ವರದು : ಮ.ಕೃ.ಮೇಗಾಡಿ
ಕಲಾವಿದರಿಗೆ ಆಹಾರ ಧಾನ್ಯ ಕಿಟ್ ವಿತರಿಸಲು ತೇರದಾಳ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಶ್ರೀ ಸಿದ್ದು ಸವದಿ ಅವರಿಗೆ ಶುಕ್ರವಾರ ಬೆಳಿಗ್ಗೆ ಬನಹಟ್ಟಿಯಲ್ಲಿ ಮನವಿ ಪತ್ರ ಅರ್ಪಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಬಡ ಕಲಾವಿದರಿಗೆ ಸರ್ಕಾರ ಧನಸಹಾಯ ಮಾಡುತ್ತಿದೆ, ಆದರೂ ಕರ್ನಾಟಕ ಜಾನಪದ ಪರಿಷತ್ತಿನವರು ನೀಡಿರುವ ಪಟ್ಟಿಯಂತೆ ಅರ್ಹ ಬಡಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಹಿರಿಯರು, ಮುಖಂಡರಾದ ಜಿ.ಎಸ್.ಗೊಂಬಿ, ರಾಮಣ್ಣ ಹಿಡಕಲ್ಲ, ಪ್ರಭಾಕರ ಬಾಗಿ, ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಮ.ಕೃ.ಮೇಗಾಡಿ, ತೇರದಾಳ ವಲಯ ಅಧ್ಯಕ್ಷರಾದ ಜಿ.ಎಂ.ಮೋಪಗಾರ, ಮಹಾಲಿಂಗಪೂರ ವಲಯ ಅಧ್ಯಕ್ಷರಾದ ಬಸವರಾಜ ಮೇಟಿ,ತಾಲೂಕಾ ಉಪಾಧ್ಯಕ್ಷರಾದ ಮಹಾಂತೇಶ ಶೈವಾಚಾರಿ, ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಶೈಲ ಪಟ್ಟಣ ಶೆಟ್ಟಿ ಮಾಧವಾನಂದ ಶೇಗುಣಸಿ, ಕೆ.ಎಸ್.ರಂಗಸ್ವಾಮಿ, ಕಲಾವಿದ ಚನ್ನಯ್ಯ ಮುಕ್ಕಯ್ಯಗೋಳ ಇನ್ನಿತರರು ಈ ಸಂದರ್ಭದಲ್ಲಿದ್ದರು.

Social Plugin