ಸಿನಿ ರಂಗದಲ್ಲಿ ಎಷ್ಟೋ ಕಲಾವಿದರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಆದರೆ ಯಾವುದೇ ಹಿನ್ನಲೆ ಇಲ್ಲದೆ ಸಿನಿಮಾರಂಗದಲ್ಲಿ ತೊಡಗಿಸಿಕೊಂಡು ತನ್ನ ನಟನೆಯಿಂದ ಹೊಸ ಛಾಪು ಮೂಡಿಸುತ್ತಿದ್ದಾರೆ, ಇಂತಹ ಕಲಾವಿದರಲ್ಲಿ ಕಾಣ ಸಿಗುವವರು ಬಳ್ಳಾರಿ ಜಿಲ್ಲೆಯ ನಟ ಜೆ,ಡಿ, ಆಕಾಶ್.. ಜೆ,ಡಿ ಆಕಾಶ್ ಅವರ ಸಿನಿಮಾ ಪ್ರಯಾಣ ಸುಲುಭವಾಗಿರಲಿಲ್ಲ ಎ,ಎಸ್ ಮೂರ್ತಿ ಮಾಲೀಕತ್ವದ ಅಭಿನಯ ತರಂಗ ಎಂಬ ಶಾಲೆಯಲ್ಲಿ ಸೇರಿ ಹಲವಾರು ನಾಟಕಗಳಲ್ಲಿ ಅವರದೇ ಆದ ವಿಶೇಷ ಪಾತ್ರಗಳಿಂದ ಅಲ್ಲಿ ಬರುತ್ತಿದ್ದ ನಿರ್ದೇಶಕರ ಮನಗೆದ್ದರು, ಅದಾದ ನಂತರ ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಲು ಅವಕಾಶ ಬಂದಿತು, ಆ ಚಿತ್ರವು ೨೦೦೭ರಲ್ಲಿ ಬಿಡುಗಡೆಯಾಯಿತು, ಈ ಚಿತ್ರವು ಗಾಂಧಿನಗರದಲ್ಲಿ ಹೊಸ ಸಂಚಲನವನ್ನು ಮೂಡಿಸಿತು,, ಅದಾದ ನಂತರ ಕ್ರಿಷ್ಣನ್ ಲವ್ ಸ್ಟೋರಿ ಹಾಗೂ ಹುಡುಗ ಹುಡುಗಿ " ಕಮರೊಟ್ಟು ಚೆಕ್ ಪೋಸ್ಟ್ "ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ಅದಾದ ನಂತರ "ಓಂದೇ ಒಂದು ಸಾರಿ" ಹಾಗೂ ನೆರಳು ಚಿತ್ರದ ಮೂಲಕ ನಟ ಜೆ,ಡಿ, ಆಕಾಶ್ ನಾಯಕ ನಟನಾಗಿ ಅಭಿನಯಿಸಿದರು ಅದಾದ ನಂತರ ಸರಿ ಸುಮಾರು ಒಂದು ವರ್ಷಗಳು ಯಾವುದೇ ಸಿನಿಮಾ ಮಾಡದೇ ಹೆಚ್,ಎಂ,ಶ್ರೀ ನಂದನ್ ನಿರ್ದೇಶಿಸುತ್ತಿರುವ "ಬೀಗ " ಎಂಬ ಚಿತ್ರಕ್ಕಾಗಿ ತಮ್ಮ ಹಾವ ಭಾವ ಬದಲಿಸಿಕೊಂಡು , ದೇಹವನ್ನು ದಂಡಿಸಿ ಹೊಸ ಲುಕ್ನಲ್ಲಿ ಬೀಗ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಮೊದಲೆಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿ ಇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ,, ಬೀಗ ಚಿತ್ರವು ಇನ್ನೇನೂ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಎದುರು ಬರಲು ಸಿದ್ದವಾಗಿದೆ,, ಹಾಗೂ "ಕಟ್ಟ ಕಡೆಯ ನಿಮಿಷ " ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ, ಇ ಚಿತ್ರವು ೯೦ ಭಾಗ ಚಿತ್ರೀಕರಣ ಮುಗಿದಿದ್ದು ,ಇನ್ನೂ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಲು ಚಿತ್ರತಂಡ ಸಿಧ್ದವಾಗಿದೆ ಮತ್ತೆ ಹಿರಿಯ ನಿರ್ದೇಶಕರಾದ ವೆಂಕಟ ಸ್ವಾಮಿ ನಿರ್ಮಾಣ ಮಾಡುತ್ತಿರುವ " ಬಿರುಮಳೆ" ಚಿತ್ರದಲ್ಲೂ ಸಹ. ನಾಯಕನಾಗಿ ನಟಿಸುತ್ತಿದ್ದಾರೆ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಿದ್ದವಾಗಿದೆ ,, ಒಂದು ವರ್ಷದ ನಂತರ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ನಟ ಜೆ ಡಿ ಆಕಾಶ್ ರವರ ಈ ಮೂರು ಚಿತ್ರಗಳು ಯಶಸ್ವಿಯಾಗಲಿ ಜೊತೆಗೆ ಮತ್ತಷ್ಟು ಚಿತ್ರಗಳ ಅವಕಾಶ ಸಿಗಲಿ ಎಂದು "ಸ್ವರೂಪ ಸಂದರ್ಶನ" ನ್ಯೂಸ್ ವೆಬ್ ಪೋರ್ಟಲ್ ಹಾಗೂ ಕನ್ನಡ ಯೂಟ್ಯೂಬ್ ವಾಹಿನಿ ಹಾರೈಸುತ್ತಿದೆ....
Social Plugin