ದಿನಾಂಕ 02-06-2020 ರಂದು ಕ್ರಾಂತಿಯೋಗಿ "ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜೀ"ಯವರ 40ನೇ ಯ ಪುಣ್ಯ ಸ್ಮರಣೆ.
ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತ, ಅವರು ಈ ಜಗತ್ತಿಗೆ ಅವತರಿಸಿ ಸಮಾಜಕ್ಕಾಗಿ, ಮಾನವಜನರೊದ್ದಾರಕರಾಗಿ, ಅನೇಕ ಕಾರ್ಯಗಳನ್ನು ಮಾಡಿದರು.
ಯಧಾ ಯಧಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಾಮಧರ್ಮಸ್ಯ ತದಾತ್ಮಾನಂ ಸ್ರಜಾಮ್ಯಹಂ
ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳಿದಂತೆ ಶ್ರೀಕ್ಷೇತ್ರ ಇಂಚಗೇರಿಯಲ್ಲಿ ಆತ್ಮಜ್ಞಾನದ ದಿವ್ಯ ಪರಂಪರೆಯಲ್ಲಿ "ಶ್ರೀ ಮಾಧವಾನಂದ ಪ್ರಭುಜೀ"ಯವರ ಅವತಾರವು ಒಂದು.
ಅನೇಕ ವೇದಾಂತ ಧರ್ಮ ದರ್ಶನ ಸಂಪ್ರದಾಯಗಳು ಇದ್ದರೂ ಎಲ್ಲ ತತ್ತ್ವ ವೇದಾಂತಿಗಳ ಆದರ್ಶ ಉದ್ದೇಶ ಗುರಿ ಮಾತ್ರ ಒಂದೆ. ಅಂತಹ ಹಲವು ಆಧ್ಯಾತ್ಮ ಸಂಪ್ರದಾಯಗಳಲ್ಲಿ ಇಂಚಗೇರಿ ಸಂಪ್ರದಾಯವೂ ಒಂದು.
ಶ್ರೀ ಮಹಾದೇವರು ಗಂಧದ ಕೊರಡಿನಂತೆ ತಮ್ಮ ಇಡೀ ಜೀವನವನ್ನು ತೇಯ್ದು ತಮಗಾಗಿ ತಾವು ಬಾಳದೆ , ಮನುಕುಲದ ಏಳ್ಗೆ ಉದ್ದಾರ ದಾರಿದ್ರ್ಯ ಅಜ್ಞಾನ ಅಸ್ಪೃಶ್ಯತೆ ಜಾತಿ ಪಿಡುಗನ್ನು ತೊಲಗಿಸಲು ಆಧ್ಯಾತ್ಮಿಕ ಸರ್ವೋದಯ ತತ್ವಗಳ ಮೂಲಕ ಸರ್ವರನ್ನು ಅಜ್ಞಾನದಿಂದ ಜ್ಞಾನದೆಡೆಗೆ , ಅಸತ್ಯದಿಂದ ಸತ್ಯದೆಡೆಗೆ , ಮೃತ್ಯುವಿನಿಂದ ಅಮರತ್ವದೆಡೆಗೆ ಮುನ್ನಡೆಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ .
ಮಹಾತ್ಮ ಗಾಂಧೀಜಿ , ಸುಭಾಷ್ ಚಂದ್ರ ಬೋಸ್ , ಅವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಆಂದೋಲನದಲ್ಲಿ ತಮ್ಮ ಅಪಾರ ಅನುಯಾಹಿಗಳೊಡನೆ ಧುಮುಕಿ ಸ್ವಾತಂತ್ರ್ಯಗೊಳಿಸಲು ಶ್ರಮಪಟ್ಟಿದ್ದಾರೆ . ಸ್ವಾತಂತ್ರ್ಯಾನಂತರ ಸಂಸ್ಥಾನಗಳ ವೀಲೀನಿಕರಣ ಪ್ರಕ್ರಿಯೆಯಲ್ಲಿ ಶ್ರೀ ಮಾಧವಾನಂದರು ಮಹತ್ತರ ಪಾತ್ರವನ್ನು ವಹಿಸಿದ್ದಾರೆ .
ದ್ವೈತ - ಅದ್ವೈತ ಗಳನ್ನು ಮೀರಿದ ಈ ವಿಶಿಷ್ಟಾದ್ವೈತ ಸಂಪ್ರದಾಯವು ಬಡವ - ಬಲ್ಲಿದ , ಮೇಲು - ಕೀಳು , ಹೆಣ್ಣು - ಗಂಡು , ಯಾವ ಭೇದ - ಭಾವವಿಲ್ಲದೆ , ಸರ್ವರಲ್ಲು - ಸಮದೃಷ್ಟಿಯಿಟ್ಟು ಮನುಕುಲದ ಉದ್ದಾರ , ಮಾನವ ಜೀವನದ ಸಾಕ್ಷಾತ್ಕಾರ - ಆತ್ಮೋನ್ನತಿಯೊಂದನ್ನೇ ತನ್ನ ಪರಮ ಗುರಿಯಾಗಿಟ್ಟುಕೊಂಡು ನಿಜಶರಣ ಧರ್ಮವನ್ನು ಬಿತ್ತುತ್ತಾ ಆತ್ಮಜ್ಞಾನ ಕೃಷಿ ಮಾಡುವಲ್ಲಿ ಶ್ರೀ ಮಾಧವಾನಂದ ಪ್ರಭುಜಿಯವರು ಹಾಕಿಕೊಟ್ಟ ದಿವ್ಯ ಸನ್ಮಾರ್ಗದಲ್ಲಿ ಶ್ರೀ ಸ.ಸ.ರೇವಣಸಿದ್ದೇಶ್ವರ ಮಾಹಾರಾಜರ ಹಾಗು ಶ್ರೀ ಪ್ರಭುಜೀ ಮಹಾರಾಜರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿರುವುದು ಶ್ರೀಕ್ಷೇತ್ರ ಇಂಚಗೇರಿ ಸಂಪ್ರದಾಯದ ವಿಶೇಷ .
ಜೈಜಗತ್
-ವಿಶೇಷ ಸೂಚನೆ : ಸದ್ಗುರುಗಳ ಆಶೀರ್ವಾದದಿಂದ... ಇದೆ ಪ್ರಯುಕ್ತ "ಕ್ರಾಂತಿಯೋಗಿ ಮಹಾದೇವರು" ಚಲನಚಿತ್ರ ತಂಡದಿಂದ ಹಲವಾರು ಕಂತುಗಳಲ್ಲಿ ಮೂಡಿಬರಲಿರುವ "ಶ್ರೀ ಇಂಚಗೇರಿ ಸಂಪ್ರದಾಯದ ಜ್ಞಾನಿಗಳು" ನಮ್ಮ " SWARUPA SANDARSHAN" ಯೌಟ್ಯೂಬ್ ಚಾನಲ್ ನಲ್ಲಿ ಮೊದಲಕಂತು ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ.
- FOR ADVERTISEMENT CONTRACT -
9902523698

Social Plugin