ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿ ನಗರದಲ್ಲಿ ಮಾಳಿಂಗರಾಯನ ಗುಡಿಯ ಜಾಗದಲ್ಲಿ ಮಳಿಗೆಗಳನ್ನು ಉದ್ಘಾಟಿಸಲಾಯಿತು.
ರಬಕವಿ-ಬನಹಟ್ಟಿ,ಮೇ15: ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿ ನಗರದಲ್ಲಿ ಮಾಳಿಂಗರಾಯನ ಗುಡಿಯ ಜಾಗದಲ್ಲಿ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಶುಭ ಮುಹೂರ್ತದ ಪ್ರಕಾರ ಕುರುಬ ಸಮಾಜದ ಹಿರಿಯರು ಸರ್ಕಾರದ ಆದೇಶದ ಪ್ರಕಾರ ಮಳಿಗೆಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ರಬಕವಿಯ ಖ್ಯಾತ ನೇತ್ರತಜ್ಞರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಡಾ. ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿ, ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಹರಡುತ್ತಿದ್ದು ಇದರಿಂದ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕಡ್ಡಾಯವಾಗಿ ಮಾಸ್ಕ ಧರಿಸಿ ಎಂದರು. ಮುಂದಿನ ದಿನಮಾನಗಳಲ್ಲಿ ಸಮುದಾಯದ ಕಲ್ಯಾಣ ಮಂಟಪ ನಿರ್ಮಾಣ ಮಾಡಿ ನಾಔಉ ಕೂಡಾ ತಮ್ ಜೊತೆ ಇರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶಂಕರ ಸೋರಗಾಂವಿ ಮಾತನಾಡಿದರು. ತಾಲ್ಲೂಕು ಕುರುಬರ ಸಂಘ ಅಧ್ಯಕ್ಷರಾದ ರಾಯಣ್ಣ ಪೂಜಾರಿ. ಪ್ರಧಾನ ಕಾರ್ಯದರ್ಶಿ ಮಾಳು ಹಿಪ್ಪರಗಿ, ಬಿರಪ್ಪ ಸಂಗೊಳ್ಳಿ, ರಾಮು ಜಿಡ್ಡಿಮನಿ, ಕಾಡಪ್ಪ ತುಂಗಳ, ಹಣಮಂತ ಕುಡಚಿ, ಪರಶುರಾಮ ಜಿಡ್ಡಿಮನಿ, ನಿಂಗಪ್ಪ ಹುನ್ನೂರ, ಅರ್ಜುನ ಜಿಡ್ಡಿಮನಿ, ಹಣಮಂತ ಎಕ್ಕೇಲಿ ಸೇರಿದಂತೆ ಅನೇಕರು ಇದ್ದರು.
Social Plugin