ವರದಿ : ಕೆ. ಎಸ್. ರಂಗಸ್ವಾಮಿ
ಪ್ರಸ್ತುತವಾಗಿ ಕೊರೊನಾ ವೈರಸ್ ದಿಂದ ಯಾವುದೇ ರೀತಿಯ ಕಾರ್ಯಕ್ರಮ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಮಾಡಿದೆ. ಇದರಿಂದ ಕಾರ್ಯಕ್ರಮವಿಲ್ಲದೆ ನಾವು ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ನಾವುಗಳು ಇಂದು ಬೀದಿಗೆ ಬಂದು ಉಪವಾಸ ಬೀಳುವ ಪರಿಸ್ಥಿತಿ ಬಂದಿದೆ ಎಂದು ಕರ್ನಾಟಕ ಟೆಂಟ್ ಮತ್ತು ಡೆಕೋರೇಷನ್ ವೆಲ್ಫೇರ್ ಅಸೋಸಿಯೇಷನ್ ಮಾಲೀಕರ ಸಂಘ ಹಾಗೂ ಕಾರ್ಮಿಕರ ಸಂಘ ತಮ್ಮ ಅಳಲನ್ನು ಈ ಮೂಲಕ ತೋಡಿಕೊಂಡಿದೆ. ಸುಮಾರು ದಿನಗಳಿಂದ ಕೈಗಳಿಗೆ ಕೆಲಸವಿಲ್ಲದೆ ನಮ್ಮ ಕೈ ಖಾಲಿಯಾಗಿದೆ. ಎಲ್ಲಿಯೂ ಡೆಕೋರೇಷನ್ ಮಾಡಲು ಅವಕಾಶವಿಲ್ಲ. ನಾವು ಸುಮಾರು ಒಂದು ನೂರಾ ಇಪ್ಪತ್ತು ಮಾಲೀಕರಿದ್ದು ಹಾಗೂ ಅವರ ಕೈಗೆಳಗೆ ಸುಮಾರು 800 ಜನ ಕಾರ್ಮಿಕರಿದ್ದಾರೆ. ಇದರಲ್ಲಿ ಕೆಲವಂದಿಷ್ಟು ಕಾರ್ಮಿಕರು ಕೆಲವು ಮಾಲೀಕರಲ್ಲಿ ಖಾಯಂ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸಹ ವೇತನ ನೀಡಲು ನಮ್ಮಲ್ಲಿ ಹಣವಿಲ್ಲ. ಅದು ಅಲ್ಲದೆ ಮಾಲು ಇಡಲು ಗೋಡೌನ್ ಬಾಡಿಗೆ ತೆಗೆದುಕೊಂಡಿದ್ದು ಬಾಡಿಗೆಯನ್ನು ಸಹ ಕೊಡುವಂತಹ ಶಕ್ತಿ ನಮ್ಮಲ್ಲಿಲ್ಲ. ಹೀಗಾಗಿ ಸರ್ಕಾರ ನಮ್ಮ ಕೈ ಹಿಡಿಯಬೇಕಾಕಿದೆ. ಈ ಕಾರಣದಿಂದ ನಾವು ನಮ್ಮ ಮತ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಸಿದ್ದು ಸವದಿ ಯವರಿಗೆ ಮನವಿಯನ್ನು ಕೊಟ್ಟು ನಮಗೆ ಸಹಾಯಸ್ತ ನೀಡಬೇಕೆಂದು ಈ ಮೂಲಕ ಕೇಳುತ್ತಿದ್ದೇವೆ.

Social Plugin