡಿ, ಗೊಲಭಾಂವಿ, ಸಸಾಲಟ್ಟಿ, ಹಳಿಂಗಳಿ, ಆಸಂಗಿ, ಕುಲಹಳ್ಳಿ, ಹಿಪ್ಪರಗಿ, ಜಗದಾಳ, ಢವಳೇಶ್ವರ, ನಂದಗಾಂವ(ಮದಬಾಂವಿ), ಸೈದಾಪುರ, ಕೆಸರಗೊಪ್ಪ ಹೀಗೆ 14 ತಾಲೂಕು ಪಂಚಾಯಿತಿ ಸದಸ್ಯರನ್ನೊಳಗೊಂಡ ಕಚೇರಿ ಇದಾಗಿದ್ದು ಹೊಸ ತಾಲೂಕಾಗಿರುವ ರಬಕವಿ-ಬನಹಟ್ಟಿ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದರು.
ಶೀಘ್ರವೇ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಲಿದೆ. ಅಭಿವೃದ್ಧಿ ಸಲುವಾಗಿ ಸದಸ್ಯರು ಶಕ್ತಿಮೀರಿ ಪ್ರಯತ್ನ ನಡೆಸಬೇಕೆಂದರು. ಪ್ರವಾಹ ಹಾಗು ಕೊರೊನಾ ಹಾವಳಿ ಸಂಬಂಧ ರಾಜ್ಯ ಅಭಿವೃದ್ಧಿಗೆ ಅಡಚಣೆಯಾಗಿ ಆಡಳಿತಕ್ಕೆ ಹಿನ್ನಡೆಯಾಗಿದ್ದು ನಿಜ. ಹೆಚ್ಚಿನ ಅನುದಾನದಿಂದ ಸದೃಢ ತಾಲೂಕಾಗಿಸಲು ಸರ್ಕಾರಕ್ಕೆ ಒತ್ತಡ ಹೇರುವದಾಗಿ ಸವದಿ ಭರವಸೆ ನೀಡಿದರು.
ಇನ್ನಷ್ಟು ಇಲಾಖೆಗಳಾದ ಪಿಡಬ್ಲುಡಿ, ಜಿಪಂ, ನೀರಾವರಿ, ಬಿಇಓ ಸೇರಿದಂತೆ ತಾಲೂಕಿಗೆ ಸಂಬಂಧಿಸಿದ ಎಲ್ಲ ಕಚೇರಿಗಳನ್ನು ಇನ್ನೆರಡು ವರ್ಷಗಳಲ್ಲಿ ಪ್ರಾರಂಭಿಸುವದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕೊರೊನಾ ಮುಕ್ತ ಕ್ಷೇತ್ರವನ್ನಾಗಿಸಲು ಎಲ್ಲರೂ ಪಣ ತೊಡಬೇಕು. ಸಾಮಾಜಿಕ ಅಂತರ, ಮಾಸ್ಕ್ ಹಾಗು ಸ್ಯಾನಿಟೈಜನರ್ ಬಳಕೆಯಿಂದ ಸಂಪೂರ್ಣ ದೂರ ಮಾಡುವಲ್ಲಿ ಯಶಸ್ಸು ಕಾಣಲಿದೆ. ವಿನಾಕಾರಣ ಹೆದರುವ ಅಗತ್ಯವಿಲ್ಲದೆ ನಿಯಮಗಳನ್ನು ಪಾಲಿಸಬೇಕೆಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಹಿಪ್ಪರಗಿ, ಸುರೇಶ ಅಕ್ಕಿವಾಟ, ಜಿಪಂ ಸದಸ್ಯರಾದ ಪುಂಡಲೀಕ ಪಾಲಭಾಂವಿ, ಪರಶುರಾಮ ಬಸವ್ವಗೋಳ, ಆನಂದ ಕಂಪು, ವರ್ಷವರ್ಧನ ಪಟವರ್ಧನ, ಸೋಮಯ್ಯ ಮಠದ, ತಾಪಂ ಸದಸ್ಯರಾದ ಗುರು ಮರಡಿಮಠ, ಸುವರ್ಣಾ ಶಿಡ್ಲವ್ವಗೋಳ, ಸುನಂದಾ ಮುಗಳಖೋಡ, ಕಾಸವ್ವ ಹೆಗಡೆ, ಶಿವಾನಂದ ಮಂಟೂರ, ನೀಲವ್ವ ತೆಳಗಡೆ, ಭಾರತಿ ಸಣ್ಣಕ್ಕಿ, ಹಣಮಂತ ತೇಲಿ, ಚಿನ್ನವ್ವ ಹೊಸಮನಿ, ಸುನಂದಾ ಬಂಗಿ, ಶ್ರೀಶೈಲ ಪಟ್ಟಣಶೆಟ್ಟಿ, ಅಶ್ವಿನಿ ಮೇಟಿ, ರಮೇಶ ಬಾಯಪ್ಪಗೋಳ, ವೀನಾ ದೇಸಾಯಿ ಸೇರಿದಂತೆ ಅನೇಕರಿದ್ದರು.
- ನಿಮ್ಮ ಜಾಹೀರಾತುಗಳಿಗಾಗಿ ಸಂಪರ್ಕಿಸಿ +91 9902523698

Social Plugin