- ರಬಕವಿ-ಬನಹಟ್ಟಿ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಪ್ರಶಾಂತ ಚನಗೊಂಡ ಹಾಗು ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ಮಾತನಾಡಿದರು.
ತಬ್ಲಿಘಿಗಳ ಹುಚ್ಚಾಟಕ್ಕೆ ತಾಲೂಕಾಡಳಿತ ಗರಂ
ರಬಕವಿ-ಬನಹಟ್ಟಿ,ಮೇ16: ನಗರದ ಲಕ್ಷ್ಮೀ ನಗರದಲ್ಲಿ ಗುಜರಾತ್‍ನ ಅಹಮದಾಬಾದ್‍ನಿಂದ ಆಗಮಿಸಿದ್ದ 12 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿದವರಲ್ಲಿ ಓರ್ವನ ಹುಚ್ಚಾಟದಿಂದ ತಾಲೂಕಾಡಳಿತ ನಿದ್ದೆಗೆಡಿಸುವಲ್ಲಿ ಕಾರಣವಾಗಿದೆ.
ಅಂಬ್ಯುಲೆನ್ಸ್ ವಾಹನ ನಿರ್ಲಕ್ಷ್ಯತನದಿಂದ ಪಟ್ಟಣದ ನಾಲ್ವರ ಆಶ್ರಯದೊಂದಿಗೆ ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗೆ ತೆರಳುವ ಮೂಲಕ ಹುಚ್ಚಾಟ ನಡೆಸಿದ್ದರ ಹಿನ್ನಲೆ ಸದ್ಯ ಸ್ಥಳೀಯ ಖಾಸಗಿ ಆಸ್ಪತ್ರೆಯ ವೈದ್ಯ ಸೇರಿ 8 ಜನ ಹೋಂ ಕ್ವಾರಂಟೈನ್ ಮಾಡಲು ಕಾರಣವಾಗಿದೆ.
ಚಿಕಿತ್ಸೆಗೆಂದು ಹೊರಬಂದ ವ್ಯಕ್ತಿಗೆ ಕೊರೊನಾ ನೆಗೆಟಿವ್ ಬಂದಿದ್ದರೂ ಆತನೊಂದಿಗಿರುವ 12 ಜನರಲ್ಲಿ ಓರ್ವನಿಗೆ ಪಾಸಿಟಿವ್ ಬಂದಿದ್ದರ ಕಾರಣ ಮತ್ತೇ ಎಲ್ಲರ ಗಂಟಲು ದ್ರವ ಪರೀಕ್ಷೆಯನ್ನು ಇನ್ನೆರಡು ದಿನಗಳಲ್ಲಿ ಮತ್ತೊಮ್ಮೆ ಕಳಿಸುವಲ್ಲಿ ತಾಲೂಕಾಡಳಿತ ತಯಾರಾಗಿದ್ದು, ಸದ್ಯ ಎಲ್ಲೆಂದರಲ್ಲಿ ತಿರುಗಾಡಿದ್ದ ಸಾಂಸ್ಥಿಕ ಕ್ವಾರಂಟೈನ್‍ನ ವ್ಯಕ್ತಿಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಇಡಲಾಗಿದ್ದು, ಈತನ ಸಂಪರ್ಕದಲ್ಲಿದ್ದ ನಾಲ್ವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ಒಟ್ಟಾರೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಯಾವದೇ ಕೊರೊನಾ ಕಾಟವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆಗೆಂದು ಕಳಿಸಿದವರ ಉತ್ತರಕ್ಕೆ ತಾಲೂಕಾಡಳಿತ ಕಾಯುತ್ತಿದೆ.
ದೂರವಿರಿ: ತಾಲೂಕಿನಾದ್ಯಂತ ಸದ್ಯ 301 ಜನರ ಮೇಲೆ ನಿಗಾ ವಹಿಸಲಾಗಿದ್ದು, 180 ಜನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, 120 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಓರ್ವ ಬೇರೆ ರೋಗ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕಳಿಸಲಾಗಿದೆ ಎಂದು ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದರು.
ಸಾಂಸ್ಥಿಕ ಕ್ವಾರಂಟೈನ್‍ಗೆ ಕೆಲವರು ಸಂಬಂಧಿಗಳೆಂದು ಬರುತ್ತಿರುವದು ತಿಳಿದು ಬರುತ್ತಿದೆ. ಅವರ ಸಂಪರ್ಕದಿಂದ ದೂರವಿರಬೇಕು. ಹೊರರಾಜ್ಯಗಳಿಂದ ಬರುವ ಜನರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿಡಲಾಗುತ್ತಿದೆ. ಈ ನಿಯಮ ಪಾಲಿಸುವಲ್ಲಿ ನಿರ್ಲಕ್ಷ್ಯಗೊಂಡಲ್ಲಿ ಕ್ರಿಮಿನಲ್ ಪ್ರಕರಣದೊಂದಿಗೆ 2 ವರ್ಷ ಜೈಲು ಶಿಕ್ಷೆಗೆ ಯಾವದೇ ಮುಲಾಜಿಲ್ಲವೆಂದು ವೃತ್ತ ನಿರೀಕ್ಷಕ ಜೆ. ಕರುಣೇಶಗೌಡ ತಿಳಿಸಿದರು.

Social Plugin