ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ವಿಧಿಸಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ  ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಇದೆ  31 ಮೇ 2020 ರಿಂದ 2 ಜೂನ್ 2020 ರವರೆಗೆ ಜರುಗಬೇಕಾಗಿದ್ದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಪುಣ್ಯಾರಾಧನೆ  ರದ್ದುಪಡಿಸಲಾಗಿದೆ. 
ಇಂಚಗೇರಿ ಸಂಪ್ರದಾಯದ ಭಕ್ತಾದಿಗಳು ತಮ್ಮ ತಮ್ಮ ಮನೆಗಳಲ್ಲಿಯೇ ನಿತ್ಯ ನಿಯಮ, ಭಜನೆ,ಧ್ಯಾನ ಮಾಡುವ ಮೂಲಕ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಪುಣ್ಯಾರಾಧನೆ ಆಚರಿಸಬೇಕೆಂದು ಶ್ರೀ  ಕ್ಷೇತ್ರ ಇಂಚಗೇರಿ ಮಠದ ಪೀಠಾದಿಪತಿಗಳಾದ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು ತಿಳಿಸಿದ್ದಾರೆ.
ಈ ಬಾರಿ ಶ್ರೀ ಮಠದಲ್ಲಿ ಯಾವದೇ ಧಾರ್ಮಿಕ ಸಭೆ- ಸಮಾರಂಭಗಳು, ಜಾತ್ರಾ- ಮಹೋತ್ಸವಗಳು ಇರುವುದಿಲ್ಲ.
ಭಕ್ತಾದಿಗಳು ಶ್ರೀ ಮಠದಲ್ಲಿ ಜಮಾಯಿಸದೆ ಕೊರೂನಾ ನಿಯಂತ್ರಣಕ್ಕಾಗಿ ಸರಕಾರದ ಮಾರ್ಗ ಸೂಚಿಯನ್ನು  ಪಾಲಿಸಬೇಕೆಂದು  ತಿಳಿಸಿದ್ದಾರೆ.
                         ಜೈ ಜಗತ್ 


              ಜಾಯಿರಾತುಗಳು