ರೈತರಲ್ಲಿ ಸಂತಸ ಮೂಡಿಸಿದ ರೋಹಿಣಿ ಮಳೆ
ತೇರದಾಳ: ನಿನ್ನೆ ರಾತ್ರಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದ ಪಟ್ಟಣದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.ಈಗಾಗಲೆ ಕೊರೋನಾ ವೈರಸನಿಂದ ಬೆಳೆಹಾನಿಗೊಳಗಾಗಿ ತೊಂದರೆ ಅನುಭವಿಸಿ ಕಂಗೆಟ್ಟ, ದೇಶದ ಬೆನ್ನೆಲುಬಾಗಿರುವ ರೈತರಿಗೆ ಈ ಮಳೆಯಿಂದ ಸ್ವಲ್ಪ ಆಶಾಭಾವನೆ ಮೂಡಿದೆ.ಈಗಾಗಲೇ ರೈತರು ತಮ್ಮ ತಮ್ಮ ಹೊಲಗದ್ದೆಗಳನ್ನು ಹದಗೊಳಿಸಿ ಬಿತ್ತನೆಗಾಗಿ ಮಳೆಯ ನಿರೀಕ್ಷೆಯಲ್ಲಿದ್ದರು. ಅವರ ನಿರೀಕ್ಷೆಯಂತೆ ರಾತ್ರಿ ರೋಹಿಣಿ ಮಳೆ ಸುರಿದಿದ್ದು ಕಾರಣ ರೈತರು ಖುಷಿಪಟ್ಟಿದ್ದಾರೆ.ಈ ಕುರಿತು ಮಾತನಾಡಿದ ಹಲವಾರು ಪ್ರಶಸ್ತಿ ಪಡೆದ ಪ್ರಗತಿಪರ ರೈತರಾದ ಧರೆಪ್ಪ ಕಿತ್ತೂರ ಅವರು ಈ ಮಳೆ ರೈತರ ನಿರೀಕ್ಷೆಯಂತೆ ಸರಿಯಾದ ಸಮಯಕ್ಕೆ ಬಂದಿದ್ದು ಕಾರಣ ಎಲ್ಲ ರೈತರು ಕೂಡಲೆ ಬಿತ್ತನೆ ಕಾರ್ಯಕೈಕೊಳ್ಳಬೇಕು, ಏಕೆಂದರೆ ಈ ಸಂದರ್ಭದಲ್ಲಿ ಬಿತ್ತನೆ ಮಾಡುವದರಿಂದ ನಾವು ಬೆಳೆದ ಬೆಳೆಗಳಿಗೆ ರೋಗ ಬರುವ ಸಾದ್ಯತೆ ತುಂಬಾ ತುಂಬಾ ಕಡಿಮೆ ಇರುತ್ತದೆ, ಕಾರಣ ರೈತರು ತಡಮಾಡದೆ ಈಗಲೇ ಬಿತ್ತಿ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಈ ಮೂಲಕ ತಿಳಿಸಿದ್ದಾರೆ.ಪಟ್ಟಣದ ಹಿರಿಯ ರೈತರಾದ ಮಲ್ಲಿನಾಥ ಬೊಳಗೊಂಡ ಮಾತನಾಡಿ ಪಟ್ಟಣದ ಸುತ್ತ ಮುತ್ತ ಪ್ರದೇಶದಲ್ಲಿ ಚೆನ್ನಾಗಿ ಮಳೆಯಾಗಿದೆ ಆದರೆ ಇನ್ನೂ ಈ ಭಾಗದ ಹಲವು ಹಳ್ಳಿಗಳಲ್ಲಿ ಕೇವಲ ತುಂತುರು ಹನಿ ಮಾತ್ರ ಆಗಿದ್ದು ಕಾರಣ ಆ ಭಾಗದಲ್ಲಿಯೂ ಮಳೆಯಾಗಿದ್ದರೆ ಇನ್ನೂ; ಚೆನ್ನಾಗಿರುತಿತ್ತು ಎಂದು ತಿಳಿಸಿದರು.
- FOR ADVERTISEMENT CONTACT -
9902523698

Social Plugin