ತೇರದಾಳ: ಕೋವಿಡ್ 19 ನಿಂದ ಸಾಕಷ್ಟು ಶ್ರಮಿಕ ವರ್ಗದವರ ಜೀವನ ನಲುಗಿಹೋಗಿದೆ,ಈ ದೇಶದಲ್ಲಿ ಸಾಕಷ್ಟು ಬಡಶ್ರಮೀಕ ವರ್ಗದವರು,ಅಸಂಘಟಿತ ಕಾರ್ಮಿಕರು ನೂರಾರು ವೃತ್ತಿಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ.ದೇಶದಲ್ಲಿ ಲೆಕ್ಕವಿಲ್ಲದಷ್ಟು ವೃತ್ತಿಗಳಿವೆ.ಅಂದಾಜು ಶೆಕಡಾ ವೃತ್ತಿಗಳು ಶ್ರೀಮಂತರ ಪಾಲಾಗಿದ್ದರೆ, ಇನ್ನೂಳಿದ ವೃತ್ತಿಗಳೆಲ್ಲವೂ ಬಡ ಅಸಂಘಟಿತ ಕಾರ್ಮಿಕರಿಗೆ ಸಂಭಂದಿಸಿದವುಗಳು ಎಂದು ಹೇಳಬಹುದು.ಸರ್ಕಾರ ಈಗಾಗಲೇ ಹಲವಾರು ಶ್ರಮೀಕ ವರ್ಗದವರಿಗೆ ಸಹಾಯಹಸ್ತ ನೀಡಿದೆ,ಆದರೆ
ಇನ್ನೂ ಸಾಕಷ್ಟು ಅಸಂಘಟಿತ ಕಾರ್ಮಿಕರು ಸರ್ಕಾರದ ಸಹಾಯಕ್ಕಾಗಿ ನಿರೀಕ್ಷೆಯಲ್ಲಿ ಇದ್ದಾರೆ. ಅಂತವರಲ್ಲಿ ಬಟ್ಟೆ ಹೊಲಿದು ಬದುಕುಸಾಗಿಸುವ ಕಾರ್ಮಿಕರಾದ ನಾವೂ ಸಹ ಸರ್ಕಾರವು ನಮಗೆ ಆರ್ಥಿಕಸಹಾಯ ನೀಡುತ್ತದೆ ಎಂಬ ಭರವಸೆಯಲ್ಲಿದ್ದೆವು,ಆದರೆ ನಮ್ಮ ನಿರೀಕ್ಷೆ ಹುಸಿಯಾದ ಕಾರಣ ಅನಿವಾರ್ಯವಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಇಲಾಖೆಯ ಸಚಿವರಿಗೆ ಮನವಿ ನೀಡಬೇಕಾಗಿದೆ ಎಂದು ಅಸಂಘಟಿತ ಟೈಲರ್ಸ್ ವಲಯ ತೇರದಾಳದ ಮುಖಂಡರಾದ ಕಾಶಿನಾಥ ರಾಠೋಡ ಮತ್ತು ಮುರುಗೇಶ ಬಾಳಿಕಾಯಿರವರು ತಿಳಿಸಿದರು. ಈಗಾಗಲೇ ಲಾಕಡೌನದಿಂದ ಸುಮಾರು 55 ದಿನಗಳಿಂದ ಕಾಲ ಕಳೆಯಬೇಕಾದರೆ ಅದೊಂದು ದೊಡ್ಡ ವನವಾಸವೆ ಕಳೆದಂತಾಗಿದೆ, ನಮ್ಮ ನೋವು ನಮಗೆ ಗೊತ್ತು. ಆದರೆ ಸರ್ಕಾರ ನಮ್ಮಂತಹ ಅಸಂಘಟಿತ ವಲಯದ ಜನರನ್ನು ಗುರ್ತಿಸಿ ನಮಗೂ ಕೂಡಾ ಸಹಾಯಧನ ನೀಡಬೇಕೆಂದು ವಿನಂತಿಸಿದ್ದಾರೆ.
Social Plugin