ತೇರದಾಳದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಶಾಸಕ ಸಿದ್ದು ಸವದಿ ಆಹಾರದ ಕಿಟ್‍ನ್ನು ವಿತರಿಸಿದರು.


ತೇರದಾಳ : ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

ತೇರದಾಳ : ಪಟ್ಟಣದ ವಾರ್ಡ ನಂ1ರ ಪುರಸಭೆ ಸದಸ್ಯೆ ರೂಪಾ ಶಂಕರ ಕುಂಬಾರ ಹಾಗೂ ಆ ವಾರ್ಡಿನ ಹಿರಿಯರು ತಯಾರಿಸಿದ ಆಹಾರದ ಕಿಟ್‍ನ್ನು ಸಿದ್ದು ಸವದಿಯವರು ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರಿಗೆ ವಿತರಿಸಿದರು.

  ಕಿಟ್‍ನ್ನು ವಿತರಿಸಿ ಮಾತನಾಡಿದ ಶಾಸಕ ಸಿದ್ದು ಸವದಿಯವರು ಮಾರಕ ಕೊರೊನಾ ವೈರಸ್ ತಡೆಗಟ್ಟುವ ಹೋರಾಟದಲ್ಲಿ ಅತಿ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸಿದವರೆಂದರೆ ಆಶಾ ಕಾರ್ಯಕರ್ತೆಯರು. ತಮ್ಮ ಜೀವದ ಹಂಗು ತೊರೆದು ಉರಿ ಬಿಸಿಲಿನಲ್ಲಿ ತಮ್ಮ ಕುಟುಂಬವನ್ನೆಲ್ಲ ಮರೆತು ಪಟ್ಟಣದ ಪ್ರತಿಯೊಂದು ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿ ಇಲಾಖೆಗೆ ಕಳುಹಿಸುವಲ್ಲಿ ತುಂಬಾ ಜವಾಬ್ದಾರಿಯುತ ಕೆಲಸ ಮಾಡಿ ಸರಕಾರಕ್ಕೆ ಸಹಾಯ ಮಾಡಿದ್ದಾರೆ. ಇವರ ಸೇವೆ ಅವಿಸ್ಮರಣೀಯವಾಗಿದೆ. ಇಂತಹ ಒಂದು ಸೇವೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್‍ನ್ನು ತಯಾರಿಸಿ ಕೊಟ್ಟದ್ದಕ್ಕಾಗಿ ಪುರಸಭೆ ಸದಸ್ಯೆ ರೂಪಾ ಶಂಕರ ಕುಂಬಾರ ಹಾಗೂ ವಾರ್ಡನಂ 1ರ ಹಿರಿಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.


  ಈ ಕೊರೊನಾ ವೈರಸ್ ಸಲುವಾಗಿ ದೇಶದಲ್ಲಿ ಲಾಕ್‍ಡೌನ ಆಗಿ 55ದಿನಗಳು ಕಳೆದವು. ಕೆಲವು ಕುಟುಂಬಗಳು ಅಂದೇ ದುಡಿದು ಅಂದೆ ತಂದು ಊಟ ಮಾಡುತ್ತಿದ್ದರು. ಅಂತಹ ಕುಟುಂಬಗಳಿಗೆ ಸರಕಾರ ಸಹಾಯ ಮಾಡುತ್ತಾ ಬಂದಿದೆ. ಆದರೂ ಸಹ ಇನ್ನೂ ಯಾವುದಾದರೂ ಸಮಾಜ ಅಥವಾ ಕುಟುಂಬ ಉಳಿದುಕೊಂಡಿದ್ದರೆ ಅಂತಹ ಕುಟುಂಬಗಳನ್ನು ಗುರುತಿಸಿ ನನ್ನ ಗಮನಕ್ಕೆ ತರುವಂತೆ ತಮ್ಮ ಕಾರ್ಯಕರ್ತರಿಗೆ ತಿಳಿಸಿದರು.

  ಈ ಸಂದರ್ಭದಲ್ಲಿ  ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿ, ಎಪಿಎಮ್‍ಸಿ ಅಧ್ಯಕ್ಷ ವರ್ಧಮಾನ ಕಡಹಟ್ಟಿ, ಬಾಹುಬಲಿ ಸವದತ್ತಿ, ಸಭಾಸ ಗಾಥಾಡೆ, ಪದ್ಮರಾಜ ಆಲಗೂರ, ಬಾಹುಬಲಿ ಜಕ್ಕನ್ನವರ, ಶೀತಲ ಬೊಳಗೊಂಡ, ಶಂಕರ ಕುಂಬಾರ, ಜಿನ್ನಪ್ಪ ಶಿರಹಟ್ಟಿ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ವಾರ್ಡ ನಂ1ರ ಹಿರಿಯರು ಮತ್ತು ಸರಕಾರಿ ಆಸ್ಪತ್ರೆ ಸಿಬ್ಬಂದಿಯವರು ಇದ್ದರು.