ರಬಕವಿಯಲ್ಲಿ ಡಾ. ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿದರು.
ಕೊರೊನಾ ಸಂಕಷ್ಟದಲ್ಲಿನ ಸೇವೆ ತೃಪ್ತಿ ತಂದಿದೆ
ರಬಕವಿ-ಬನಹಟ್ಟಿ,ಮೇ16: ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 60 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ತರಕಾರಿ ಸಾಮಗ್ರಿಗಳನ್ನು ಒದಗಿಸುವ ಮೂಲಕ ರೈತರು ಬೆಳೆದ ಬೆಳೆಗೆ ಸಹಕಾರಿಯಾಗಿ, ಮತ್ತೊಂದೆಡೆ ಸಂಕಷ್ಟದ ಕುಟುಂಬಗಳಿಗೆ ಸಹಾಯ ಮಾಡುವ ಕಾರ್ಯ ನನಗೆ ತೃಪ್ತಿ ತಂದಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಪದ್ಮಜೀತ ನಾಡಗೌಡ ಪಾಟೀಲ ಹೇಳಿದರು.
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾಲಿಂಗಪೂರ, ತೇರದಾಳ ಹಾಗು ರಬಕವಿ-ಬನಹಟ್ಟಿ ಪಟ್ಟಣ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸ್ವಯಂ ಸೇವಕರಾಗಿ ನೂರಾರು ಕಾರ್ಯಕರ್ತರು ಪ್ರಾಮಾಣಿಕವಾಗಿ ಜನಸೇವೆ ಮಾಡುವ ಮೂಲಕ ಕನಿಷ್ಠ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಕಾರಣರಾಗಿದ್ದಾರೆ ಎಂದರು.
ನೇಕಾರರು ಬಡವರೇ..: ರಾಜ್ಯ ಸರ್ಕಾರವು ಬಡ ಕುಟುಂಬಗಳನ್ನು ವರ್ಗಿಕರಿಸಿ ತಲಾ ಕುಟುಂಬಕ್ಕೆ 5 ಸಾವಿರ ರೂ.ಗಳನ್ನು ಒದಗಿಸಿದೆ. ಅದರಂತೆ ರಾಜ್ಯದ ನೇಕಾರ ಸಮುದಯವೂ ಬಡತನದಲ್ಲಿಯೇ ಇದೆ. ಕಾರಣ 2 ಸಾವಿರ ರೂ.ಗಳ ಬದಲಾಗಿ ಈ ಕುಟುಂಬಗಳಿಗೂ ತಲಾ 5 ಸಾವಿರ ರೂ.ಗಳನ್ನು ನೀಡಬೇಕೆಂದು ನೇಕಾರ ಮುಖಂಡ ಶಂಕರ ಸೊರಗಾಂವಿ ಹೇಳಿದರು. ಲಾಕ್‍ಡೌನ್ ತೆಗೆದು ಒಂದು ತಿಂಗಳಾದರೂ ನೇಕಾರರಿಗೆ ಉದ್ಯೋಗ ದೊರಕುವದು ಕಷ್ಟ. ಕಚ್ಚಾ ವಸ್ತುಗಳ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿವೆ. ಕಾರ್ಖಾನೆಗಳು ಪ್ರಾರಂಭವಾದ ಒಂದು ತಿಂಗಳ ನಂತರ ನೇಕಾರನಿಗೆ ನೇಯ್ಗೆಗೆ ಎಲ್ಲ ಕಚ್ಚಾ ವಸ್ತುಗಳು ದೊರಕುವವು. ಅಲ್ಲಿಯವರೆಗೂ ನೇಕಾರನ ಬದುಕು ಸಂದಿಗ್ಧ ಪರಿಸ್ಥಿತಿಯಲ್ಲಿರುವದು. ನೇಕಾರಿಕೆಯಲ್ಲಿ ಕೈಮಗ್ಗ ಹಾಗು ವಿದ್ಯುತ್ ಮಗ್ಗಗಳ ನೇಕಾರರೆಂದು ವರ್ಗೀಕರಣ ಬೇಡ ಬದಲಾಗಿ ಸರ್ವ ನೇಕಾರರಿಗೆ ಒಂದೇ ಯೋಜನೆ ರೂಪಿಸುವಲ್ಲಿ ಸಂಬಂಧಿಸಿದ ಇಲಾಖೆ ಸರ್ಕಾರದ ಗಮನ ಸೆಳೆಯಬೇಕೆಂದು ಸೊರಗಾಂವಿ ತಿಳಿಸಿದರು.
ನೀಲಕಂಠ ಮುತ್ತೂರ, ಸಾಗರ ನಾರವ್ವಗೋಳ, ಚೇತನ ಕಲಾಲ, ಸಂಜು ಜೋತಾವರ, ಪ್ರದೀಪ ಸಣಕಾಲ, ಅರವಿಂದ ಮನ್ನಿಕೇರಿ, ಚಿದಾನಂದ ಪಟ್ಟಣಶೆಟ್ಟಿ, ಚಿದಾನಂದ ಗಾಳಿ, ಮಾಳು ಹಿಪ್ಪರಗಿ, ಕುಬೇರ ಸಾರವಾಡ, ಸಂಜು ಅಮ್ಮಣಗಿ ಉಪಸ್ಥಿತರಿದ್ದರು.

Social Plugin