ನಿರ್ಣಾಯಕ ಹಂತದಲ್ಲಿ ಬಾಗಲಕೋಟ-ಕುಡಚಿ ರೈಲು ಮಾರ್ಗ....


ತೇರದಾಳ: ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಾಗಲಕೋಟ ಜಿಲ್ಲೆಯ ಬಾಗಲಕೋಟ-ಕುಡಚಿ ರೈಲು ಯೋಜನೆಗಾಗಿ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ ಹೆಚ್ಚುವರಿ ಭೂಸ್ವಾದೀನತೆಯ ಕ್ಷೇತ್ರ 65 ಎಕರೆ 33 ಗುಂಟೆ 01 ಅಣೆ ಜಮೀನುಗಳ ಭೂಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನುಗಳ ಮಾಲಿಕರುಗಳಿಗಾಗಿ ಪುನರ್ ವಸತಿ ಹಾಗೂ ಪುನರ್ ವ್ಯವಸ್ಥೆಯ ಭೂಸ್ವಾದೀನ ಪ್ರಕ್ರೀಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರದ ಹಕ್ಕು ಪುನರ್ ವ್ಯವಸ್ಥೆ ಅಧೀನಿಯಮ 2013 ಕಲಂ 16/2 ರನ್ವಯ ಪುನರ್ ವಸತಿ ಹಾಗೂ ಪುನರ್ ವ್ಯವಸ್ಥೆಯ ಕುಟುಂಬ ಸಮೀಕ್ಷಾವರದಿ ಕುರಿತು ತೇರದಾಳ ಪಟ್ಟಣಕ್ಕೆ ಸಂಬಂಧಿಸಿದ ಭೂಮಾಲಿಕರಿಂದ ಸಾರ್ವಜನಿಕ ಅಹವಾಲು ಸ್ವೀಕರಿಸುವ ಕಾಂiÀರ್iಕ್ರಮವನ್ನು ಕಂದಾಯ ಇಲಾಖೆಯು ಗ್ರಾಮಸಭೆಯನ್ನು ಪಟ್ಟಣದ ಅಂಬಿಗರ ಚೌಡಯ್ಯ ಸಭಾಭವನದಲ್ಲಿ ಏರ್ಪಡಿಸಿದ್ದರು.

        ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಆಡಳಿತಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿಯವರು ವಿವಿಧ ರೈತರಿಂದ ಅಹವಾಲು ಸ್ವಿಕರಿಸಿದರು.ಈ ಸಂದರ್ಬದಲ್ಲಿ ಹಿರಿಯ ರೈತರಾದ  ಭೂಪಾಲ ನಾರಿಗೊಂಡರವರು ಸಂಬಂಧಿಸಿದ ರೈಲುಹಳಿ ಕೆಲವೊಂದು ರೈತರ ಜಮೀನಿನಲ್ಲಿ ನಡುವೆ ಹಾದು ಹೋಗುವದರಿಂದ ಎರಡೂ ಕಡೆ ಜಮೀನು ಉಳಿದು ಸಾಗುವಳಿಗೆ ಬಾರದಂತಾಗುತ್ತದೆ ಕಾರಣ  ಈ ಜಮೀನನ್ನೂ ಸಹ ಪರಿಹಾರಕ್ಕೆ ಪರೀಗಣಿಸಬೇಕೆಂದರು. ರೈತ ಜಿನ್ನಪ್ಪ ಪರಮಗೊಂಡ ಇವರು ನೀರಾವರಿಗೆ ಸಂಬಂಧಿಸಿದ ಪೈಪಲೈನ ಹಾಗೂ ಹೊಲದಲ್ಲಿದ್ದ ರಸ್ತೆಗಳ ಬಗ್ಗೆ ಮರು ಬಳಕೆ ಬಗ್ಗೆ ಸಹಾಯ ಸಹಕಾರ ನೀಡಬೇಕೆಂದರು. ಹಿರಿಯ ರೈತ ಬಸಪ್ಪ ಮುಕರಿ ಹಾಗೂ ಅಲ್ಲಪ್ಪ ಮದಲಮಟ್ಟಿ ಸರ್ಕಾರವು ಕೊಡಲು ನಿರ್ಧರಿಸಿದ ಪರಿಹಾರವು ತುಂಬಾ ಕಡಿಮೆಯಾಗಿದ್ದು ಕಾರಣ ಪಕ್ಕದ ಬೆಳಗಾವಿ ಜಿಲ್ಲೆಯ ಹಾರೂಗೇರಿ ಪಟ್ಟಣದ ರೈತರಿಗೆ ನೀಡುವಷ್ಟು ಪರಿಹಾರವನ್ನು ನಮ್ಮ ರೈತರಿಗೂ ಕೊಡಬೇಕೆಂದು ವಿನಂತಿಸಿದರು. ಅಲ್ಲದೆ ಕೆಲವು ರೈತರು ಭೂಸ್ವಾಧೀನ ಪಡಿಸಿಕೊಂಡ ಎಲ್ಲ ರೈತರ ಮಕ್ಕಳಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಬೇಕೆಂದು