-ಬನಹಟ್ಟಿಯ ಪೋಲೀಸ್ ಠಾಣೆಯ ಸಿಬ್ಬಂದಿ ವರ್ಗಕ್ಕೆ ಡಾ.ಪ್ರವೀಣ ಗೋಡಗೇರಿ ಹೋಮಿಯೊಪತಿ ಔಷಧಿಗಳನ್ನು ವಿತರಣೆ ಮಾಡಲಾಯಿತು.

ಪೋಲೀಸ್ ಸಿಬ್ಬಂದಿ ವರ್ಗಕ್ಕೆ ಹೋಮಿಯೊಪತಿ ಔಷಧಿಗಳ ವಿತರಣೆ 
ರಬಕವಿ-ಬನಹಟ್ಟಿ,ಮೇ5: ಪೋಲೀಸ್ ಸಿಬ್ಬಂದಿ ವರ್ಗವು ಯಾವಾಗಲೂ ಸಾರ್ವಜನಿಕರ ಮಧ್ಯದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಹೋಮಿಯೋಪತಿ ಔಷಧಿ ಪಡೆದುಕೊಳ್ಳುವುದು ಉತ್ತಮವಾದುದು ಎಂದು ಡಾ.ಪ್ರವೀಣ ಗೋಡಗೇರಿ ತಿಳಿಸಿದರು.
ಅವರು ಸೋಮವಾರ ಸ್ಥಳೀಯ ಠಾಣೆಯಲ್ಲಿ ಪಿಎಸ್‍ಐ ರವಿಕುಮಾರ ಧರ್ಮಟ್ಟಿ ಹಾಗೂ ಸಿಬ್ಬಂದಿ ವರ್ಗಕ್ಕೆ ಔಷಧಿ ವಿತರಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಿಎಸ್‍ಐ ರವಿಕುಮಾರ ಧರ್ಮಟ್ಟಿ ಮಾತನಾಡಿ, ಪೋಲೀಸ್‍ರು ಕೂಡಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಕೂಡಾ ಅಗತ್ಯವಾಗಿದೆ. ಪೋಲೀಸ್ ಸಿಬ್ಬಂದಿ ವರ್ಗಕ್ಕೆ ಔಷಧಿಗಳನ್ನು ವಿತರಣೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.