ತೇರದಾಳ: ಕಳೆದ ಸುಮಾರು ತಿಂಗಳುಗಳಿಂದ ಕೋವಿಡ್19 ನಿಂದ ಇಡಿ ದೇಶವೆ ಲಾಕಡೌನ ಆದಕಾರಣ ಎಲ್ಲರೂ ಸರ್ಕಾರದ ಆದೇಶದ ಪ್ರಕಾರ ಮನೆಯಲ್ಲಿದ್ದಾರೆ.ಯಾರು ಮನೆಯಿಂದ ಹೊರಬರುವಂತಿಲ್ಲ, ಇದರಿಂದ ಪಟ್ಟಣವೆಲ್ಲ ಸ್ಥಬ್ದವಾಗಿದೆ,ಇಂತಹ ಸಂದರ್ಬದಲ್ಲಿ ವಾರಸವಿಲ್ಲದ ಹಲವಾರು ಗೋವುಗಳಿಗೆ ಸ್ಥಳಿಯ ಪುರಸಭೆಯ ಸದಸ್ಯರಾದ ವಿನಾಯಕ ಬಂಕಾಪೂರ ಅವರು ಸುಮಾರು ವರ್ಷಗಳಿಂದ ಆಶ್ರಯ ನೀಡಿದ್ದಾರೆ ಅಲ್ಲದೆ, ಅವುಗಳ ರಕ್ಷಣೆಗಾಗಿ "ಶ್ರೀ ಅಲ್ಲಮ ಪ್ರಭು ಗೋನಿವಾಸ" ಎಂಬ ಹೆಸರಿನಡಿಯಲ್ಲಿ ಗೋಶಾಲೆಯನ್ನು ನಡೆಸಿಕೊಂಡು ಬಂದಿದ್ದಾರೆ. ಈಗ ದೇಶವೆಲ್ಲ ಲಾಕ್ ಆದಕಾರಣ ನಾವು ಹೊರಗಡೆ ಹೋಗಲಾರದ ಸಲುವಾಗಿ ಗೋವುಗಳಿಗೂ ಸಹ ಮೇವಿನ ಕೊರತೆಯಾಗುತ್ತಲಿದೆ.ಆದರೂ ಸಹ ಹೇಗಾದರೂ ಮಾಡಿ ನಾವು ಉಪವಾಸವಿದ್ದರೂ ಪರವಾವಿಲ್ಲ, ಹಸುಗಳು ಮಾತ್ರ ಉಪವಾಸವಿರಬಾರದು ಎಂಬುವುದು ನನ್ನ ಭಾವನೆ ಎಂದು ವಿನಾಯಕ ಬಂಕಾಪೂರ ತಿಳಿಸುತ್ತಾರೆ. ಈ ಕಾರಣದಿಂದ ನಾವು ನಿರಂತರವಾಗಿ ಮೇವಿನ ಹುಡುಕಾಟದಲ್ಲಿ ಇರುತ್ತೇವೆ. ಈ ಸಂಧೀಗ್ದ ಪರಿಸ್ಥಿತಿಯಲ್ಲಿ ಪಟ್ಟಣದ ಹಿಂದೂ ಯುವ ಸೇನೆಯ ಯುವಮಿತ್ರರು ಈ ಗೋವುಗಳಿಗೆ ಮೇವು ನೀಡಿ ಮಾನವೀಯತೆ ಮೆರೆದ್ದಿದ್ದಾರೆ.ಹೆಸರು ಹೇಳಲು ಇಚ್ಛಿಸದ ಯುವಕರು ಪಟ್ಟಣದ ಹೊಲಗದ್ದೆಗಳಿಗೆ ತಿರುಗಾಡಿ ಮೇವನ್ನು ಸಂಗ್ರಹಿಸಿ ಈ ಗೋಶಾಲೆಯಲ್ಲಿರುವ ಗೋವುಗಳಿಗೆ ನೀಡಿ ಮಾನವೀಯತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಯುವ ಮಿತ್ರರು ಕೊರೊನಾ ವೈರಸದಿಂದ ಮಾನವರಾದ ನಾವುಗಳೇ ಹಸಿವಿನಿಂದ ತೊಂದರೆಪಡುತ್ತಿರುವಾಗ, ಮೂಕ ಹಸುಗಳ ರೋದನೆ ಯಾರು ಕೇಳುವರು.ಆದ್ದರಿಂದ ಇಂತಹ ಸಂದರ್ಭದಲ್ಲಿ ಕೈಲಾದಷ್ಟು ಸಹಾಯ ಮಾಡಿದರೆ ಗೋವುಗಳಿಗೂ ಸಹ ನಮ್ಮಂತೆ ಬದುಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇಡಿ ಪ್ರಾಣಿ ಪ್ರಪಂಚದಲ್ಲಿ ಗೋವುಗಳಿಗೆ ನಾವು ಪೂಜ್ಯ ಭಾವನೆಯಿಂದ ನೋಡಿಕೊಳ್ಳುತ್ತೇವೆ.ಕಾರಣ ಗೋವುಗಳ ರಕ್ಷಣೆ ಜೊತೆಗೆ ಪ್ರತಿ ಜೀವಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂತೋಷ ಜಮಖಂಡಿ, ಶಿವು ಖನದಾಳ. ಮಹಾಬಲ ಬನಜವಾಡ ,ಸಂತೋಷ ಹಂದಿಗುಂದ, ಮಹೇಶ ಕೊಕಟನೂರ, ಶಿತಲ ಕುರಪೆ, ವಿನಾಯಕ ಕನದಾಳ, ಗಣೇಶ ಕಂಠಿ, ಸಮ್ಮೇದ ಕುಳ್ಳಿ, ವಿಶಾಲ ಗೋಠೇಕರ, ಆಕಾಶ ತೇಲಿ ಇದ್ದರು. ಮೇವು ಪೂರೈಕೆಮಾಡಿದ ಎಲ್ಲ ಯುವ ಮಿತ್ರರಿಗೆ ಧನ್ಯವಾದ ಹೇಳಿದ ವಿನಾಯಕರವರು ಯಾರಾದರೂ ದಾನಿಗಳಿದ್ದಲ್ಲಿ ಗೋವುಗಳಿಗೆ ಮೇವು ನೀಡಬೇಕೆಂದು ಈ ಮೂಲಕ ವಿನಂತಿಸಿಕೊಂಡಿದ್ದಾರೆ.
Social Plugin