ಬಾಗಲಕೋಟೆ ಜಿಲ್ಲೆ
ಬುರುಡ ಸಮಾಜಕ್ಕೆ ಆರ್ಥಿಕ ಸಹಾಯ ನೀಡಿ

ಬನಹಟ್ಟಿ ಪಟ್ಟಣದ ಬುರುಡ (ಮೇದಾರ) ಸಮಾಜದ ಬಡಜನರು ಲಾಕ್ ಡೌನ್‌ನಿಂದ ಸಂಕಷ್ಟ ಅನುಭವಿಸುತ್ತಿದ್ದು, ಆರ್ಥಿಕ ಸಹಾಯ ನೀಡಬೇಕು ಎಂದು ರಬಕವಿ-ಬನಹಟ್ಟಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.

ಕೆಲಸ ಕಾರ್ಯಗಳಿಲ್ಲದೆ ಸಮಾಜದ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಕಾರಣ ಸಮುದಾಯವು ಬಿದಿರು ಬಂಬುಗಳಿಂದ ತಯಾರಿಸಿದ ಬುಟ್ಟಿ, ಮೊರ ಮುಂತಾದ ದಿನನಿತ್ಯ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಎರಡು ತಿಂಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಮಾಜದ ಬಡವರಿಗೂ ಆರ್ಥಿಕ ನೆರವು ನೀಡುವಂತೆ ನಗರದ ಶ್ರೀ ಮೇದಾರ ಕೇತೇಶ್ವರ ಪರಿಶಿಷ್ಟ ಪಂಗಡ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಆಗ್ರಹಿಸಿದರು.

ಶಿರಸ್ತೇದಾರರಾದ ಎಸ್. ಎಲ್. ಕಾಗಿಯವರ ಅವರಿಗೆ ಮನವಿ ಅರ್ಪಿಸಿದರು. ಪ್ರಕಾಶ ಬುರುಡ ಸೇರಿದಂತೆ ಅನೇಕರು ಇದ್ದರು. 


ವರದಿ : ಪ್ರಕಾಶ ಕುಂಬಾರ