ಬೇಡಿಕೆಇಟ್ಟರು ಈ ಬಗ್ಗೆ ರವಿ ಸಲಬನ್ನವರ ಮಾತನಾಡಿ ರೈತರ ಕುಟುಂಬದ ನಿರ್ವಹಣೆಗಾಗಿ ನೌಕರಿ ಅವಶ್ಯಕತೆ ಇದ್ದು, ಬೇಕಾದರೆ ಪರಿಹಾರದ ಹಣದಲ್ಲಿ ಸ್ವಲ್ಪ ಕಡಿಮೆ ಮಾಡಿ ಆದರೆ ನೌಕರಿ ಮಾತ್ರ ಕೊಡಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಮಾಡಿದರು. ರೈತರ ಈ ಎಲ್ಲ ಬೇಡಿಕೆಗಳ ಕುರಿತು ಆಲಿಸಿದ ಅಪರಜಿಲ್ಲಾಧಿಕಾರಿಯವರು ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಅವರಿಗೆ ಅನುಕೂಲಮಾಡಿಕೊಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ ನಾನೂ ಸಹ ರೈತ ಕುಟುಂಬದಿಂದ ಬಂದವನು ನಿಮ್ಮಕಷ್ಟ ನಮಗೂ ಅರ್ಥವಾಗುತ್ತೆ. ಆದರೂ ಸಹ ಸರ್ಕಾರ ನಿಮಗೆ ಯಾವುದೇ ಕಾರಣಕ್ಕೂ ಕೈ ಬಿಡೊದಿಲ್ಲ.ಭೂಸ್ವಾಧೀನಕ್ಕೊಳಗಾದ ರೈತರ ಮಕ್ಕಳಿಗೆ ನೌಕರಿಗೆ ಸಂಬಂಧಿಸಿದಂತೆ ಶೇಕಡಾ ಐದರಷ್ಟು ಮೀಸಲಾತಿಯನ್ನು ಕಾಯ್ದಿರಸಲಾಗುವುದು, ಜಮೀನಿನ ನಡುವೆ ರೈಲು ಹಳಿಯು ಹಾಯ್ದು ಹೋಗುವದರಿಂದ ಅಂದಾಜು ಐದುಗುಂಟೆ ಕ್ಷೇತ್ರದವರೆಗೆ ಜಮೀನು ಉಳಿಯುವಂತಿದ್ದರೆ ಈ ಬಗ್ಗೆ ಸೂಕ್ತ ಕ್ರಮಕೈಕೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದರು.ನಂತರ ಹಾರೂಗೇರಿ ರೈತರಿಗೆ ಕೊಡುವಷ್ಟು ಪರಿಹಾರಧನ ಈ ಭಾಗದ ರೈತರಿಗೆ ಕೊಡಲು ಕೆಲವು ತಾಂತ್ರಿಕ ತೊಡಕುಗಳಿವೆ, ಏಕಂದರೆ ಹಾರೂಗೇರಿಯಲ್ಲಿ ರೈತರು ತಾವು ಮಾರಾಟವಾದ ಬೆಲೆಗೆ ತಕ್ಕಂತೆ ನೋದಣಿ ಕಚೇರಿಯಲ್ಲಿ ಶುಲ್ಕ ಕಟ್ಟಿದ್ದಾರೆ.ಆದರೆ ನಮ್ಮ ಭಾಗದಲ್ಲಿ ಆ ರೀತಿಯಾಗಿಲ್ಲ.ಇದರಿಂದ ತಾವು ನೀರಿಕ್ಷೆ ಮಾಡಿದಷ್ಟು ಪರಿಹಾರ ಸಿಗುವ ಸಾದ್ಯತೆ ಕಡಿಮೆಯಿದೆ. ಅದರೂ ತಾವೂ ಹತಾಶರಾಗಬಾರದು ಇಗಾಗಲೆ ಸರ್ಕಾರ ನಿಗದಿಪಡಿಸಿರುವದಕ್ಕಿಂತಲೂ ಇನ್ನೂ ಹೆಚ್ಚಿಗೆ ಕೊಡುವ ಆಲೋಚನೆಯಲ್ಲಿದೆ ಕಾರಣ ಬಹಳ ದಿನಗಳಿಂದ ನೀರಿಕ್ಷೆಯಲ್ಲಿರುವ ಈ ಯೋಜನೆಗೆ ರೈತರು ಸ್ಪಂದಿಸಬೇಕೆಂದರು.ಈ ಸಂದರ್ಬದಲ್ಲಿ ಗ್ರೇಡ್-2 ತಹಶಿಲ್ದಾರ ಎಸ್.ಬಿ.ಕಾಂಬಳೆ,ಉಪ ತಹಶೀಲ್ದಾರ ಎಸ್.ಬಿ.ಮಾಯನ್ನವರ,ರೈಲ್ವೆ ಇಂಜಿನೀಯರ ನಾರಾಯಣ, ಜಿಲ್ಲಾದಿಕಾರಿ ಸಿಬ್ಬಂದಿ ಪೂಲಿಪಾಟೀಲ,ವಿಷಯ ನಿರ್ವಾಹಕ ಪ್ರವೀಣ ಮುಂಡೋಡಗಿ,ಗ್ರಾಮಲೆಕ್ಕಾಧಿಕಾರಿ ಪಿ,ಆರ್. ಮಠಪತಿ ಮತ್ತು ಸಿಬ್ಬಂದಿವರ್ಗ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.