ತೇರದಾಳದ ಸರಕಾರಿ ಆಸ್ಪತ್ರೆಯಲ್ಲಿ ಬಾನಂತಿಯರಿಗೆ ಹಾಗೂ ರೋಗಿಗಳಿಗೆ ಡಿ.ಕೆ.ಶಿವುಕುಮಾರ ಹುಟ್ಟು ಹಬ್ಬದ ನಿಮಿತ್ಯ ಹಣ್ಣು ಹಂಪಲ ವಿತರಿಸಿದರು.

ತೇರದಾಳ : ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವುಕುಮಾರ ಇವರ ಹುಟ್ಟು ಹಬ್ಬದ ನಿಮಿತ್ಯ ಪಟ್ಟಣದಲ್ಲಿ ಮಾಜಿ ಸಚಿವೆ ಉಮಾಶ್ರೀ ಬಳಗದ ವತಿಯಿಂದ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಬಾನಂತಿಯರಿಗೆ ಹಾಗೂ ರೋಗಿಗಳಿಗೆ ಹಣ್ಣು ಹಂಪಲಗಳನ್ನು ವಿತರಿಸಿದರು.

  ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಡಾ.ಎ.ಆರ್.ಬೆಳಗಲಿ ಮಾತನಾಡಿ ಮಹಾ ಮಾರಿ ಕೊರೊನಾ ರೋಗದ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ಪಾಲಿಸಬೇಕು. ಸರಕಾರ ಹೇಳಿದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮೇಲಿಂದ ಮೇಲೆ ಕೈಯನ್ನು ಸಾಬೂನಿನಿಂದ ತೊಳೆಯುತ್ತಿರಬೇಕು. ಹಾಗೂ ಪ್ರತಿಯೊಬ್ಬರು ತಪ್ಪದೆ ಮಾಸ್ಕನ್ನು ಉಪಯೋಗಿಸಬೇಕು. ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸರಕಾರಿ ವೈದ್ಯರಿಂದ ಸಲಹೆಗಳನ್ನು ಪಡೆಯಬೇಕು. ಈ ರೋಗಕ್ಕೆ ಚಿಕಿತ್ಸೆ ವಿರಳ ಆದ್ದರಿಂದ ರೋಗ ಬರದಂತೆ ಎಚ್ಚರಿಕೆ ವಹಿಸುವುದು ಅವಶ್ಯ ಎಂದರು.

  ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಸುದರ್ಶನ್ ನಿಡೋಣಿ, ಬ್ಲಾಕ್ ಕಾಂಗ್ರಸ್ ಅದ್ಯಕ್ಷ ಲಕ್ಷಣ ದೇಸಾರಟ್ಟಿ, ರಾಜಶೇಖರ ಬದ್ರನ್ನವರ, ಎಸ್. ಆರ್.ಜಾಲಿಗಿಡದ, ಈಶ್ವರ ಚಮಕೇರಿ, ಪಿ.ಎಸ್. ಮಾಸ್ತಿ, ರಾಜೇಸಾಬ ನಗಾರ್ಜಿ, ಮಾಶೂಂ ಇನಾಮದಾರ, ಅಶೋಕ ಉಳ್ಳಾಗಡ್ಡಿ, ಭರಮು ಉಳ್ಳಾಗಡ್ಡಿ, ರಾಜು ರೋಡಕರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.