ತೇರದಾಳದ ಪ್ರತಿಷ್ಠಿತ ಜೀರಗೇರಿಯಲ್ಲಿ ಮೀನುಗಳ ಮಾರಣಹೋಮ ವಾಗಿದೆ. ಈ ಮೀನುಗಳ ಸಾವಿಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಸ್ಥಳೀಯರ ಹೇಳಿಕೆಯ ಮೇರೆಗೆ ಬೇಸಿಗೆಕಾಲದಲ್ಲಿ ನೀರು ಕಡಿಮೆಯಾಗಿರುವುದು ಮತ್ತು ಒಳಚರಂಡಿ-ನೀರು ಅಥವಾ ಗಟಾರ್ ನೀರು ಕೂಡಿರುವುದರಿಂದ  ಮೀನುಗಳು ಸತ್ತು ಹೋಗಿವೆ ಎಂದು ಅನುಮಾನ ವ್ಯಕ್ತಪಡಿಸುತ್ತೀದ್ದಾರೆ.  ಈ ಮೀನುಗಳು ಸತ್ತು ಮೂರ್ನಾಲ್ಕು ದಿನ ಆದರೂ ಸ್ಥಳೀಯ ಪುರಸಭೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೇ ಇರುವುದು ವಿಪರ್ಯಾಸ  ಸುತ್ತಮುತ್ತಲಿನ ವಾತಾವರಣವೆಲ್ಲ ದುರ್ವಾಸನೆಯಿಂದ ಕೂಡಿದೆ.